ಸೌತ್ ಸಿನಿರಂಗದಲ್ಲಿ ದೊಡ್ಡ ಮಟ್ಟದ ಫೇಂ ಪಡೆದುಕೊಂಡಿರುವ ನಟಿಯರಲ್ಲಿ ಸಮಂತಾ ಟಾಪ್ ಸ್ಥಾನದಲ್ಲಿರುತ್ತಾರೆ. ಇತ್ತೀಚಿಗೆ ಬಿಡುಗಡೆಯಾದ ಯಶೋಧ ಸಿನೆಮಾ ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದಿದೆ. ಶೀಘ್ರದಲ್ಲೇ ಆಕೆ ಅಭಿನಯದ ಶಾಕುಂತಲಂ ಎಂಬ ಮತ್ತೊಂದು ಪ್ಯಾನ್ ಇಂಡಿಯಾ ಸಿನೆಮಾ ಸಹ ತೆರೆಗೆ ಬರಲಿದೆ. ಇತ್ತೀಚಿಗೆ ಆಕೆ ಮಯೋಸೈಟಿಸ್ ಎಂಬ ಕಾಯಿಲೆಗೆ ತುತ್ತಾಗಿರುವ ವಿಚಾರ ತಿಳಿದೇ ಇದೆ. ಆಕೆ ಸಂಪೂರ್ಣವಾಗಿ ಗುಣಮುಖರಾಗಲು ಮತಷ್ಟು ಸಮಯ ಬೇಕಾಗಿದೆ. ಇದೀಗ ಆಕೆ ಜೀವನದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಕೆಲವು ದಿನಗಳಿಂದ ನಟಿ ಸಮಂತಾ ಮಯೋಸೈಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇನ್ನೂ ಆಕೆ ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಆ ಕಾಯಿಲೆಯಿಂದ ತುಂಬಾನೆ ನೋವನ್ನು ಪಡುತ್ತಿದ್ದಾರೆ ಸಮಂತಾ. ಈ ಹಿಂದೆ ಯಶೋಧ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಂತಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕಾರ್ಯಕ್ರಮವೊಂದರಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆಗೆ ತುಂಬಾ ಕೋಪಬಂದರೇ ಜಿಮ್ ನಲ್ಲಿ ಹೆಚ್ಚಾಗಿ ವರ್ಕೌಟ್ ಮಾಡುತ್ತಾರಂತೆ. ಹೀಗೆ ಮಾಡುವುದರಿಂದ ಆಕೆಯ ಕೋಪ ಕಡಿಮೆಯಾಗುತ್ತದೆಯಂತೆ. ನಾನು ಹಣ, ಹೆಸರು ಸಂಪಾದಿಸಲು ಪರಿತಪಿಸುವುದಿಲ್ಲ. ನನಗೆ ಹಣಕ್ಕಿಂತ ನಟನೆ ತುಂಬಾ ಮುಖ್ಯವಾದುದು. ನಾನು ಮಾಡುವಂತಹ ಪ್ರತಿಯೊಂದು ಪಾತ್ರವನ್ನು ಆಸ್ವಾದಿಸುತ್ತೇನೆ ಆ ರೀತಿ ನಟಿಸಿದಾಗಲೇ ನನಗೆ ಸಂತೋಷವಾಗುತ್ತದೆ ಜೊತೆಗೆ ಪ್ರಯೋಜನ ಸಹ ಆಗುತ್ತದೆ ಎಂದಿದ್ದಾರೆ.
ಇನ್ನೂ ನಾನೇ ದೊಡ್ಡ ವಿಮರ್ಶಕಳಾಗಿದ್ದೇನೆ. ನಮ್ಮ ತಪ್ಪುಗಳನ್ನು ತಿಳಿದುಕೊಂಡರೇ ಮಾತ್ರ ನಮ್ಮ ವೃತ್ತಿಯಲ್ಲಿ ಅಭಿವೃದ್ದಿಯಾಗಲು ಸಾಧ್ಯ. ನಾನು ಮಾಡಿದ ಕೆಲಸ ನಾನೇ ಒಮ್ಮೆ ಪರೀಕ್ಷೆ ಮಾಡಿಕೊಳ್ಳುತ್ತಿರುತ್ತೇನೆ. ಸಮಯ ಸರಿಯಾಗಿ ಇಲ್ಲದಿದ್ದರೇ ಏನಾದರೂ ನಡೆಯಬಹುದು, ಅಂತಹ ಸಮಯದಲ್ಲಿ ನಾನು ಭಯಪಡದೇ ಎಲ್ಲಾ ಅಲೋಚನೆಗಳನ್ನು ಪಕ್ಕಕ್ಕಿಟ್ಟು ನಿದ್ದೆ ಮಾಡುತ್ತೇನೆ. ನಮಗೆ ಇಷ್ಟಬಂದಂಗೆ ಇರಬೇಕು. ಭೂಮಿಯ ಮೇಲೆ ಬಂದಿದ್ದು ಬೇರೆಯವರ ಅಭಿನಂದನೆಗಾಗಿ ಆಗಲಿ, ಅಥವಾ ಬೇರೆಯವರನ್ನು ಸಂತೋಷ ಪಡಿಸಲು ಅಲ್ಲ. ನಮಗೆ ಇರುವುದರಲ್ಲೆ ಸಂತೋಷವಾಗಿ ಜೀವನ ಸಾಗಿಸಬೇಕು. ಆಗಲೇ ನಾವು ಬಯಸ್ಸಿದ್ದು ನಮ್ಮನ್ನು ಹುಡುಕಿ ಬರುತ್ತದೆ ಎಂದಿದ್ದಾರೆ. ಇನ್ನೂ ನಟಿ ಸಮಂತಾ ರವರ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸಹ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು ದಿನಗಳಿಂದ ಅನಾರೋಗ್ಯದ ಕಾರಣದಿಂದ ಸಮಂತಾ ಮನೆಯಲ್ಲೇ ಇದ್ದಾಎ. ಆಕೆ ಅಭಿನಯದ ಶಾಕುಂತಲಂ ಸಿನೆಮಾ ಸಹ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಇನ್ನೂ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಅನಾರೋಗ್ಯದ ಕಾರಣದಿಂದ ಸಿನೆಮಾ ಶೂಟಿಂಗ್ ಸ್ಥಗಿತಗೊಂಡಿದೆ. ಜೊತೆಗೆ ಬಾಲಿವುಡ್ ಸಿನೆಮಾಗಳಲ್ಲೂ ಸಹ ಆಕೆ ನಟಿಸಲಿದ್ದಾರೆ. ಆರೋಗ್ಯವಾದ ಬಳಿಕ ಸಮಂತಾ ಶೂಟಿಂಗ್ ಗಳಲ್ಲಿ ಭಾಗಿಯಾಗಲಿದ್ದಾರೆ.