ನಾಲ್ಕು ವರ್ಷದ ಪ್ರೀತಿಯ ವಿಚಾರ ಹೊರಹಾಕಿದ ಹಾಸ್ಯ ನಟ ಆಲಿ, ವೈರಲ್ ಆದ ಹೇಳಿಕೆಗಳು….!

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ಹಾಸ್ಯ ನಟ ಆಲಿ ಅನೇಕ ಸಿನೆಮಾಗಳ ಮೂಲಕ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಆತ ತನ್ನ ಮೊದಲನೇ ಪ್ರೀತಿಯ ಬಗ್ಗೆ ಹೇಳಿದ್ದಾರೆ. ಮೊದಲಿಗೆ ಆತ ಎಂದು ಪ್ರೀತಿಯಲ್ಲಿ ಬಿದ್ದರು, ಆ ಹುಡುಗಿ ಅಂದರೇ ಆಲಿ ಗೆ ಎಷ್ಟು ಇಷ್ಟ ಎಂಬೆಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಆತನ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸ್ಟಾರ್‍ ಕಮಡಿಯನ್ ಆಲಿ ತನ್ನ ವೈಯುಕ್ತಿಕ ವಿಚಾರವೊಂದನ್ನು ಹೊರಹಾಕಿದ್ದಾರೆ. ತನ್ನ ಮೊದಲನೇ ಪ್ರೀತಿಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ತೆರೆಯ ಮೇಲೆ ನಗಿಸುವಂತಹ, ರಂಜಿಸುವಂತಹ ಅನೇಕ ನಟರ ಜೀವನದಲ್ಲೂ ಸಹ ಎಲ್ಲರಂತೆ ಅನೇಕ ಘಟನೆಗಳು ನಡೆದಿರುತ್ತವೆ. ಆದರೆ ಆ ವಿಚಾರಗಳು ಸಂಪೂರ್ಣವಾಗಿ ಪ್ರೇಕ್ಷಕರಿಗೆ ತಿಳಿದಿರುವುದಿಲ್ಲ. ಇದೀಗ ಆಲಿ ಸಹ ಇಲ್ಲಿಯವರೆಗೂ ಯಾರಿಗೂ ತಿಳಿಯದಂತಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆಲಿ ತನ್ನ ಫಸ್ಟ್ ಲವ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಲಿ ಲವ್ ಸ್ಟೋರಿ ತುಂಬಾ ಇಂಟ್ರಸ್ಟಿಂಗ್ ಆಗಿದ್ದು, ಇದೀಗ ಅದು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದೆ.

