ನೆಗೆಟೀವ್ ಕಾಮೆಂಟ್ಸ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಸ್ಟಾರ್ ಬ್ಯೂಟಿ ಶ್ರುತಿ ಹಾಸನ್….!

ಸಿನಿರಂಗದಲ್ಲಿ ಯಾವುದೇ ವಿಚಾರ ಆದರೂ ನೇರವಾಗಿ ಮಾತನಾಡುವಂತಹ ನಟಿಯರಲ್ಲಿ ಶ್ರುತಿ ಹಾಸನ್ ಮುಂದಿರುತ್ತಾರೆ. ಈ ಹಿಂದೆ ಅನೇಕ ಬಾರಿ ಆಕೆಯ ದೇಹದ ಬಗ್ಗೆ ಅನೇಕ ಕಾಮೆಂಟ್ ಗಳು ಎದುರಾಗಿದ್ದವು. ಬಾಡಿ ಶೇಮಿಂಗ್ ಬಗ್ಗೆ ಎದುರಾದ ಅನೇಕ ನೆಗೆಟೀವ್ ಕಾಮೆಂಟ್ ಗಳ ಬಗ್ಗೆ ಶ್ರುತಿ ಹಾಸನ್ ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನೆಗೆಟೀವ್ ಕಾಮೆಂಟ್ ಗಳ ಬಗ್ಗೆ ಮಾತನಾಡಿದ್ದಾರೆ.

ನಟಿ ಶ್ರುತಿ ಹಾಸನ್ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಹೊಂದಿರುವ ನಟಿಯಾಗಿದ್ದಾರೆ.  ತೆಲುಗಿನಲ್ಲಿ ಬಿಗ್ ಬಜೆಟ್ ಸಿನೆಮಾಗಳಲ್ಲೂ ಸಹ ಆಕೆ ಬ್ಯುಸಿಯಾಗಿದ್ದಾರೆ. ಸಲಾರ್‍, ವೀರಸಿಂಹಾರೆಡ್ಡಿ, ವಾಲ್ತೇರು ವೀರಯ್ಯ ಎಂಬ ಸ್ಟಾರ್‍ ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಸಲಾರ್‍ ಇನ್ನೂ ಶೂಟಿಂಗ್ ಹಂತದಲ್ಲಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ, ಮೆಗಾಸ್ಟಾರ್‍ ಚಿರಂಜೀವಿ ಜೊತೆಗಿನ ವಾಲ್ತೇರು ವೀರಯ್ಯ, ಹಾಗೂ  ನಂದಮೂರಿ ಬಾಲಕೃಷ್ಣ ಜೊತೆಗಿನ ವೀರಸಿಂಹಾರೆಡ್ಡಿ ಸಿನೆಮಾ ಬಿಡುಗಡೆಯಾಗಲಿದೆ. ಇನ್ನೂ ಶ್ರುತಿ ಹಾಸನ್ ಈ ಸಿನೆಮಾಗಳ ಮೇಲೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಾರ್‍ ಸಿನೆಮಾದ ಮೇಲೂ ಸಹ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಇನ್ನೂ ನಟಿ ಶ್ರುತಿ ಹಾಸನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಆಕೆಯ ವಿರುದ್ದ ಕೇಳಿಬಂದ ನೆಗೆಟೀವ್ ಕಾಮೆಂಟ್ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಆಕೆಯ ಸಿನಿರಂಗದಕ್ಕೆ ಎಂಟ್ರಿ ಕೊಟ್ಟ ಹೊಸದರಲ್ಲಿ ಆಕೆಯ ವಿರುದ್ದ ಅನೇಕ ನೆಗೆಟೀವ್ ಕಾಮೆಂಟ್ ಗಳು ಬಂದಿತ್ತಂತೆ. ಅದರಲ್ಲೂ ಹೆಚ್ಚಾಗಿ ಆಕೆಯ ಎತ್ತರದ ಬಗ್ಗೆ ಟೀಕೆಗಳು ಕೇಳಿಬಂದವಂತೆ. ಏನು ಅಷ್ಟೊಂದು ಎತ್ತರ ಇದ್ದೀಯಾ ಎಂದು ಅನೇಕರು ಪರೋಕ್ಷವಾಗಿ ಆಕೆಯ ವಿರುದ್ದ ಮಾತನಾಡಿದ್ದರಂತೆ. ಆದರೆ ಇದೀಗ ಆಕೆಗೆ ಅದೇ ಅನುಕೂಲವಾಗಿದೆ. ಎತ್ತರ ಹೆಚ್ಚಾಗಿರುವ ಕಾರಣದಿಂದಲೇ ಪ್ರಭಾಸ್, ಮಹೇಶ್ ಬಾಬು ರವರಂತಹ ನಟರೊಂದಿಗೆ ನಟಿಸಲು ಅನುಕೂಲವಾಯಿತು. ಅಷ್ಟೇಅಲ್ಲದೇ ನನ್ನಲ್ಲಿ ಕೆಲವೊಂದು ಲೋಪಗಳು ಇದೆ. ಅವೆಲ್ಲವನ್ನೂ ಮೀರಿ ನಾನು ಬಂದಿದ್ದೇನೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಪ್ರಿಯಕರ ಶಾಂತಾನು ಹಜಾರಿಕಾ ಜೊತೆಗೆ ಬೇರೆಯಾಗಿದ್ದಾರೆ ಎಂಬ ರೂಮರ್‍ ಗಳು ಹರಿದಾಡಿದ್ದವು. ಆದರೆ ಅದಕ್ಕೆ  ಶ್ರುತಿ ಸಹ ಸ್ಟ್ರಾಂಗ್ ಡೋಸ್ ಕೊಟ್ಟಿದ್ದರು. ಸೋಷಿಯಲ್ ಮಿಡಿಯಾದಲ್ಲಿ ತುಂಭಾ ಆಕ್ಟೀವ್ ಆಗಿರುವ ಈಕೆ ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾಗಳ ಅಪ್ಡೇಟ್ ಹಾಗೂ ಪೊಟೋಶೂಟ್ಸ್ ಮೂಲಕ ಸಹ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿರುತ್ತಾರೆ.

Previous articleಪ್ರಿಯಕರನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ ರಕುಲ್ ಪ್ರೀತ್ ಸಿಂಗ್…!
Next articleಮಗನ ಮುಂದೆಯೇ ಪತಿಯ ತುಟಿಗೆ ಮುತ್ತಿಟ್ಟ ಕಾಜಲ್ ಅಗರ್ವಾಲ್, ನೆಟ್ಟಿಗರ ಆಕ್ರೋಷ…!