ಸ್ಟಾರ್ ಕಮೆಡಿಯನ್ ಗೀತಾಸಿಂಗ್ ಗೆ ಸಂಕಷ್ಟ, ಸ್ವಂತದವರೇ ಮೋಸ ಮಾಡಿದರು ಎಂದ ನಟಿ…!

ಸೌತ್ ಸಿನಿರಂಗದಲ್ಲಿ ಅನೇಕ ಸಿನೆಮಾಗಳಲ್ಲಿ ಕಮೆಡಿಯನ್ ಆಗಿ ಸ್ಟಾರ್‍ ಕಮೆಡಿಯನ್ ಆಗಿ ಖ್ಯಾತಿ ಪಡೆದುಕೊಂಡ ಗೀತಾಸಿಂಗ್ ಇದೀಗ ಸಂಕಷ್ಟದಲ್ಲಿದ್ದಾರಂತೆ. ಆಕೆಯ ಹೆಸರು ಹೇಳಿದ ತಕ್ಷಣ ಸಾಮಾನ್ಯವಾಗಿ ಕಿತಕಿತಲು ಸಿನೆಮಾ ನೆನಪಿಗೆ ಬರುತ್ತದೆ. ಈ ಸಿಎನಮಾದಲ್ಲಿ ಅಲ್ಲರಿ ನರೇಶ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಈವಿವಿ ಸತ್ಯನಾರಾಯಣ ಸಾರಥ್ಯದಲ್ಲಿ ಮೂಡಿಬಂದ ಈ ಸಿನೆಮಾ ಅಂದು ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈ ಸಿನೆಮಾದ ಮೂಲಕವೇ ಆಕೆಗೆ ಸ್ಟಾರ್‍ ಡಮ್ ಸಹ ದಕ್ಕಿದೆ. ಇದೀಗ ಆಕೆ ಹಂಚಿಕೊಂಡ ಕೆಲ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ಅಲ್ಲರಿ ನರೇಶ್ ಜೊತೆಗೆ ತೆರೆಹಂಚಿಕೊಂಡ ಗೀತಾಸಿಂಗ್ ಕಿತಕಿತಲು ಸಿನೆಮಾದ ಬಳಿಕ ಅನೇಕ ಸ್ಟಾರ್‍ ಸಿನೆಮಾಗಳಲ್ಲೂ ಸಹ ಕಮೆಡಿಯನ್ ಆಗಿ ಕಾಣಿಸಿಕೊಂಡರು. ಆದರೆ ಇತ್ತೀಚಿಗೆ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ತನ್ನ ಜೀವನದಲ್ಲಿ ನಡೆದಂತಹ ಕೆಲವೊಂದು ಸಂಘಟನೆಗಳ ಬಗ್ಗೆ ಮಾತನಾಡಿದ್ದಾರೆ. ತನಗೆ ಸಿನಿರಂಗದಲ್ಲಿ ಅವಕಾಶಗಳು ಬರುತ್ತಿಲ್ಲ. ಆ ಕಾರಣದಿಂದಲೇ ತಾನು ನಟಿಸುತ್ತಿಲ್ಲ ಎಂದಿದ್ದಾರೆ. ಜೊತೆಗೆ ಸಿನಿರಂಗದಲ್ಲಿ ನನಗೆ ಯಾವುದೇ ಸಪೋರ್ಟ್ ಸಹ ಇಲ್ಲ ಎಂದು ಆಸಕ್ತಿಕರವಾದ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ಸಿನಿರಂಗದಲ್ಲಿ ಪುರುಷರ ಆಧಿಪತ್ಯದ ಬಗ್ಗೆ ಸಹ ಮಾತನಾಡಿದ್ದಾರೆ.

