News

(video)2019ರಲ್ಲೇ ಸೆಟ್ಟೇರುತ್ತೆ ಅಮಿತಾಭ್ ಬಚ್ಚನ್ ಹಾಗು ಕಿಚ್ಚ ಸುದೀಪ್ ಅವರ ಹಿಂದಿ ಸಿನಿಮಾ! ರಿಷಬ್ ಶೆಟ್ಟಿ

rishab-shetty sudeep bacchan

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕನ್ನಡದ ಟಾಪ್ ನಿರ್ದೇಶಕ ರಿಷಬ್ ಶೆಟ್ಟಿ ಅವರು ಹಿರಿಯ ಸರ್ಕಾರೀ ಪ್ರಾರ್ಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ 2018 ಸಾಲಿನ ಬ್ಲಾಕ್ ಬಸ್ಟರ್ ಚಿತ್ರ ವೆಂದೇ ಹೇಳಬಹುದು. ಸದ್ಯ ರಿಷಬ್ ಶೆಟ್ಟಿ ಅವರು 2 ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಒಂದು ಬೆಲ್ ಬಾಟಮ್ ಇನ್ನೊಂದು ನಾಥುರಾಮ್. ಈ ಸಂದಾಯದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಿಚ್ಚ ಸುದೀಪ್ ಹಾಗು ಅಮಿತಾಬ್ ಬಚ್ಚನ್ ಅವರಿಗೆ ಒಂದು ಸಿನಿಮಾ ಮಾಡುತ್ತಾ ಇದ್ದಾರೆ. ಆ ಸಿನಿಮಾ 2019 ರಲ್ಲಿ ಶುರು ಆಗಲಿದೆ. ಅದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಇಂದು ಬೆಂಗಳೂರಿನಲ್ಲಿ ರಿಷಬ್ ಶೆಟ್ಟಿ ಅವರು ಹೀರೋ ಆಗಿ ನಟಿಸುತ್ತಿರುವ ಹೊಸ ಚಿತ್ರ ನಾಥುರಾಮ್ ಚಿತ್ರದ ಮುಹೂರ್ತ ಆಗಿದೆ. ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಮತ್ತೊಂದು ಚಿತ್ರ ಬೆಲ್ ಬಾಟಮ್ ಚಿತ್ರೀಕರಣ ಮುಗಿದು ಈಗ ಬಿಡುಗಡೆಗೆ ರೆಡಿ ಆಗಿದೆ. ಇವೆರಡು ಸಿನೆಮಾಗಳ ನಂತರ ಮುಂದಿನ ವರ್ಷ ರಿಷಬ್ ಶೆಟ್ಟಿ ಅವರು ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ.
ರಿಷಬ್ ಶೆಟ್ಟಿ ಅವರು ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಅಮಿತಾಬ್ ಬಚ್ಚನ್ ಅವರನ್ನು ಒಂದೇ ಸಿನಿಮಾದಲ್ಲಿ ತರುತ್ತಿದ್ದಾರೆ. ಈ ಚಿತ್ರದ ಟೈಟಲ್ ಇನ್ನು ಫೈನಲ್ ಆಗಿಲ್ಲ. ಈ ಚಿತ್ರಕ್ಕೆ ಕಿಚ್ಚ ಸುದೀಪ್ ಅವರು ಕೂಡ ತಮ್ಮ ಒಪ್ಪಿಗೆ ಕೊಟ್ಟಿದ್ದಾರೆ. ನಮ್ಮ ಕಿಚ್ಚ ಸುದೀಪ್ ಅವರು ಇನ್ನು ಮುಂದೆ ಇಂತಹ ಕಲಾತ್ಮಕ ಚಿತ್ರಗಳನ್ನು ಆಯ್ಕೆ ಮಾಡಬೇಕು! ಕಿಚ್ಚ ಸುದೀಪ್ ಅವರು ಒಂದು ಅದ್ಭುತ ಕನ್ನಡದ ಪ್ರತಿಭೆ, ಅವರಿಗೆ ಇರುವ ಟ್ಯಾಲೆಂಟಿಗೆ ಕಮರ್ಷಿಯಲ್ ಸಿನಿಮಾಗಳು ಸಾಕಾಗುವುದಿಲ್ಲ ಎಂದು ಬಹಳ ಜನಗರ ಅನಿಸಿಕೆ.
ರಿಷಬ್ ಶೆಟ್ಟಿ ಅವರು ಕನ್ನಡದ ಟಾಪ್ ನಿರ್ದೇಶಕರಲ್ಲಿ ಒಬ್ಬರು ಅಂತಾನೆ ಹೇಳಬಹುದು. ರಿಷಬ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ದೇಶಿಸಿ ಕನ್ನಡದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದ ಚಿತ್ರ ಅದು. ಇದಲ್ಲದೆ ರಿಷಬ್ ಶೆಟ್ಟಿ ಅವರಿಗೆ ತಮಿಳು, ಹಾಗು ಮಲಯಾಳಂ ಭಾಷೆಯಲ್ಲಿ ಕೂಡ ನಿರ್ದೇಶನ ಮಾಡಲು ಅವಕಾಶಗಳು ಬರುತ್ತಿವೆ. ಆದರೆ ರಿಷಬ್ ಶೆಟ್ಟಿ ಅವರು ಕನ್ನಡದಲ್ಲೇ ನಿರ್ದೇಶೇನ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top