Film News

ಹೀರೋ ಚಿತ್ರಕ್ಕೆ ಶುಭ ಕೋರಿದ ಸ್ಟಾರ್ ನಟರು

ಬೆಂಗಳೂರು: ಕನ್ನಡ ನಿರ್ದೇಶಕ ಭರತ್ ರಾಜ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿರುವ ಹೀರೋ ಸಿನೆಮಾ ಇಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಚಿತ್ರಕ್ಕೆ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

ನಟ ರಿಷಭ್ ಶೆಟ್ಟಿ ನಾಯಕನಾಗಿ ಹಾಗೂ ನಿರ್ಮಾಪಕರಾಗಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ನಾಯಕಿಯಾಗಿ ಗಾನವಿ ಲಕ್ಷ್ಮಣ್ ಬಣ್ಣ ಹಚ್ಚಿದ್ದು, ಪ್ರಮೋದ್ ಶೆಟ್ಟಿ ಹಾಗೂ ಮಂಜುನಾಥ್ ಗೌಡ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಟ್ರೈಲರ್ ಮೂಲಕವೇ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿತ್ತು. ಇದೀಗ ಪ್ರೇಕ್ಷಕರಿಂದ ಉತ್ತಮವಾದ ರೆಸ್ಪಾನ್ಸ್ ಸಿಗುತ್ತಿದೆ ಎನ್ನಲಾಗಿದೆ.

ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರಕ್ಕೆ ಶುಭ ಕೋರಿದ್ದಾರೆ. ಟ್ರೈಲರ್ ಮೂಲಕವೇ ಕೂತೂಹಲ ಮೂಡಿಸಿರುವ ನಮ್ಮ ರಿಷಭ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು, ಚಿತ್ರತಂಡಕ್ಕೆ ಶುಭವಾಗಲಿ. ಎಲ್ಲರೂ ಚಿತ್ರಮಂದಿರಗಳಲ್ಲೇ ಸಿನೆಮಾ ನೋಡಿ ಹಾರೈಸಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ಟ್ವೀಟ್ ಮಾಡಿದ್ದಾರೆ ರಿಷಭ್ ಶೆಟ್ಟಿಯ ಹೀರೋ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಇನ್ನೂ ನಿರ್ದೇಶಕ ಪವನ್ ಒಡೆಯರ್ ಹೀರೋ ಚಿತ್ರತಂಡಕ್ಕೆ ಹಾಗೂ ರಿಷಭ್ ಶೆಟ್ಟಿಗೆ ಒಳ್ಳೆಯದಾಗಲಿ ಎಂದು, ಕಾರ್ತಿಕ್‌ಗೌಡ ಹೀರೋ ರಾರಾಜಿಸಲಿ, ಶೆಟ್ರೆ ಗೆಲುವು ನಿಮ್ಮದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಶೀತಲ್ ಶೆಟ್ಟಿ ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ. ನಡೀರಿ, ಹೀರೋ ನೋಡ್ಕೊಂಡು ಬರೋಣ, ಒಳ್ಳೆದಾಗಲಿ, ರಿಷಭ್ ಶೆಟ್ಟಿ ನಿಮಗೆ, ಹೀರೋ ಕಂಬಳದ ಹೋರಿ ಕಣಂಗ್ ನುಗ್ಗಲಿ ಗೆಲ್ಲಲಿ ಎಂದು ಟ್ವೀಟ್ ಮಾಡಿದ್ದಾರೆ.

Trending

To Top