Categories: Uncategorized

ಬಾಲಿವುಡ್ ನಲ್ಲಿ ನಟಿಸುವ ಬಗ್ಗೆ ಅಲ್ಲು ಅರ್ಜುನ್ ಶಾಕಿಂಗ್ ಹೇಳಿಕೆ…!

ಟಾಲಿವುಡ್ ನಲ್ಲಿ ಸ್ಟಾರ್‍ ನಟ ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಗೆ ದೊಡ್ಡ ಕ್ರೇಜ್ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಗಂಗೋತ್ರಿ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಬನ್ನಿ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ದಕ್ಕಿಸಿಕೊಂಡರು. ಇನ್ನೂ ಇತ್ತೀಚಿಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನೆಮಾ ಮಾತ್ರ ವರ್ಲ್ಡ್ ವೈಡ್ ಸೂಪರ್‍ ಹಿಟ್ ಆಗಿದ್ದು, ಸಿನೆಮಾ ಬಿಡುಗಡೆಯಾಗಿ ತಿಂಗಳುಗಳು ಕಳೆದರೂ ಇನ್ನೂ ಸಹ ಸಿನೆಮಾದ ಕ್ರೇಜ್ ಕಡಿಮೆಯಾಗಿಲ್ಲ. ಸಿನೆಮಾದ ಹಾಡುಗಳು, ಡೈಲಾಗ್ ಗಳು ಇಂದಿಗೂ ಸಹ ಪ್ರಚಲಿತದಲ್ಲಿದೆ. ಸದ್ಯ ಅಲ್ಲು ಅರ್ಜುನ್ ಬಾಲಿವುಡ್ ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದು, ಹಾಟ್ ಟಾಪಿಕ್ ಆಗಿದೆ.

ನಟ ಅಲ್ಲು ಅರ್ಜುನ್ ಇಲ್ಲಿಯವರೆಗೂ ತೆಲುಗು ಸಿನೆಮಾಗಳನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲೂ ಸಹ ನಟಿಸಿಲ್ಲ. ಆದರೆ ಪುಷ್ಪಾ ಸಿನೆಮಾ ಮಾತ್ರ ಪ್ಯಾನ್ ಇಂಡಿಯಾ ಸಿನೆಮಾ ಆದ ಹಿನ್ನೆಲೆಯಲ್ಲಿ ಅವರು ಎಲ್ಲಾ ಭಾಷೆಗಳಲ್ಲಿ ನಟಿಸುವಂತಾಗಿದೆ. ಇನ್ನೂ ಬಾಲಿವುಡ್ ನಲ್ಲಿ ಪುಷ್ಪಾ ಸಿನೆಮಾ ಬರೊಬ್ಬರಿ ನೂರು ಕೋಟಿ ಕಲೆಕ್ಷನ್ ಮಾಡಿದೆ. ಪುಷ್ಪಾ ಸಿನೆಮಾದ ಬಳಿಕ ಅಲ್ಲು ಅರ್ಜುನ್ ಬಾಲಿವುಡ್ ನಲ್ಲೂ ಸಹ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದರು, ಬಾಲಿವುಡ್ ನಲ್ಲೂ ಸಹ ಅಭಿಮಾನಿ ಬಳಗ ಇರುವ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಬಾಲಿವುಡ್ ನಲ್ಲಿ ಶೀಘ್ರವೇ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿತ್ತು. ಆದರೆ ಅಲ್ಲು ಅರ್ಜುನ್ ಈ ಕುರಿತು ನೇರವಾಗಿಯೇ ಬಾಲಿವುಡ್ ಪ್ರವೇಶದ ಬಗ್ಗೆ ಹೇಳಿದ್ದಾರೆ. ಸದ್ಯ ಅವರು ಕೊಟ್ಟ ಹೇಳಿಕೆಗಳು ಇದೀಗ ಸಿನಿರಂಗದ ಹಾಟ್ ಟಾಪಿಕ್ ಆಗಿದೆ.

ಸಾಮಾನ್ಯವಾಗಿ ದಕ್ಷಿಣ ಭಾರತದ ಸ್ಟಾರ್‍ ನಟರು ಹಾಗೂ ನಟಿಯರೂ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಸಕ್ಸಸ್ ಕಂಡರೇ, ನೇರವಾಗಿ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ. ಜೊತೆಗೆ ಕೆಲವೊಬ್ಬರಿಗೆ ಬಾಲಿವುಡ್ ನಲ್ಲಿ ಮಿಂಚುವುದು ಸಹ ಮಹದಾಸೆಯಾಗಿರುತ್ತದೆ. ಅಷ್ಟೇ ಅಲ್ಲದೇ ಅವರ ಭಾಷೆಯಲ್ಲೇ ಅಲ್ಲಿನ ಅಭಿಮಾನಿಗಳನ್ನು ರಂಜಿಸಬೇಕು ಎಂಬ ಗುರಿಯೂ ಸಹ ಇರುತ್ತದೆ. ಅಂತಹವರ ಸಾಲಿಗೆ ಅಲ್ಲು ಅರ್ಜುನ್ ಸಹ ಸೇರುತ್ತಾರೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ತೆಲುಗು ಸಿನಿರಂಗದಲ್ಲೇ ಉಳಿದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅವರು ಬಾಲಿವುಡ್ ಎಂಟ್ರಿಯ ಬಗ್ಗೆ ಮಾತನಾಡಿದ್ದು, ಸದ್ಯ ಬಾಲಿವುಡ್ ಗೆ ಎಂಟ್ರಿ ಕೊಡುವುದಿಲ್ಲ. ಆದರೆ ಅಗತ್ಯ ಬಂದರೇ ಬಾಲಿವುಡ್ ನಲ್ಲಿ ನಟಿಸುತ್ತೇನೆ ಎಂದು ನೇರವಾಗಿ ಹೇಳಿದ್ದಾರೆ.

