ನೋವಿನಿಂದಲೇ ಹೊಸ ವರ್ಷವನ್ನು ಸ್ವಾಗತಿಸುತ್ತಿರುವ ಸ್ಯಾಮ್, ಎಮೋಷನಲ್ ಆಗಿ ಪೋಸ್ಟ್ ಮಾಡಿದ ಸಮಂತಾ……!

ದೇಶದ ಸಿನಿರಂಗದ ಖ್ಯಾತ ನಟಿಯರಲ್ಲಿ ಒಬ್ಬರಾದ ಸಮಂತಾ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಯೋಸೈಟೀಸ್ ಎಂಬ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದಾರೆ. ಇದೀಗ ಸಮಂತಾ ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಾ ಚಿಕಿತ್ಸೆ ಸಹ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿದ್ದಾರೆ. ಭಾವನಾತ್ಮಕವಾದ ಹಾಗೂ ಸ್ಪೂರ್ತಿದಾಯಕವಾದ ಹೇಳಿಕೆಯೊಂದನ್ನು ನೀಡಿದ್ದಾರೆ. ಸದ್ಯ ಆಕೆಯ ಪೋಸ್ಟ್ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಈ ಹಿಂದೆ ಸ್ಟಾರ್‍ ಲೇಡಿ ಸಮಂತ ಯಶೋಧ ಸಿನೆಮಾದ ಟ್ರೈಲರ್‍ ಯಶಸ್ವಿಗೊಳಿಸಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ ತಾನು ಎದುರಿಸುತ್ತಿರುವ ಕಾಯಿಲೆಯ ಬಗ್ಗೆ ಸಹ ತಿಳಿಸಿದ್ದರು. ಇನ್ನೂ ಈ ಸುದ್ದಿ ಹೊರಬರುತ್ತಿದ್ದಂತೆ ಸಮಂತಾ ಅಭಿಮಾನಿಗಳೂ ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳೂ ಸಹ ಆಕೆ ಬೇಗ ಗುಣಮುಖರಾಗಲಿ ಎಂದು ಹಾರೈಸಿದರು. ಅನೇಕ ಸ್ಟಾರ್‍ ನಟ-ನಟಿಯರೂ ತಮ್ಮ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಸಮಂತಾಗೆ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದರು. ಆದರೆ ಸಮಂತಾ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಇನ್ನೂ ಮಯೋಸೈಟೀಸ್ ಕಾಯಿಲೆಯಿಂದ ಆಗೆ ಬಳಲುತ್ತಿದ್ದಾರೆ. ಇದೀಗ ಆಕೆ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಷಯಗಳನ್ನು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದಾರೆ. ಆಕೆ ಎಮೋಷನಲ್ ಆಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸಮಂತಾ ಪೋಸ್ಟ್ ಮಾಡಿರುವಂತೆ ಹೊಸ ವರ್ಷದಂದು ಮುಂದೆ ನಡೆಯಿರಿ, ನಿಂಯತ್ರಣ ಮಾಡುವಂತಹ ವಿಚಾರಗಳನ್ನು ನಿಯಂತ್ರಣ ಮಾಡಿ, ನಾವು ಸುಲಭವಾಗಿ ಸಾಧಿಸಬಹುದಾದ ಗುರಿಗಳನ್ನು ಸಾಧಿಸಿಬಿಡಿ, ಅದಕ್ಕೇ ಇದೇ ಸರಿಯಾ ಸಮಯ ಎಂದು ಕೊಳ್ಳುತ್ತಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಷಗಳು ಎಂದಿದ್ದಾರೆ. ಇನ್ನೂ ಸಮಂತಾ ಹಂಚಿಕೊಂಡು ಈ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ. ಜೊತೆಗೆ ಆಕೆ ಶೀಘ್ರವಾಗಿ ಮಯೋಸೈಟಿಸ್ ಕಾಯಿಲೆಯಿಂದ ಗುಣಮುಖರಾಗಲಿ ಎಂದೂ ಸಹ ಶುಭ ಕೋರುತ್ತಿದ್ದಾರೆ.

ಇನ್ನು ಸಮಂತಾ ಸಂಪೂರ್ಣವಾಗಿ ಗುಣಮುಖರಾಗಲು ಮತಷ್ಟು ದಿನಗಳು ಬೇಕಾಗುತ್ತದೆ ಎನ್ನಲಾಗುತ್ತಿದೆ. ಈ ಕಾರಣದಿಂದ ಆಕೆ ಶೂಟಿಂಗ್ ನಲ್ಲೂ ಸಹ ಭಾಗಿಯಾಗಲು ಸಾಧ್ಯವಿಲ್ಲ. ಬಾಲಿವುಡ್ ನಲ್ಲಿ ಆಕೆ ಒಪ್ಪಿಕೊಂಡ ಕೆಲವೊಂದು ಸಿನೆಮಾಗಳೂ ಸಹ ಕೈಬಿಟ್ಟಿದ್ದಾರೆ ಎಂಬ ಸುದ್ದಿಗಳು ಸಹ ಕೇಳಬಂದಿತ್ತು. ಅದಕ್ಕೆ ಸಮಂತಾ ಮ್ಯಾನೇಜರ್‍ ಸಹ ಸ್ಪಷ್ಟನೆ ನೀಡಿದ್ದರು. ಶೀಘ್ರದಲ್ಲೇ ಆಕೆ ಸಿನೆಮಾ ಶೂಟಿಂಗ್ ನಲ್ಲೂ ಸಹ ಭಾಗಿಯಾಗುತ್ತಾರೆ ಎಂದು ಹೇಳಿದ್ದರು. ಇನ್ನೂ ಆಕೆ ಶಾಕುಂತಲಂ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ ವರ್ಷ ಈ ಸಿನೆಮಾ ಬಿಡುಗಡೆಯಾಗಬಹುದಾಗಿದೆ.

Previous articleಕರಾಟೆ ಕಲ್ಯಾಣಿ ಸೆನ್ಷೇಷನಲ್ ಕಾಮೆಂಟ್ಸ್, ಆ ಕಾರಣದಿಂದಲೇ ನನ್ನನ್ನು ವೆಶ್ಯೆಯಂತೆ ಕಾಣುತ್ತಾರೆ ಎಂದರು…!
Next articleಇಷ್ಟವಿಲ್ಲದ ವ್ಯಕ್ತಿಗಳ ಜೊತೆಗೆ ಆ ಕೆಲಸ ಮಾಡಿ ನರಕ ಅನುಭವಿಸಿದ್ದೆ ಎಂದ ಹೋಮ್ಲಿ ಬ್ಯೂಟಿ ಅಂಜಲಿ…..!