ಕೊಂಚ ವಿರಾಮ ಬೇಕೆಂದ ಸ್ಟಾರ್ ಆಂಕರ್ ಸುಮ, ಯಾಂಕರಿಂಗ್ ನಿಂದ ದೂರವುಳಿಯಲಿದ್ದಾರೆಯೇ ಸುಮ?

ತೆಲುಗು ಕಿರುತೆರೆಯಲ್ಲಿ, ಅನೇಕ ಸ್ಪೇಷಲ್ ಈವೆಂಟ್ ಗಳಲ್ಲಿ ಸಖತ್ ಸದ್ದು ಮಾಡುವ ಆಂಕರ್‍ ಗಳಲ್ಲಿ ಸುಮ ಮೊದಲನೇ ಸ್ಥಾನದಲ್ಲಿರುತ್ತಾರೆ. ಸ್ಟಾರ್‍ ಗಳ ಸಿನೆಮಾಗಳ ಪ್ರೀ ರಿಲೀಸ್ ಈವೆಂಟ್, ಅನೇಕ ಅವಾರ್ಡ್‌ಗಳ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಲು ಸುಮ ಮೊದಲ ಆಯ್ಕೆಯಾಗಿರುತ್ತಾರೆ. ಇದೀಗ ಆಕೆ ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದು, ಅದರಿಂದ ಆಕೆ ಆಂಕರಿಂಗ್ ನಿಂದ ದೂರ ಉಳಿಯಲಿದ್ದಾರೆಯೇ ಎಂಬ ಅನುಮಾನಗಳು ಹರಿದಾಡುತ್ತಿದೆ. ಅದಕ್ಕೇ ಕಾರಣ ಏನು ಎಂಬುದು ಮುಂದೆ ತಿಳಿಯಿರಿ.

ದೇಶದ ವಿಶೇಷ ಹಬ್ಬಗಳು, ಆಚರಣೆಗಳು ಬಂದ ಸಂದರ್ಭದಲ್ಲಿ ತೆಲುಗಿನ ಜಬರ್ದಸ್ಟ್ ಟೀಂ ಸೇರಿದಂತೆ ಕಿರುತೆರೆಯ ಅನೇಕ ಕಲಾವಿದರು ಸ್ಪೇಷಲ್ ಈವೆಂಟ್ಸ್ ಗಳನ್ನು ಆಯೋಜನೆ ಮಾಡುತ್ತಿರುತ್ತಾರೆ. ಇದೀಗ ಹೊಸ ವರ್ಷದ ಅಂಗವಾಗಿ ಸ್ಪೇಷಲ್ ಈವೆಂಟ್ ಆಯೋಜನೆ ಮಾಡಿದ್ದು, ಅದಕ್ಕೆ ವೇರ್‍ ಈಜ್ ದಿ ಪಾರ್ಟಿ ಎಂಬ ಹೆಸರನ್ನು ಇಡಲಾಗಿದೆ. ಈ ಶೋ ಅನ್ನು ಸುಮ ಹೋಸ್ಟ್ ಮಾಡುತ್ತಿದ್ದಾರೆ. ಈ ಶೋ ನಲ್ಲಿ ಹೈಪರ್‍ ಆದಿ, ಆಟೋ ರಾಂಪ್ರಸಾದ್, ನರೇಶ್, ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದಾರೆ. ಜತೆಗೆ ಸೀನಿಯರ್‍ ನಟಿ ಯಮುನಾ ಸಹ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಡಿಸೆಂಬರ್‍ 31 ರಂದು ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಪ್ರೊಮೋ ಇದೀಗ ಬಿಡುಗಡೆಯಾಗಿದ್ದು, ಕಾರ್ಯಕ್ರಮದ ಮೇಲೆ ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ.