ಸಂದರ್ಶನದಲ್ಲಿ ಆಲಿ ಮಾತನಾಡುತ್ತಾ ಆಲಿಗೆ 17 ವರ್ಷ ವಯಸ್ಸಿನಲ್ಲಿರುವಾಗ ಒಂದು ಹುಡುಗಿಯೊಂದಿಗೆ ಪರಿಚಯವಾಗಿತ್ತಂತೆ. ಆಕೆ ಬೇರೆ ಯಾರೂ ಅಲ್ಲ ಆತನ ಪಕ್ಕದ ಮನೆಯವಳಾಗಿದ್ದರಂತೆ. ಆಕೆಯ ಸುಂದರವಾದ ಕಣ್ಣು, ಉದ್ದನೆಯ ಜಡೆ ಆಲಿಯನ್ನು ಆಕರ್ಷಣೆ ಮಾಡಿತ್ತಂತೆ. ಆಲಿಯನ್ನು ನೋಡಿದ ಪ್ರತಿಬಾರಿ ಕ್ಯೂಟ್ ಸ್ಮೈಲ್ ಕೊಡುತ್ತಿದ್ದರಂತೆ. ಒಂದು ದಿನ ಮಳೆಯಲ್ಲಿ ಆಕೆ ಬರುತ್ತಿದ್ದಾಗ ನಾನು ಚತ್ರಿಯನ್ನು ತೆಗೆದುಕೊಂಡು ಹೋಗಿದ್ದೆ. ಅದೇ ಸಮಯದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಅಭಿಪ್ರಾಯ ಸಹ ಏರ್ಪಟ್ಟಿದೆ. ಈ ಪ್ರೇಮ ಕಥೆ ಸುಮಾರು ನಾಲ್ಕು ವರ್ಷಗಳ ಕಾಲ ನಡೆಯಿತು. ಬಳಿಕ ಆಕೆಯನ್ನು ಮದುವೆಯಾಗಬೇಕೆಂದು ನಿರ್ಣಯ ತೆಗೆದುಕೊಂಡು ಆಲಿ ತನ್ನ ತಾಯಿಯ ಬಳಿ ವಿಚಾರ ತಿಳಿಸಿದ್ದರಂತೆ. ಆಕೆಗೆ ತಂದೆಯಿಲ್ಲ, ಆಕೆಯನ್ನೇ ಮದುವೆ ಆಗುತ್ತೇನೆ ಎಂದು ಆಲಿ ತಾಯಿಗೆ ಹೇಳಿದಾಗ ಆಕೆ ಸಹ ಒಪ್ಪಿದ್ದರಂತೆ. ಒಂದು ದಿನ ಆಲಿ ತಾಯಿ ಹಾಗೂ ತಮ್ಮ ಸಿನೆಮಾಗೆ ಹೋಗಿದ್ದರಂತೆ, ಅದೇ ಥಿಯೇಟರ್‍ ಗೆ ಆಲಿ ಪ್ರೀತಿಸಿದ ಹುಡುಗಿ ಸಹ ಹೋಗಿದ್ದರಂತೆ. ಬಳಿಕ ಮನೆಗೆ ಬಂದ ಆಲಿ ತಾಯಿ ಯಾವುದೇ ಕಾರಣಕ್ಕೂ ಆ ಹುಡುಗಿಯನ್ನು ಮದುವೆಯಾಗಬಾರದು ಎಂದು ಹೇಳಿದ್ದರಂತೆ. ಬಳಿಕ ಆಲಿ ಸಹ ಆಕೆಯಿಂದ ದೂರವಾದರಂತೆ ಸದ್ಯ ಆಲಿ ಹೇಳಿದ ಲವ್ ಸ್ಟೋರಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದಾದ ಬಳಿಕ ಆಲಿ ಜುಬೇದಾ ಎಂಬಾಕೆಯನ್ನು ಮದುವೆಯಾದರು. ಮೊದಲಿಗೆ ಜುಬೇದ ಅಕ್ಕನನ್ನು ನೋಡಲು ಆಲಿ ಹೋಗಿದ್ದರೇ, ಆಕೆ ಆಲಿಯನ್ನು ರಿಜೆಕ್ಟ್ ಮಾಡಿದ್ದರಂತೆ. ಬಳಿಕ ಆಲಿ ಜುಬೇದರನ್ನು ಮದುವೆಯಾದರು. ಸದ್ಯ ಆಲಿ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇತ್ತಿಚಿಗಷ್ಟೆ ಆಲಿ ದೊಡ್ಡ ಮಗಳಾದ ಫಾತಿಮಾಗೆ ಅದ್ದೂರಿಯಾಗಿ ಮದುವೆ ಸಹ ಮಾಡಿದರು.

Previous articleಮತ್ತೆ ಮದುವೆಯಾಗುವ ಉದ್ದೇಶವಿದೆ, ಜೀವನ ನಿರ್ವಹಣೆಗಾಗಿ ಸಿನೆಮಾಗಳಲ್ಲಿ ನಟಿಸುತ್ತಿದ್ದೇನೆ ಎಂದ ಕರಾಟೆ ಕಲ್ಯಾಣಿ….!
Next articleಶಾಕಿಂಗ್ ಪೋಸ್ಟ್ ಮಾಡಿದ ಹಾಟ್ ಆಂಕರ್, ನಾನು ತುಂಬಾ ನೋವು ಪಟ್ಟಿದ್ದೇನೆ ಎಂದ ಅನಸೂಯ…!