ಈ ಕುರಿತು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಸದ್ಯ ನಾನು ಹಿಂದಿ ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಯೋಚನೆ ಮಾಡಿಲ್ಲ. ಅದು ನನ್ನ ಕಂಫರ್ಟಬಲ್ ಜೋನ್ ಗೂ ಹೊರಗಿರುವಂತಹ ವಿಚಾರವಾಗಿದೆ. ಆದರೇ ಅಗತ್ಯವೇನಾದರೂ ಬಂದರೇ ಬಾಲಿವುಡ್ ನಲ್ಲಿ ನಟಿಸುತ್ತೇನೆ. ಸದ್ಯ ಬಾಲಿವುಡ್ ಗೆ ಹೋಗುವ ಆಲೋಚನೆಯೇ ಇಲ್ಲ ಎಂದಿದ್ದಾರೆ. ಈ ಹಿಂದೆ ಪ್ರಿನ್ಸ್ ಮಹೇಶ್ ಬಾಬು ಸಹ ಬಾಲಿವುಡ್ ಎಂಟ್ರಿ ಬಗ್ಗೆ ಮಾತನಾಡಿದ್ದರು. ಸದ್ಯ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾದ ಬಗ್ಗೆ ದೇಶದಲ್ಲಿನ ಸಿನಿರಸಿಕರು ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಒಂಟಿಯಾಗಿರಲು ತುಂಬಾ ಬೋರ್ ಆಗುತ್ತಿದೆ, ಜೊತೆ ಬೇಕು ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಪೋಸ್ಟ್…!

ತೆಲುಗು ಕಿರುತೆರೆಯ ಸ್ಟಾರ್‍ ಅಂಡ್ ಹಾಟ್ ಆಂಕರ್‍ ಗಳಲ್ಲಿ ರಶ್ಮಿ ಒಬ್ಬರಾಗಿದ್ದು, ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ…

3 mins ago

ಅದ್ದೂರಿಯಾಗಿ ನಡೆದ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಮೆಹಂದಿ ಕಾರ್ಯಕ್ರಮ, ವೈರಲ್ ಆದ ಪೊಟೋಸ್…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಹನ್ಸಿಕಾ ಮೊಟ್ವಾನಿ ಹಾಗೂ ಖ್ಯಾತ ಉದ್ಯಮಿ ಸೊಹೈಲ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ.ಇದೀಗ ಆಕೆಯ ಮೆಹಂದಿ…

2 hours ago

ಬಾಲಕೃಷ್ಣ ನನಗೆ ದೇವರು ಕೊಟ್ಟ ಅಣ್ಣ ಎಂದ ದುನಿಯಾ ವಿಜಯ್, ಎಮೋಷನಲ್ ಆದ ವಿಜಯ್….!

ಅಖಂಡ ಸಿನೆಮಾದ ಬಳಿಕ ನಂದಮೂರಿ ಬಾಲಕೃಷ್ಣ ರವರ ಮುಂದಿನ ಸಿನೆಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಸದ್ಯ ಬಾಲಯ್ಯ…

3 hours ago

ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ಲೇಟೆಸ್ಟ್ ಪೊಟೋಸ್ ವೈರಲ್, ಆಕೆ ಈಗ ಹೇಗಿದ್ದಾರೆ ನೋಡಿದ್ದೀರಾ?

ಮೊದಲನೆ ಸಿನೆಮಾದ ಮೂಲಕವೇ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಳ್ಳುವ ನಟಿಯರಲ್ಲಿ ಕೆಲವರೇ ಇರುತ್ತಾರೆ. ಈ ಸಾಲಿಗೆ ಶ್ವೇತಾ ಬಸು ಸಹ…

5 hours ago

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್ ..…!

ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ನಟಿಯರಿಗೆ ಅನೇಖ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಹೆಚ್ಚಾಗಿ ಡಿಪ್ರೆಷನ್…

6 hours ago

ಎರಡನೇ ಮದುವೆ ರೂಮರ್ ಬಗ್ಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೀನಿಯರ್ ನಟಿ ಮೀನಾ…!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ದಶಕಗಳ ಕಾಲ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡುವ ಮೂಲಕ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ.…

7 hours ago