ಎರಡನೇ ಮದುವೆಯ ಚಿಂತೆಯಲ್ಲಿ ಬಿದ್ದ ಸ್ಟಾರ್ ಆಂಕರ್ ಅನಸೂಯ, ಕಾರಣ ಏನು ಗೊತ್ತಾ?

ತೆಲುಗು ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಮಿಂಚಿದ ಸ್ಟಾರ್‍ ಆಂಕರ್ ಕಂ ನಟಿ ಅನಸೂಯಗೆ ಎರಡನೇ ಮದುವೆಯ ಪ್ರಪೋಸಲ್ ಒಂದು ಬಂದಿದ್ದು, ಈ ಪ್ರಪೋಸಲ್ ಕುರಿತು ಆಕೆ ಉತ್ತರ ನೀಡಿದ್ದು, ಆಕೆಯ ಉತ್ತರ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕಿರುತೆರೆ ಶೋಗಳು, ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ಸೋಷಿಯಲ್ ಮಿಡಿಯಾದ ಮೂಲಕವೂ ಸಹ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಆಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸಹ ಆಕೆಗೆ ಮತಷ್ಟು ಮದುವೆ ಪ್ರಪೋಸಲ್ ಗಳು ಬರುತ್ತಿವೆ.

ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಸಾಲು ಸಾಲು ಪೊಟೋಶೂಟ್ ಮೂಲಕ ಗ್ಲಾಮರಸ್ ಲುಕ್ಸ್ ನೊಂದಿಗೆ ಆಕೆ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೂ ಸಹ ದೊಡ್ಡ ಮೊತ್ತವನ್ನು ಸಂಪಾದಿಸುತ್ತಿದ್ದಾರೆ. ಇದೀಗ ಆಕೆಗೆ ಎರಡನೇ ಮದುವೆಯಾಗುವಂತೆ ಅನೇಕ ಪ್ರಪೋಸಲ್ ಗಳು ಬರುತ್ತಿದ್ದು, ಇದಕ್ಕೆ ಆಕೆ ಉತ್ತರವನ್ನೂ ಸಹ ನೀಡಿದ್ದಾರೆ. ಆಕೆ ನೀಡಿದ ಉತ್ತರ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿ ಅನಸೂಯ ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಿರುತ್ತಾರೆ. ಆಕೆಗೆ ಕೇಳುವಂತಹ ಅನೇಕ ಪ್ರಶ್ನೆಗಳಿಗೆ ಆಕೆ ಉತ್ತರ ಸಹ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಮದುವೆಯಾಗುವ ಪ್ರಪೋಸಲ್ ಇಟ್ಟ ನೆಟ್ಟಿಗನೊಬ್ಬನಿಗೆ ಆಕೆ ನೀಡಿದ ಉತ್ತರ ಇದೀಗ ಎಲ್ಲರ ಗಮನ ಸೆಳೆದಿದೆ.

ನಟಿ ಅನಸೂಯ ಇತ್ತೀಚಿಗಷ್ಟೆ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಇನ್ನೂ ಚಿಟ್ ಚಾಟ್ ನಲ್ಲಿ ಭಾಗಿಯಾದ ಅನೇಕರು ಆಕೆಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅನಸೂಯ ಸಹ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಿದ್ದಾರೆ. ಆಕೆಯ ಅಭಿಮಾನಿಯೊಬ್ಬ ಆಕೆಗೆ ಫನ್ನಿ ಪ್ರಶ್ನೆಯೊಂದು ಎದುರಾಗಿದೆ. ಅಭಿಮಾನಿ ಅನಸೂಯರವರಿಗೆ ನೇರವಾಗಿ ಮದುವೆಯಾಗುತ್ತೀಯಾ ಎಂದು ಕೇಳಿದ್ದಾರೆ. ಇದೇ ರೀತಿ ಅನೇಕ ಬಾರಿ ಕೇಳುತ್ತಲೇ ಇದ್ದೇ, ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಮಾತ್ರ ಸಿಕ್ಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಸಾಮಾನ್ಯವಾಗಿ ಅನೇಕ ಸೆಲೆಬ್ರೆಟಿಗಳು ಇಂತಹ ಪ್ರಶ್ನೆಗಳ ಕುರಿತು ಯೋಚನೆ ಸಹ ಮಾಡುವುದಿಲ್ಲ. ಆದರೆ ಅನಸೂಯ ಮಾತ್ರ ತಮ್ಮದೇ ಆದ ವಿಧಾನದಲ್ಲಿ ಉತ್ತರ ನೀಡಿದ್ದಾರೆ.

ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಮೇಲಿನ ಟ್ರೋಲ್ ಗಳಿಗೆ ಸಖತ್ ಆಗಿಯೇ ಕೌಂಟರ್‍ ನೀಡುತ್ತಲೇ ಇರುತ್ತಾರೆ. ಅನಸೂಯರವರಿಗೆ ಕೇಳಿದ ಎರಡನೇ ಮದುವೆಯ ಪ್ರಪೋಸಲ್ ಗೆ ಉತ್ತರ ನೀಡಿದ್ದಾರೆ. ಆಕೆ ಅಭಿಮಾನಿಯ ಪ್ರಶ್ನೆಗೆ ಆಲೋಚನೆ ಮಾಡುವತ್ತಿರುವ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಒಂದು ಎಮೋಜಿಯನ್ನು ಸಹ ಹಾಕಿದ್ದು, ನಿನ್ನ ಮದುವೆ ಪ್ರಪೋಸಲ್ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂಬಂತೆ ಉತ್ತರ ನೀಡಿದ್ದಾರೆ. ಇನ್ನೂ ಅನಸೂಯ ನೀಡಿದ ಉತ್ತರಕ್ಕೆ ಪ್ರಶ್ನೆ ಕೇಳಿದ ಅಭಿಮಾನಿಯ ಜೊತೆಗೆ ಅನೇಕರು ಶಾಕ್ ಆಗಿದ್ದಾರೆ. ಇತ್ತೀಚಿಗಷ್ಟೆ ನಟಿ ಅನಸೂಯ ಮೆಗಾಸ್ಟಾರ್‍ ಚಿರಂಜೀವಿ ಯವರ ಗಾಡ್ ಫಾದರ್‍ ಸಿನೆಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Previous articleಬೋಲ್ಡ್ ನಟಿ ಶ್ರದ್ದಾ ದಾಸ್ ಗೆ ಕಿಸ್ ಕೊಡು ಎಂದು ಕೇಳಿದ ಹೈಪರ್ ಆದಿ, ಆಕೆ ಮಾಡಿದ್ದು ಏನು ಗೊತ್ತಾ?
Next articleಆಸ್ಪತ್ರೆ ಪಾಲಾದ ಸೀನಿಯರ್ ನಟಿ ಖುಷ್ಬು, ಆಕೆಯನ್ನು ನೋಡಿದ್ರೆ ಖುಷ್ಬು ಎನ್ನಲು ಸಾಧ್ಯವೇ ಇಲ್ಲ ಎನ್ನಬಹುದು..!