ಶ್ರುತಿ ಹಾಸನ್ ಸೆಲ್ಫಿ ನೋಡಿ ಶಾಕ್ ಆದ ಅಭಿಮಾನಿಗಳು, ಸ್ಟಾರ್ ನಟಿಯ ಮುಖಕ್ಕೆ ಏನಾಗಿದೆ?

ಸದ್ಯ ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳ ಮೂಲಕ ಮುನ್ನುಗ್ಗುತ್ತಿರುವ ನಟಿಯರಲ್ಲಿ ಶ್ರುತಿ ಹಾಸನ್ ಒಬ್ಬರಾಗಿದ್ದಾರೆ. ಆಕೆ ತೆಗೆದುಕೊಳ್ಳುವಂತಹ ಕೆಲವೊಂದು ನಿರ್ಣಯಗಳನ್ನು ಬೇರೆ ಯಾರೂ ತೆಗೆದುಕೊಳ್ಳುವುದಿಲ್ಲ ಎನ್ನಬಹುದು. ನನ್ನ ಜೀವನ, ನನ್ನ ನಿಯಮಗಳು ಎಂಬಂತೆ ಆಟಿಟ್ಯೂಡ್ ಮೆಂಟೈನ್ ಮಾಡುತ್ತಿರುತ್ತಾರೆ. ಅದನ್ನು ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳನ್ನು ಒಮ್ಮೆ ನೋಡಿದರೇ ತಿಳಿಯುತ್ತದೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಇದೀಗ ಅಭಿಮಾನಿಗಳನ್ನು ಶಾಕ್ ಆಗುವಂತೆ ಮಾಡಿದೆ.

ನಟಿ ಶ್ರುತಿ ಹಾಸನ್ ಎಲ್ಲರಂತಹ ನಟಿಯಲ್ಲ. ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಹಾಗೂ ಮಾಡುವಂತಹ ನಟಿಯಾಗಿದ್ದಾರೆ. ಸಾಮಾನ್ಯವಾಗಿ ನಟಿಯರು ಮೇಕಪ್ ಲೆಸ್ ಆಗಿ ಅಥವಾ ಡಿ ಗ್ಲಾಮರ್‍ ಪೊಟೋಗಳನ್ನು ಶೇರ್‍ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅಂತಹ ಪೊಟೋಗಳನ್ನು ಹಂಚಿಕೊಳ್ಳುವ ಕಾರಣದಿಂದ ಅವರ ಸಿನೆಮಾ ಕೆರಿಯರ್‍ ಮೇಲೆ ಪ್ರತಿಕೂಲಕರ ಪರಿಣಾಮ ಬೀರುತ್ತದೆ ಎಂಬ ಭಯದಿಂದ ಪೊಟೋಗಳನ್ನು ಹಂಚಿಕೊಳ್ಳಲು ಇಷ್ಟಪಡಿವುದಿಲ್ಲ. ಆದರೆ ಶ್ರುತಿ ಹಾಸನ್ ಮಾತ್ರ ಇದ್ಯಾವುದಕ್ಕೂ ಕೇರ್‍ ಮಾಡುವುದೇ ಇಲ್ಲ. ಇದೀಗ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ವರಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳನ್ನು ನೋಡಿದ ನೆಟ್ಟಿಗರು ಆಕೆಗೆ ಏನಾಗಿದೆ, ನಿಜಕ್ಕೂ ಆಕೆ ಸ್ಟಾರ್‍ ನಟಿಯೇನಾ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ನಟಿ ಶ್ರುತಿ ಹಾಸನ್ ಜ್ವರ ಹಾಗೂ ಸೈನಸ್ ನಿಂದ ಬಳಲುತ್ತಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದು, ಅದಕ್ಕೆ ಬ್ಯಾಡ್ ಡೇ, ಬ್ಯಾಡ್ ಹೈಯರ್‍ ನೊಂದಿಗೆ ನನ್ನ ಸೆಲ್ಫಿ ಹೀಗಿರುತ್ತದೆ. ನೀವು ಇದನ್ನು ಸಹ ಸ್ವೀಕರಿಸುತ್ತಿರೀ, ಇಷ್ಟಪಡುತ್ತೀರಿ ಎಂದು ಅಂದುಕೊಳ್ಳುತ್ತೇನೆ ಎಂದು ಕಾಮೆಂಟ್ ಸಹ ಮಾಡಿದ್ದಾರೆ. ಆಕೆಯ ಪೊಟೋಗಳನ್ನು ಕಂಡ ಅನೇಕ ಅಭಿಮಾನಿಗಳು ಮೊದಲಿಗೆ ಶಾಕ್ ಆಗಿದ್ದು, ಬಳಿಕ ಶೀಘ್ರವಾಗಿ ಗುಣಮುಖರಾಗಿ ಎಂದು ಕೋರುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವಂತಹ ಶ್ರುತಿ ಸೋಷಿಯಲ್ ಮಿಡಿಯಾ ಮೂಲಕವೇ ಅನೇಕ ವಿಚಾರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ವೈಯುಕ್ತಿಕ ಜೀವನದ ಜೊತೆಗೆ ಸಿನೆಮಾ ಅಪ್ಡೇಟ್ ಗಳು, ಪೊಟೋಸ್, ವಿಡಿಯೋಗಳನ್ನು ಸಹ ಶೇರ್‍ ಮಾಡುತ್ತಾ ತಮ್ಮ ಅಭಿಮಾನಿಗಳೊಂದಿಗೆ ಹತ್ತಿರವಾಗಿರುತ್ತಾರೆ.

ಸದ್ಯ ಶ್ರುತಿ ಹಾಸನ್ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಸಲಾರ್‍ ನಲ್ಲಿ ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಕೆ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಬಾಲಕೃಷ್ಣ ಜೊತೆಗೆ ಹಾಗೂ ನಿರ್ದೇಶಕ ಬಾಬಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ವಾಲ್ತೇರು ವೀರಯ್ಯ ಸಿನೆಮಾದಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ಈ ಸಿನೆಮಾಗಳ ಮೇಲೆ ಶ್ರುತಿ ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Previous articleಭರ್ಜರಿ ಆಫರ್ ಗಿಟ್ಟಿಸಿಕೊಂಡ ಸ್ಯಾಂಡಲ್ ವುಡ್ ಬ್ಯೂಟಿ ಶ್ರೀಲೀಲಾ, ಸ್ಟಾರ್ ನಟನೊಂದಿಗೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡ ಬ್ಯೂಟಿ….!
Next articleತಂದೆ ನೋಡಿದ ಹುಡುಗನನ್ನೇ ಮದುವೆಯಾಗಲಿದ್ದಾರಂತೆ ಸ್ಟಾರ್ ನಟಿ ಕೀರ್ತಿ ಸುರೇಶ್…!