ಇಂಡಿಯನ್ ಕ್ರಿಕೆಟ್ ಟೀಮ್ ಕಂಡ ಅದ್ಭುತವಾದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಅವರು ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದಾರೆ. ಇದು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಕ್ರಿಕೆಟ್ ಪ್ರಿಯರು ಧೋನಿಯವರ ಆಟದ ಶೈಲಿಯನ್ನು ಮರೆಯಲು ಸಾಧ್ಯವಿಲ್ಲ. ಭಾರತದ ಪರವಾಗಿ ಆಡಿ ಮೂರು ಐಸಿಸಿ ಟ್ರೋಫಿಗಳನ್ನು ಭಾರತಕ್ಕೆ ಗೆದ್ದು ತಂದ ಹೆಮ್ಮೆಯ ನಾಯಕ ಎಂಎಸ್ ಧೋನಿ. ಧೋನಿ ಅವರು ಶನಿವಾರ ಸಂಜೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಯಾವ ಸುಳಿವನ್ನು ಸಹ ಕೊಡದೇ ಧೋನಿ ಅವರು ನಿವೃತ್ತಿ ಘೋಷಿಸಿದಕ್ಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಧೋನಿ ಅವರು ಕ್ರಿಕೆಟ್ ಇಂದ ನಿವೃತ್ತಿ ಪಡೆದಿರುವ ಬಗ್ಗೆ ಹಲವಾರು ಸೆಲೆಬ್ರಿಟಿಗಳು ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ವಿದಾಯದ ಪಂದ್ಯವನ್ನೂ ಸಹ ಆಡದೆ ಧೋನಿ ಅವರು ನಿವೃತ್ತಿ ಘೋಷಿಸಿರುವುದಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. “ಅದ್ಭುತ ಕ್ರಿಕೆಟಿಗ ಆಗಿದ್ದರೆ ಜೊತೆಗೆ ಒಬ್ಬ ಶ್ರೇಷ್ಠ ನಾಯಕರಾಗಿದ್ದ ವ್ಯಕ್ತಿ ಹಠಾತ್ತನೆ ನಿವೃತ್ತಿ ಘೋಷಿಸಿದ್ದಾರೆ. ಅವರ ವಿದಾಯದ ಕೊನೆಯ ಪಂದ್ಯನ್ನಾದರೂ ನಾವೆಲ್ಲರೂ ನೋಡಬೇಕಿತ್ತು ಎಂದು ನನಗೆ ಅನ್ನಿಸುತ್ತಿದೆ. ಯಾರಿಗೂ ಕೂಡ ಅವರು ನಿವೃತ್ತಿ ಘೋಷಿಸುತ್ತಾರೆ ಎಂದು ಗೊತ್ತೇ ಆಗಲಿಲ್ಲ. ಅವರ ಅಭಿಮಾನಿಗಳಿಗೆ ನಿವೃತ್ತಿ ವಿಚಾರ ಗೊತ್ತಿತ್ತು ಎಂದು ಭಾವಿಸುತ್ತೇನೆ. ಜೊತೆಗೆ ಅವರಿಗೆ ವಿದಾಯ ಪಂದ್ಯದ ಜೊತೆ ಅವರನ್ನು ಕಳುಹಿಸಿ ಕೊಡಬೇಕು ಎಂದು ಹೇಳುತ್ತೇನೆ..” ಎಂದು ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ಮತ್ತು ಇನ್ನು ಕೆಲವು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಧೋನಿಯವರ ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡ ನಟಿ ಪ್ರಣಿತಾ ಸುಭಾಷ್ ಈ ವಿಷಯದ ಬಗ್ಗೆ ಪೋಸ್ಟ್ ಮಾಡಿದ್ದಾರೆ..”ಎಂಎಸ್ ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ 16 ವರ್ಷದಿಂದ ನಮ್ಮೆಲ್ಲರ ಖುಷಿ ಮತ್ತು ಹೆಮ್ಮೆಯ ಮೂಲವಾಗಿದಕ್ಕೆ ಧನ್ಯವಾದಗಳು. ಈ ವಿಚಾರ ಬಹಳ ಕಠಿಣವಾದದ್ದು..” ಎಂದು ಟ್ವೀಟ್ ಮಾಡಿದ್ದಾರೆ ಪ್ರಣೀತ..ಹಾಗೂ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ತರುಣ್ ಸುಧೀರ್ ಈ ವಿಷಯವಾಗಿ ಟ್ವೀಟ್ ಮಾಡಿ…”ನೀವು ನಮಗೆ ನಿಜವಾದ ಸ್ಫೂರ್ತಿ ಜೊತೆಗೆ ಉತ್ತಮ ನಾಯಕ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದಕ್ಕೆ ಧನ್ಯವಾದಗಳು..” ಎಂದು ಟ್ವೀಟ್ ಮಾಡಿದ್ದಾರೆ. ಮತ್ತು ನಿರ್ದೇಶಕ ಪವನ್ ಒಡೆಯರ್ ಕೂಡ ಟ್ವೀಟ್ ಮಾಡಿ..”ಧೋನಿ ಅಭಿಮಾನಿಗಳು ಎಂದು ಬಯಸದ ಕೊನೆಯ ದಿನ ಬಂದಿದೆ. ಆತ ನಿಜವಾದ ಚಾಂಪಿಯನ್..” ಎಂದು ಟ್ವೀಟ್ ಮಾಡಿದ್ದಾರೆ..