ಇನ್ನೂ ಈ ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಎಂಜಾಯ್ ಮಾಡಿದ್ದಾರೆ. ಅನೇಕ ಸ್ಕಿಟ್ ಗಳನ್ನು ಸಹ ವೇದಿಕೆಯ ಮೇಲೆ ಶೋ ಮಾಡಿದ್ದರು. ಮ್ಯಾಜಿಕ್ ಶೋ ಸಹ ಆಯೋಜಿಸಲಾಗಿತ್ತು. ಕೊನೆಯಲ್ಲಿ ಕಿರುತೆರೆಯ ನಟ/ನಟಿಯರು ಹಾಗೂ ಜಬರ್ದಸ್ತ್ ಟೀಂ ಸಹ ಆಂಕರ್‍ ಸುಮ ರವರನ್ನು ಸನ್ಮಾನಿಸಿದರು. ಈ ವೇಳೆ ಸುಮ ತಮ್ಮ ಜೀವನದ ಕೆಲವೊಂದು ವಿಚಾರಗಳನ್ನು ಗುರ್ತಿಸಿಕೊಂಡರು. ಈ ವೇಳೆ ಮಾತನಾಡಿದ ಸುಮ ನಾನು ಕೇರಳದಲ್ಲಿ ಹುಟ್ಟಿ, ಇಲ್ಲಿಯವರೆಗೂ ಬಂದಿದ್ದೇನೆ. ಅದು ತೆಲುಗು ಪ್ರೇಕ್ಷಕರ ಅಭಿಮಾನ, ಪ್ರೀತಿಯ ಕಾರಣದಿಂದಲೇ ಎಂದಿದ್ದಾರೆ. ನಿಮ್ಮ ಪ್ರೀತಿಯ ಅಭಿಮಾನ ಇಲ್ಲದೇ ಇದ್ದರೇ ನಾನು ಇಲ್ಲಿಯವರೆಗೆ ಬರಲು ಆಗುತ್ತಿರಲಿಲ್ಲ ಎಂದು ಸುಮ ಎಮೋಷನಲ್ ಆಗಿದ್ದಾರೆ. ಜೊತೆಗೆ ನಾನು ಕೆಲ ಸಮಯ ವಿರಾಮ ಪಡೆದುಕೊಳ್ಳಲು ಯೋಚನೆ ಮಾಡುತ್ತಿದ್ದೇನೆ ಎಂದು ಹೊಸ ಬಾಂಬ್ ಸಹ ಸಿಡಿಸಿದ್ದಾರೆ. ಕಣ್ಣೀರಾಕುತ್ತಾ ಈ ಹೇಳಿಕೆಯನ್ನು ನೀಡಿದ್ದಾರೆ.

ಸದ್ಯ ಆಂಕರ್‍ ಸುಮ ನೀಡಿದ ಹೇಳಿಕೆಯಿಂದಾಗಿ ಆಕೆ ಆಂಕರಿಂಗ್ ನಿಂದ ದೂರವುಳಿಯಲಿದ್ದಾರೆ ಎಂಬ ಅನುಮಾನಗಳೂ ಸಹ ಶುರುವಾಗಿದೆ. ಇನ್ನೂ ಅನೇಕ ವರ್ಷಗಳಿಂದ ಸ್ಟಾರ್‍ ಆಂಕರ್‍ ಆಗಿ ಅನೇಕ ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. ಇನ್ನೂ ನಿಜಕ್ಕೂ ಸುಮ ಆಂಕರಿಂಗ್ ನಿಂದ ದೂರ ಉಳಿಯಲಿದ್ದಾರೆಯೇ ಎಂಬ ಕ್ಲಾರಿಟಿಗಾಗಿ ಡಿ.31 ರಂದು ಈ ಕಾರ್ಯಕ್ರಮ ಪ್ರಸಾರವಾದ ಬಳಿಕ ತಿಳಿಯಲಿದೆ.

Previous articleಸುಶಾಂತ್ ಸಿಂಗ್ ದು ಆತ್ಮಹತ್ಯೆಯಲ್ಲ, ಸಿಬಿಐ ನವರು ಹೊಸ ಸಾಕ್ಷಿಯನ್ನು ಪರಿಗಣನೆಗೆ ತೆಗೆದುಕೊಳ್ಳಿ ಎಂದ ಸುಶಾಂತ್ ಸಹೋದರಿ…!
Next articleಶೀಘ್ರದಲ್ಲೇ ಜಾನ್ವಿ ಕಪೂರ್ ಸೌತ್ ಸಿನಿರಂಗಕ್ಕೆ ಎಂಟ್ರಿ, ಆ ಸಿನೆಮಾದಲ್ಲಿ ಆಕೆ ನಟಿಸಲಿದ್ದಾರೆಯೇ?