Film News

ಕೊರೊನಾಗೆ ಬಲಿಯಾದ ನಟ ಸುದೀಪ್ ಅವರ ಸ್ನೇಹಿತ !

ಕೊರೋನ ಎರಡನೇ ಅಲೆ ಇಡಿ ದೇಶದಲ್ಲೇ ಬಯದ ವಾತಾವರಣ ನಿರ್ಮಾಣಮಾಡಿದೆ.ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.ದಿನೇ ದಿನೇ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.ಇದರಿಂದ ಎರಡನೇ ಅಲೆ ತಡೆಗಾಗಿ ಸೋಂಕಿತರ ಸಂಖ್ಯೆ ತಡೆಗಟ್ಟಲು ಆಯಾ ರಾಜ್ಯ ಸರ್ಕಾರಗಳು ಲಾಕ್ ಡೌನ್ ಜಾರಿಗೊಳಿಸಿವೆ.ರಾಜ್ಯದಲ್ಲೂ ಸಹ 14 ದಿನಗಳ ಲಾಕ್ ಡೌನ್ ಮಾಡಲಾಗಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಸಮಯ ನಿಗದಿ ಮಾಡಿದ್ದು,ಅನಾಗತ್ಯವಾಗಿ ಓಡಾಡುವವರ ವಿರುದ್ದ ಶಿಸ್ತಿನ ಕ್ರಮ ಜರುಗಿಸಲಾಗುತ್ತಿದೆ.

ಕೊರೋನದಿಂದಾಗಿ ಸ್ಯಾಂಡಲ್ ವುಡ್ ನಲ್ಲೂ ಸಹ ಸಾಲು ಸಾಲು ಸಾವು ಸಂಭವಿಸುತ್ತಿವೆ.ಕಿಚ್ಚ ಸುದೀಪ್ ಅವರ ಆಪ್ತ ಗೆಳೆಯ ದೊಡ್ಡ ನಿರ್ಮಾಪಕ ಕೊರೊನಾಗೆ ಬಲಿಯಾಗಿದ್ದು, ಗೆಳೆಯನ ಸಾವಿಗೆ ಸುದೀಪ್ ಕಣ್ಣೀರು ಹಾಕಿದ್ದಾರೆ.ಈಗಾಗಲೇ ಈ ಮಹಾಮಾರಿಗೆ ಹಲವು ದಿಗ್ಗಜರು ಬಲಿಯಾಗಿದ್ದಾರೆ.

ಇದೀಗ ಅಣ್ಣಯ್ಯ, ಏನೋ ವಂತರ, ಬಿಂದಾಸ್, ಹಾಗೂ ರನ್ನ ಚಿತ್ರದ ನಿರ್ಮಾಪಕರಾದ ಚಂದ್ರಶೇಖರ್ ಕಳೆದ 23 ದಿನಗಳ ಹಿಂದೆ ಕೋವಿಡ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ನೆನ್ನೆ ಇದ್ದಕಿದ್ದಂತೆ ಸ್ವಶಕೋಶದ ಉಂಟಾಗಿ, ನೆನ್ನೆ ರಾತ್ರಿ 11:30 ರ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.ತಮ್ಮ ಆತ್ಮೀಯ ಗೆಳೆಯನ,ಅದರಲ್ಲೂ ಚಿತ್ರರಂಗದ ಅನ್ನದಾತನ ಸಾವಿಗೆ ಸುದೀಪ್ ಕಂಬನಿ ಮೀಡಿದಿದ್ದು, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

Trending

To Top