ಸದ್ಯ ಸಿನಿರಂಗದಲ್ಲಿ ಕೇವಲ ಪುರುಷರ ಅಧಿಪತ್ಯ ಸಾಗುತ್ತಿದೆ. ಸಿನೆಮಾಗಳಲ್ಲಿ ಫಿಮೇಲ್ ಆಕ್ಟರ್‍ ಗಳು ಜಾಸ್ತಿ ಕಾಣಿಸುವುದಿಲ್ಲ. ಬಹಳಷ್ಟು ಪುರುಷರೇ ಇರುತ್ತಾರೆ. ಮಹಿಳಾ ಕಲಾವಿದರಿಗೆ ಅವಕಾಶಗಳೇ ದೊರೆಯುತ್ತಿಲ್ಲ. ಈ ಹಿಂದೆ ತುಂಬಾ ಮಂದಿ ಮಹಿಳಾ ಕಲಾವಿದರಿದ್ದರು. ಆದರೆ ಇದೀಗ ತೆರೆಕಾಣುವಂತಹ ಸಿನೆಮಾಗಳಲ್ಲಿ ಮಹಿಳಾ ಕಲಾವಿದರು ಕಾಣಿಸುತ್ತಿಲ್ಲ. ಅಷ್ಟರ ಮಟ್ಟಿಗೆ ಸಿನಿರಂಗದಲ್ಲಿ ಪುರುಷರ ಅಧಿಪತ್ಯ ಸಾಗುತ್ತಿದೆ ಎಂದಿದ್ದಾರೆ. ಅಷ್ಟೇಅಲ್ಲದೇ ಸಿನಿರಂಗದಲ್ಲಿ ಸಪೋರ್ಟ್ ಹಾಗೂ ನಂಬಿದ ಸಂಬಂಧಿಕರ ಸಪೋರ್ಟ್ ಇಲ್ಲದೇ ನಾನು ಸಿಂಗಲ್ ಆಗಿ ಹೋರಾಟ ಮಾಡುತ್ತಿದ್ದೇನೆ. ನಾನು ನಂಬಿದವರೇ ನನಗೆ ಮೋಸ ಮಾಡಿದರು. ಹಣ ಅವಸರ ಇದ್ದರೇ ಮಾತ್ರ ನನ್ನ ಕುಟುಂಬಕ್ಕೆ ನಾನು ನೆನಪಿಗೆ ಬರುತ್ತೇನೆ. ನನ್ನ ಸ್ವತಂದವರೇ ಹಣಕ್ಕಾಗಿ ನನ್ನನ್ನು ಬಳಸಿಕೊಂಡರು ಎಂದು ಭಾವುಕರಾಗಿದ್ದಾರೆ.

ಅಷ್ಟೇಅಲ್ಲದೇ ಒಬ್ಬ ಕ್ಯಾರೆಕ್ಟರ್‍ ಆರ್ಟಿಸ್ಟ್ ಹತ್ತಿರ ಚೀಟಿಯನ್ನು ಸಹ ಹಾಕಿದ್ದು, ಆಕೆಗೆ ಸುಮಾರು ಆರು ಕೋಟಿಯಷ್ಟು ಆ ಕ್ಯಾರೆಕ್ಟರ್‍ ಆರ್ಟಿಸ್ಟ್ ಮೋಸ ಮಾಡಿದ್ದಾರಂತೆ. ಒಂದು ಸಿನೆಮಾಗಳಲ್ಲಿ ಆಫರ್‍ ಗಳಿಲ್ಲದೇ, ಮಾಡಲು ಯಾವುದೇ ಕೆಲಸವಿಲ್ಲ, ತುಂಬಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ, ಕೆಲವೊಮ್ಮೆ ಆತ್ಮಹತ್ಯೆಗೂ ಸಹ ಯತ್ನಿಸಿದ್ದೆ. ಆ ಸಮಯದಲ್ಲಿ ನನ್ನ ಸ್ನೇಹಿತೆ ಕಾಪಾಡಿದಳು. ಸದ್ಯ ನನಗೆ ನನ್ನ ಸ್ನೇಹಿತೆಯರೇ ಎಲ್ಲಾ ಆಗಿದ್ದಾರೆ. ಸದ್ಯ ಆಕೆಯ ಕೆಲವೊಂದು ಹೇಳಿಕೆಗಳು ಸಂಚಲನ ಸೃಷ್ಟಿ ಮಾಡಿದೆ.

Previous articleಸ್ಟಾರ್ ನಟ ಧನುಷ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಹಾಕಿದ ಕಣ್ಸನ್ನೆ ಸುಂದರಿ, ಧನುಷ್ ರನ್ನು ಟಾರ್ಗೆಟ್ ಮಾಡಿದ ಪ್ರಿಯಾ ವಾರಿಯರ್…!
Next articleಕೆಂಪು ಬಣ್ಣದ ಸೀರೆಯಲ್ಲಿ ಹಾಟ್ ಟ್ರೀಟ್ ಕೊಟ್ಟ ಜಾನ್ವಿ, ಎದೆಯ ಸೌಂದರ್ಯದೊಂದಿಗೆ ಹಲ್ ಚಲ್ ಸೃಷ್ಟಿ ಮಾಡಿದ ಬ್ಯೂಟಿ…!