ವೈರಲ್ ಆಗುತ್ತಿರುವ ಸ್ಟಾರ್ ಆಂಕರ್ ಅನಸೂಯ ವೆಕೇಷನ್ ಪಿಕ್ಸ್…!

ತೆಲುಗಿನ ಸ್ಟಾರ್‍ ಆಂಕರ್‍ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಅನಸೂಯ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ಫಾರಿನ್ ಗೆ ತೆರಳಿದ್ದು, ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕಿರುತೆರೆಯಲ್ಲಿ ಮಿಂಚಿದ ನಟಿ ಇದೀಗ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಮಿಂಚುತ್ತಿದ್ದಾರೆ.

ನಟಿ ಕಂ ಆಂಕರ್‍ ಅನಸೂಯ ಜಬರ್ದಸ್ತ್ ಶೋ ಮೂಲಕ ಫೇಮ್ ಪಡೆದುಕೊಂಡ ನಟಿಯಾಗಿದ್ದಾರೆ. ಅನೇಕ ಕಿರುತೆರೆ ಶೋಗಳ ಮೂಲಕ ಇದೀಗ ಬೆಳ್ಳಿಪರದೆಯಲ್ಲೂ ಸಹ ಮಿಂಚುತ್ತಿದ್ದಾರೆ. ಕಿರುತೆರೆಯಲ್ಲೂ ಸಹ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನು ಸೆಳೆಯುತ್ತಿದ್ದ ಈಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಗ್ಲಾಮರ್‍ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಆಕೆಯ ಪಾತ್ರಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಬದಲಿಗೆ ಆಕೆ ಬಲವಾದ ಪಾತ್ರ ಇದ್ದರೇ ಸಾಕು ಎಂತಹ ಪಾತ್ರದಲ್ಲಾದರೂ ಸಹ ನಟಿಸಲು ಸಿದ್ದರಿರುತ್ತಾರೆ. ಇನ್ನೂ ದಿನದಿಂದ ದಿನಕ್ಕೇ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ.

ಇನ್ನೂ ಪುಷ್ಪಾ ಸಿನೆಮಾದಲ್ಲಿ ನಟಿ ಅನಸೂಯ ಸುನೀಲ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಪುಷ್ಪಾ 2 ಸಿನೆಮಾದಲ್ಲೂ ಸಹ ಅನಸೂಯ ಮತಷ್ಟು ಪವರ್‍ ಪುಲ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇತ್ತೀಚಿಗಷ್ಟೆ ತೆರೆಕಂಡ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಗಾಡ್ ಫಾದರ್‍ ಸಿನೆಮಾದಲ್ಲೂ ಸಹ ಅನಸೂಯ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಮೂಲಕ ಅನಸೂಯ ಮತಷ್ಟು ಫೇಮ್ ಪಡೆದುಕೊಂಡರು. ಕ್ಷಣಂ, ರಂಗಸ್ಥಳಂ ಸಿನೆಮಾಗಳಲ್ಲಿ ನಟಿಸಿದ ಅನಸೂಯ ಗೆ ಪ್ರಶಂಸೆಗಳ ಸುರಿಮಳೆ ಸಹ ಆಗಿತ್ತು. ಇನ್ನೂ ಆಕೆ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ವಿವಾದಗಳಿಗೂ ಸಹ ತುತ್ತಾಗುತ್ತಿರುತ್ತಾರೆ. ಲೈಗರ್‍ ಸಿನೆಮಾದ ಬಗ್ಗೆ ಆಕೆ ಷಾಕಿಂಗ್ ಹೇಳಿಕೆಗಳನ್ನು ನೀಡಿದ್ದರು. ಈ ಕಾರಣಕ್ಕೆ ಆಕೆಯನ್ನು ಟ್ರೋಲ್ ಸಹ ಮಾಡಿದ್ದರು.

ಇನ್ನೂ ನಟಿ ಅನಸೂಯ ಲೇಟೆಸ್ಟ್ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಆಕೆಯ ಈ ಪೊಟೋಗಳು ಕಾಣಿಸಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿತ್ತು. ಸದ್ಯ ಅನಸೂಯ ಫಾರಿನ್ ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಕೆಲವೊಂದು ಪೊಟೋಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿದೇಶೀ ಅರಣ್ಯಗಳಲ್ಲಿ ಆಕೆ ಟ್ರೆಕ್ಕಿಂಗ್ ಮಾಡುತ್ತಾ ಥಂಡರ್‍ ಥೈಸ್ ಪ್ರದರ್ಶನ ಮಾಡುತ್ತಾ, ಫನ್ನಿಯಾಗಿ ಹಾಗೂ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಅಭಿಮಾನಿಗಳು ಸಹ ಕಾಡಿನಲ್ಲಿ ಆ ಫನ್ನಿ ಪೋಸ್ ಏಕೆ ಎಂದು ಫನ್ನಿ ಫನ್ನಿ ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ.

Previous articleಕಾಂತಾರ ಮೆಚ್ಚಿನ ತಲೈವಾ, ಮೆಚ್ಚುಗೆಯ ಕಾಮೆಂಟ್ ಹಂಚಿಕೊಂಡ ರಜನಿಕಾಂತ್, ನ.14 ಪ್ರಧಾನಿ ಮೋದಿ ಸಹ ಸಿನೆಮಾ ನೋಡಲಿದ್ದಾರೆ….!
Next articleಪ್ರಕೃತಿಯ ಸೌಂದರ್ಯ ಸವಿಯುತ್ತಾ ಕಿಲ್ಲಿಂಗ್ ಪೋಸ್ ಕೊಟ್ಟ ಮಾದಕ ನಟಿ ಸನ್ನಿ ಲಿಯೋನಿ…!