ವಿಜಯ್ ದೇವರಕೊಂಡ ಸದಾ ನನಗೆ ಬೆಂಬಲವಾಗಿರುತ್ತಾನೆ ಎಂದ ರಶ್ಮಿಕಾ, ಮತಷ್ಟು ಬಲಗೊಂಡ ರೂಮರ್…!

ನ್ಯಾಷನಲ್ ಕ್ರಷ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಡಿಯರ್‍ ಕಾಮ್ರೇಡ್ ಸಿನೆಮಾದ ಬಳಿಕ ಇಬ್ಬರ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ಸುದ್ದಿ ಶುರುವಾಯಿತು. ಈ ರೂಮರ್‍ ಇಂದಿಗೂ ಸಹ ಪ್ರಚಲಿತದಲ್ಲೇ ಇದೆ. ಇದಕ್ಕೆ ಆಗಾಗ ಅವರು ಜಂಟಿಯಾಗಿ ಕಾಣಿಸಿಕೊಳ್ಳುವುದು, ಒಬ್ಬರ ಮೇಲೆ ಒಬ್ಬರು ಹೊಗಳಿಕೊಳ್ಳುವುದು, ಬೆಂಬಲಿಸುವುದು ನೋಡಿದರೇ ಈ ರೂಮರ್‍ ಗಳಿಗೆ ಮತಷ್ಟು ಪುಷ್ಟಿ ದೊರೆತಿತ್ತು. ಇದೀಗ ಈ ರೂಮರ್‍ ಗೆ ರಶ್ಮಿಕಾ ನೀಡಿದ ಹೇಳಿಕೆ ಮತಷ್ಟು ಬಲ ಕೊಟ್ಟಿದೆ.

ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲೂ ಸ್ಟಾರ್‍ ನಟಿಯಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಸದಾ ಸುದ್ದಿಯಲ್ಲಿರುವ ನಟಿಯಾಗಿದ್ದಾರೆ. ಆಕೆ ಏನು ಮಾಡಿದರು ಕ್ಷಣದಲ್ಲೇ ವೈರಲ್ ಆಗುತ್ತದೆ. ಅದರಲ್ಲೂ ರಶ್ಮಿಕಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಸಾಲು ಸಾಲು ಪೊಟೋಶೂಟ್ ಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಅದರಲ್ಲೂ ಪುಷ್ಪಾ ಸಿನೆಮಾದ ಬಳಿಕ ರಶ್ಮಿಕಾ ನ್ಯಾಷನಲ್ ಕ್ರಷ್ ಆಗಿ ಮತಷ್ಟು ಕ್ರೇಜ್ ಬೆಳೆಸಿಕೊಂಡಿದ್ದಾರೆ. ಈ ಸಿನೆಮಾದ ಬಳಿಕ ರಶ್ಮಿಕಾ ಬಾಲಿವುಡ್ ನಲ್ಲೂ ಸಹ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಸಹ ಗಿಟ್ಟಿಸಿಕೊಂಡರು. ಇನ್ನು ಕೆಲವು ದಿನಗಳ ಹಿಂದೆಯಷ್ಟೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮಾಲ್ಡೀವ್ಸ್ ಗೆ ವೆಕೇಶನ್ ಗೆ ಹೋಗಿದ್ದಾರೆ. ಈ ಕಾರಣದಿಂದಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ರವರ ರೂಮರ್‍ ಗೆ ಮತಷ್ಟು ಪುಷ್ಟಿ ನೀಡಿದೆ.

ಇನ್ನೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದರೂ ಸಹ ಈ ಕುರಿತು ಇಬ್ಬರಲ್ಲಿ ಯಾರೂ ಸಹ ಕ್ಲಾರಿಟಿ ಕೊಟ್ಟಿಲ್ಲ. ಇವರಿಬ್ಬರೂ ಸಾರ್ವಜನಿಕವಾಗಿಯೇ ತಿರುಗಾಡುತ್ತಿದ್ದಾರೆ. ಆದರೂ ಸಹ ತಮ್ಮ ರಿಲೇಷನ್ ಶಿಪ್ ಬಗ್ಗೆ ಇಬ್ಬರೂ ಎಲ್ಲೂ ಬಾಯ್ಬಿಟ್ಟಿಲ್ಲ.  ಇದೀಗ ಇಬ್ಬರೂ ಮಾಲ್ಡೀವ್ಸ್ ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ಸದ್ಯ ಅಲ್ಲಿನ ಕೆಲವೊಂದು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳದೇ ಇದ್ದರೂ ಸಹ ಆಕೆ ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿರುವ ಹೇಳಿಕೆಗಳು ವೈರಲ್ ಆಗುತ್ತಿವೆ.

ಇನ್ನೂ ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿರುವ ರಶ್ಮಿಕಾ ವಿಜಯ್ ನನಗೆ ತುಂಬಾ ಆತ್ಮೀಯ ಸ್ನೇಹಿತ. ಸದಾ ನನಗೆ ಬೆಂಬಲವಾಗಿರುತ್ತಾನೆ. ನಮ್ಮ ಮಧ್ಯೆ ಎಲ್ಲಾ ವಿಚಾರಗಳು ಸಹ ಚರ್ಚೆಗೆ ಬರುತ್ತವೆ. ನಮ್ಮ ಕೆರಿಯರ್‍ ಪ್ರಾರಂಭದಲ್ಲಿ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದೇವೆ. ನಾವಿಬ್ಬರೂ ಕಲಾವಿದರಾದ ಹಿನ್ನೆಲೆಯಲ್ಲಿ ನಮ್ಮ ಮೇಲೆ ಪೋಕಸ್ ಇರುವುದು ಸಾಮಾನ್ಯ. ಸಿನಿರಂಗಕ್ಕೆ ಸಂಬಂಧಿಸಿದ ಯಾವುದೇ ವಿಚಾರವಾದರೂ ಅಥವಾ ಸಲಹೆಯಾದರು ನಾನು ವಿಜಯ್ ದೇವರಕೊಂಡ ರವರನ್ನೇ ಕೇಳುತ್ತೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

Previous articleಟೈಟ್ ಫಿಟ್ ಡ್ರೆಸ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್, ವೈರಲ್ ಆದ ಪೊಟೋಸ್….!
Next articleನಯನತಾರಾಗೆ ಸಂಕಷ್ಟ, ತಾಯಿಯಾದ ಖುಷಿಯ ಬೆನ್ನಲೇ ವಿಚಾರಣೆಯ ಆತಂಕ…!