ಕಬ್ಜ ಚಿತ್ರಕ್ಕೆ ಸ್ಟಾರ್ ನಟನ ಎಂಟ್ರಿ! ಯಾರೆಂಬುದು ಸರ್ಪ್ರೈಸ್

ಬೆಂಗಳೂರು: ಪ್ಯಾನ್ ಇಂಡಿಯಾ ಸಿನೆಮಾ ಮಾದರಿಯಲ್ಲಿಯೇ ನಿರ್ಮಾಣವಾಗುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರತಂಡ ಜ.೧೪ ರಂದು ಸರ್ಪ್ರೈಸ್ ನೀಡುವ ಕುರಿತು ತಿಳಿದ ವಿಚಾರವಾಗಿದ್ದು, ಈ ಸಪ್ರೈಸ್ ಗೆ ಕ್ಲೂ ಒಂದನ್ನು ನೀಡಿದೆ ಚಿತ್ರತಂಡದ ಮೂಲಗಳು.

ಭಾರಿ ಬಜೆಟ್ ಚಿತ್ರವಾದ ಕಬ್ಜ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರು ಎಂಟ್ರಿ ನೀಡಲಿದ್ದಾರೆ ಎನ್ನಲಾಗುತ್ತಿದ್ದು, ಆ ನಟ ಯಾರೆಂಬುದನ್ನು ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಕೊನೆ ಹಂತದ ಚಿತ್ರೀಕರಣ ಬಾಕಿಯಿದ್ದು, ಶೀಘ್ರದಲ್ಲಿಯೇ ಅದು ಸಹ ಪ್ರಾರಂಭವಾಗಲಿದೆಯಂತೆ.

ಈ ನಡುವೆ ಚಿತ್ರತಂಡ ಸಂಕ್ರಾಂತಿ ಹಬ್ಬದಂದು ಚಿತ್ರಕ್ಕೆ ಸಂಬಂಧಿಸಿದಂತೆ ಸರ್ಪ್ರೈಸ್ ನೀಡುವುದಾಗಿ ವಿಚಾರ ತಿಳಿಸಿತ್ತು. ಜ.14 ರಂದು ಕಬ್ಜ ಚಿತ್ರದಿಂದ ಸರ್ಪ್ರೈಸ್ ನೀಡಲಾಗುವುದು ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ, ಅಭಿಮಾನಿಗಳು ಟೀಸರ್ ರಿಲೀಸ್ ಆಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಅದರ ಬದಲು ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರು ಕಬ್ಜ ಚಿತ್ರದಲ್ಲಿ ನಟಿಸಲಿದ್ದಾರೆಂಬ ಮಾಹಿತಿ ದೊರೆತಿದ್ದು, ನಟ ಯಾರೆಂಬುದನ್ನು ತಿಳಿಯಲು ಜ.14 ವರೆಗೂ ಕಾಯಬೇಕಿದೆ.

ಇನ್ನೂ ನಿರ್ದೇಶಕ ಆರ್.ಚಂದ್ರು ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಭರ್ಜರಿ ಸೆಟ್ ನಲ್ಲಿ ಶೂಟಿಂಗ್ ನಡೆದಿದೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ಕಡೆ ಭರ್ಜರಿ ಸೆಟ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನೂ ಜನವರಿ ಮಾಹೆಯ ಅಂತ್ಯದಲ್ಲಿ ಚಿತ್ರದ ಉಳಿದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ.

ಇನ್ನೂ ಈ ಚಿತ್ರವನ್ನು ಎಂ.ಟಿ.ಬಿ ನಾಗರಾಜ್ ನಿರ್ಮಾಣ ಮಾಡುತ್ತಿದ್ದು, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿಡುಗಡೆಯಾಗುತ್ತಿದೆ. ಸಂಗೀತ ನಿರ್ದೇಶನ ರವಿ ಬಸ್ರೂರು ಮಾಡುತ್ತಿದ್ದು, ತೆಲುಗು ಸ್ಟಾರ್ ನಟ ಜಗಪತಿ ಬಾಬು, ರಾಹುಲ್ ಜಗಪತ್, ಜಾನ್ ಕೊಕೇನ್, ಕೋಟ ಶ್ರೀನಿವಾಸರಾವ್, ಜಯಪ್ರಕಾಶ್, ಸುಬ್ಬರಾಜು ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

Previous articleಹೆಣ್ಣು ಮಗಳನ್ನು ಪಡೆದ ಖುಷಿಯಲ್ಲಿ ಅನುಷ್ಕಾ-ಕೊಹ್ಲಿ ದಂಪತಿ
Next articleಮಾಸ್ಟರ್ ಚಿತ್ರದ ಟಿಕೆಟ್ ಗಾಗಿ ಕ್ಯೂ ನಿಂತ ಅಭಿಮಾನಿಗಳು