Film News

ಮಾಲಿವುಡ್ ನಟಿಯನ್ನು ಭೇಟಿ ಮಾಡಿ ಸುದೀಪ್ ದಂಪತಿ!

ಬೆಂಗಳೂರು: ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಅವರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದಂಪತಿ ಭೇಟಿಯಾಗಿದ್ದಾರೆ. ಈ ಕುರಿತು ಮಂಜು ವಾರಿಯರ್ ಹಾಗೂ ಸುದೀಪ್ ದಂಪತಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಬಹುನಿರೀಕ್ಷಿತ ಫ್ಯಾಂಟಮ್ ಚಿತ್ರದ ಶೂಟಿಂಗ್ ಕೇರಳದಲ್ಲಿ ನಡೆಯುತ್ತಿದ್ದು, ಕೆಲವು ದಿನಗಳಿಂದ ಚಿತ್ರತಂಡ ಹಾಗೂ ಸುದೀಪ್ ದಂಪತಿ ಕೇರಳದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಸುದೀಪ್ ಮಲಯಾಳಂ ಸ್ಟಾರ್ ನಟಿ ಮಂಜು ವಾರಿಯರ್ ರವರನ್ನು ಭೇಟಿ ಮಾಡಿ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಸುದೀಪ್ ಪತ್ನಿ ಪ್ರಿಯಾ ರವರು ಮೂಲತಃ ಕೇರಳದವರಾಗಿದ್ದು, ತನ್ನ ತವರು ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿರುವುದು ಅವರಿಗೆ ತುಂಬಾ ಸಂತಸ ತಂದಿದೆಯಂತೆ. ಜೊತೆಗೆ ನಟಿ ಮಂಜು ವಾರಿಯರ್ ರವರನ್ನು ಭೇಟಿ ಮಾಡಿದ್ದು, ಅವರ ಜೊತೆ ಸಮಯ ಕಳೆದಿರುವ ಸಮಯ ಅದ್ಬುತವಾದ ಕ್ಷಣಗಳು ಎಂದಿದ್ದಾರೆ. ಜೊತೆಗೆ ಮಂಜು ವಾರಿಯರ್ ರವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ಪ್ರಿಯಾ ರವರನ್ನು ಭೇಟಿ ಆಗಿರುವುದು ಸಂತಸದ ವಿಷಯವಾಗಿದ್ದು ಸುದೀಪ್ ಸರ್ ಕೂಡ ಈ ಸಮಯದಲ್ಲಿ ಇದಿದ್ದು ಇನಷ್ಟು ಸಂತಸ ತಂದಿದೆ ಎಂದಿದ್ದಾರೆ. ಇನ್ನೂ ಸುದೀಪ್ ರವರು ಸಹ ಟ್ವೀಟ್ ಮಾಡಿ ನಿಜಕ್ಕೂ ತುಂಬಾ ಸಂತೋಷವಾಗಿದೆ ಮೇಡಂ, ನಿಮ್ಮ ಕೆಲಸವನ್ನು ಯಾವಾಗಲು ಇಷ್ಟಪಡುತ್ತೇನೆ, ನಿಮ್ಮಂತಹ ಸರಳ ವ್ಯಕ್ತಿಯನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Trending

To Top