Film News

ಪತ್ನಿಯ ಹುಟ್ಟುಹಬ್ಬಕ್ಕೆ ಹಾಡಿನ ಮೂಲಕ ವಿಶ್ ಮಾಡಿದ ಕಿಚ್ಚ

ಬೆಂಗಳೂರು: ನಟಸಾರ್ವಭೌಮ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಹುಟ್ಟುಹಬ್ಬಕ್ಕೆ ವಿಶೇವಾಗಿ ವಿಶ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ತೋರಿದ್ದಾರೆ. ’ಮಡದಿಯೋ, ಗೆಳತಿಯೋ, ಏನೆಂದು ಕರೆಯಲಿ ನಿನ್ನಾ’ಎಂಬ ಹಾಡನ್ನು ರಚಿಸಿ ವಿಶ್ ಮಾಡುವುದರ ಜೊತೆಗೆ ಇದನ್ನು ಯೂಟೂಬ್ ನಲ್ಲಿ ಸಹ ರಿಲೀಸ್ ಮಾಡಿದ್ದಾರೆ.

ಕಿಚ್ಚ ಸುದೀಪ್ ತಮ್ಮ ಪ್ರೀತಿಯ ಪತ್ನಿಯವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಪ್ರತೀ ವರ್ಷದಂತೆ ಪತ್ನಿಯ ಹುಟ್ಟುಹಬ್ಬಕ್ಕೆ ತುಂಬು ಹೃದಯದ ಶುಭ ಕೋರುತ್ತಿದ್ದ ಸುದೀಪ್ ಈ ಬಾರಿ ಪ್ರಿಯಾ ರವರ ಜೀವನದಲ್ಲಿ ಮರೆಯಲಾಗದಂತಹ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಕ್ರಿಯೇಷನ್ ಯೂಟೂಬ್ ಚಾನೆಲ್ ನಲ್ಲಿ ಸುದೀಪ್ ಹಾಡಿರುವ ಹುಟ್ಟುಹಬ್ಬದ ಗೀತೆ ಅಪ್ಲೋಡ್ ಮಾಡಲಾಗಿದ್ದು, ಇದನ್ನು ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇನ್ನೂ ಕಿಚ್ಚ ಸುದೀಪ್ ಮಲಯಾಳಂ ನಟಿ ಮಂಜು ವಾರಿಯರ್ ರವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದಕ್ಕೆ ಕಾರಣ ಇಲ್ಲಿದೇ ನೋಡಿ. ಸುದೀಪ್ ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ಪ್ಲಾನ್ ಮಾಡಿದ್ದ ಕಿಚ್ಚ ಅಭಿಮಾನಿಗಳು, ಮಲಾಯಳಂ ಖ್ಯಾತ ನಟಿ ಮಂಜು ವಾರಿಯರ್ ರವರಿಂದ ಕಾಮನ್ ಡಿಪಿ ರಿಲೀಸ್ ಮಾಡಿಸಲು ನಿರ್ಧಾರ ಮಾಡಿದ್ದರು. ಆದರೆ ಮಂಜು ವಾರಿಂiiರ್ ರವರು ಕಾಮನ್ ಡಿಪಿ ರಿಲೀಸ್ ಮಾಡಲು ತೊಂದರೆ ಪಡೆಬೇಕಾಯಿತು. ನೆಟ್ ವರ್ಕ ಸಮಸ್ಯೆಯ ಕಾರಣ ನೆಟ್ ವರ್ಕ ಇರುವ ಸ್ಥಳಕ್ಕೆ ಹೋಗಿ ಕಾಮನ್ ಡಿ.ಪಿ ರಿಲೀಸ್ ಮಾಡಿದ್ದು, ಕಿಚ್ಚ ಸುದೀಪ್ ಅವರ ಪೊಸ್ಟ್ ಗೆ ಧ್ಯಾಂಕ್ ಯೂ ಮೇಡಮ್, ನೀವು ತೆಗೆದುಕೊಂಡ ತೊಂದರೆ ಬಗ್ಗೆ ನಮಗೆ ತಿಳಿದಿದೆ. ನಿಮ್ಮ ಈ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

Trending

To Top