striker ಚಿತ್ರವನ್ನು ಪವನ್ ತ್ರಿವಿಕ್ರಮ್ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಈ ಚಿತ್ರದಲ್ಲಿ ಪ್ರವೀಣ್ ತೇಜ್, ಸೌರವ್ ಲೋಕೇಶ್, ಹಾಗು shilpa ಮಂಜುನಾಥ್ ಅವರು ನಟಿಸಿದ್ದಾರೆ. ಇತ್ತೀಚಿಗೆ ಸ್ಟ್ರೈಕರ್ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ! .ಸ್ಟ್ರೈಕರ್ ಇದು ಒಂದು ಕನ್ನಡ ಚಲನಚಿತ್ರ ವಾಗಿದ್ದು ಮತ್ತು ಕ್ರೈಮ್ ಥ್ರಿಲ್ಲರ್ ಸಿನಿಮಾ ಗಳ ಸಾಲಿನಲ್ಲಿ ಸೇರುತ್ತದೆ, ನೀವು ಕೇಳಿರುವ ಹಾಗೆ ಕೇರಮ್ ಒಂದು ಆಟ ಆಟದಂತೆಯೇ ಈ ಸಿನಿಮಾ ಕಥೆ ಹೊಂದಾಣಿಕೆ ಆಗುತ್ತದೆ. ಪೋಷಕರನ್ನು ಕಳೆದುಕೊಂಡ ಸಿದ್ದು (ಪ್ರವೀಣ್ ತೇಜ್) ಗೆಳೆಯರಾದ ವೆಂಕಿ (ಧರ್ಮಣ್ಣ) ಹಾಗೂ ರವಿ (ಅಶೋಕ್) ಜೊತೆ ಜೊತೆಯಲಿ ಸಂತೋಷವಾಗಿರುತ್ತಾರೆ, ಇದರ ಮಧ್ಯದಲ್ಲೇ ನಾಯಕ ಸಿದ್ದು ಮಾನಸಿಕ ಆರೋಗ್ಯದಿಂದ ಬಳಲುತ್ತಿರುತ್ತಾರೆ ಅದೇ ಸಮಯದಲ್ಲಿ ರವಿ ಕೊಲೆಯಾಗುತ್ತದೆ. ರವಿಯವರ ಕೊಲೆ ಯಾರು ಮಾಡಿದರು ಹೇಗೆ ಆಯಿತು ಯಾವ ರೀತಿ ಆಯಿತು ಇದಕ್ಕೆ ಮುಖ್ಯ ಕಾರಣ ಯಾರು ಕೊಲೆ ಮಾಡಿದವರು ಹೇಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬುವುದು ಸಿನಿಮಾದ ಕಥೆ.
ನಿರ್ದೇಶಕ ಪವನ್ ತ್ರಿವಿಕ್ರಮ್ ಅವರ ಕೈಚಳಕ ಇಲ್ಲಿ ಚೆನ್ನಾಗಿ ಮೂಡಿ ಬಂದಿದೆ ಹಳೆಯ ಕಥೆಗೆ ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿ ಕಥೆಯನ್ನು ಹೆಣೆದಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಭರತ್ ಮತ್ತು ಅವರ ಕಲಾವಿದರು ಜೊತೆಗೂಡಿ ಕೆಲಸ ನಿರ್ವಹಿಸಿದ್ದಾರೆ, ಈ ಚಿತ್ರಕ್ಕೆ ಕ್ರೈಂ ಸಸ್ಪೆನ್ಸ್ ತ್ರಿಲ್ಲರ್ ಹಾಗೂ ಅದಕ್ಕೆ ಬೇಕಾದ ಎಲ್ಲ ಅಂಶಗಳು ಸ್ಪಷ್ಟವಾಗಿ ಮೂಡಿಬಂದಿವೆ, ಒಂದು ಕೊಲೆಯ ಸುತ್ತ ಆಗುವ ಎಲ್ಲಾ ರೀತಿಯ ಸಿನಿಮಾಗಳು ಇದುವರೆಗೂ ಮೂಡಿಬಂದರು ಸ್ಟ್ರೈಕರ್ ಮಾತ್ರ ವಿಭಿನ್ನವಾಗಿ ತೋರಿಸಲಾಗಿದೆ. ಬಹಳ ಮುಖ್ಯವಾಗಿ ಪ್ರತಿಕ್ಷಣವೂ ಆಡಿಯನ್ಸ್ ಅನ್ನು ಎಳೆದು ಕೂರಿಸುವಷ್ಟು ಇಂಟರೆಸ್ಟಿಂಗ್ ಆಗಿದೆ ಸ್ಟೋರಿ.
ಇನ್ನು ನಟ ಪ್ರವೀಣ್ ತೇಜ್ ಅವರು ಚೂರಿ ಕಟ್ಟೆ ಯಂತಹ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದರು, ಇದೇ ಕಾರಣದಿಂದ ಪ್ರವೀಣ್ ಅವರಿಗೆ ಆಕ್ಟಿಂಗ್ ಬಹಳ ಸುಲಲಿತವಾಗಿ ಬಂದಿದೆ, ಇನ್ನುಳಿದ ಪಾತ್ರದಾರಿಗಳ ಸಿನಿಮಾಗೆ ಹೇಳಿ ಮಾಡಿಸಿದಂತೆ ನಟನೆಯನ್ನು ಪ್ರತಿಬಿಂಬಿಸಿದ್ದಾರೆ ಒಟ್ಟಾಗಿ ಸ್ಟ್ರೈಕರ್ ಚಿತ್ರ ಬಹಳ ಸುಂದರವಾಗಿ ಮೂಡಿ ಬಂದಿದ್ದು ಆಡಿಯನ್ಸ್ ನ ಗಮನ ಸೆಳೆದಿದೆ ಎಲ್ಲಾ ಕಡೆಯಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ ಈ ಚಿತ್ರ ಸರಿಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.
