ಕಾಲಿಗೆ ಗಾಯ ಆಗಿದ್ದರು ಜಿಮ್ ಗೆ ಹೋದ ಪೂಜಾ ಹೆಗ್ಡೆ, ವೈರಲ್ ಆದ ಪೊಟೋಸ್…!

ನಟಿ ಪೂಜಾ ಹೆಗ್ಡೆ ತೆಲುಗು, ಹಿಂದಿ ಹಾಗೂ ತಮಿಳು ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಆಕೆ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನೆಮಾದಲ್ಲಿ ಮಹೇಶ್ ಬಾಬು ಜತೆಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಇನ್ನೂ ಪೂಜಾ ಹೆಗ್ಡೆ ಇತ್ತೀಚಿಗಷ್ಟೆ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಆಕೆ ಕಾಲಿಗೆ ಗಾಯವಾದ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದರು. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಆಕೆ ಕಾಲಿಗೆ ಗಾಯ ಆಗಿದ್ದರೂ ಸಹ ಜಿಮ್ ಗೆ ಹೋಗಿದ್ದಾರೆ.

ಕಾಲಿಗೆ ಕಟ್ಟು ಹಾಕಿದ್ದರೂ ನಡೆಯಲು ತುಂಬಾ ಕಷ್ಟವಾಗಿದ್ದರೂ ಪೂಜಾ ಹೆಗ್ಡೆ ಜಿಮ್ ಗೆ ಹೋಗಿದ್ದಾರೆ. ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಕಾಂಪಿಟೇಷನ್ ಎದುರಿಸುವ ನಿಟ್ಟಿನಲ್ಲಿ ಪೂಜಾ ಹೆಗ್ಡೆ ಸಹ ಸದಾ ಫಿಟ್ ನೆಸ್ ಗೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಾರೆ. ಈ ಹಾದಿಯಲ್ಲೇ ಆಕೆ ಸದಾ ಯೋಗಾ, ಜಿಮ್ ಸೆಷ್ಟನ್ಸ್ ಗೆ ಹಾಜರಾಗುತ್ತಲೇ ಇದ್ದಾರೆ. ಇದೀಗ ಆಕೆಯ ಕಾಲಿಗೆ ಗಾಯವಾಗಿದ್ದರೂ ಸಹ ಆಕೆ ಜಿಮ್ ಗೆ ಹೋಗಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳು ಇದೀಗ ವೈರಲ್ ಆಗುತ್ತಿವೆ. ಪೂಜಾ ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ಆಕೆ ನೋವಿನೊಂದಿಗೆ ನಡೆಯಬೇಕಾದ ದುಸ್ಥಿತಿ ಎದುರಾಗಿದ್ದು, ಹಾಗೆಯೇ ಆಕೆ ಜಿಮ್ ಗೆ ಹೋಗಿದ್ದು, ತನ್ನ ಗ್ಲಾಮರ್‍ ಆಂಗಲ್ ನಲ್ಲೇ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆ ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದು. ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಕಾಲಿಗೆ ಗಾಯದೊಂದಿಗೆ ಪೂಜಾ ಹೆಗ್ಡೆ ಜಿಮ್ ಬಳಿ ಕಾಣಿಸಿಕೊಂಡಿದ್ದಾರೆ. ತನ್ನ ಕಾರಿನ ಬಳಿ ನಡೆದುಕೊಂಡು ಹೋಗಲು ತುಂಬಾನೆ ಕಷ್ಟಪಡುತ್ತಿದ್ದಾರೆ. ಈ ಪೊಟೋ ಹಾಗೂ ವಿಡಿಯೋಗಳನ್ನು ಮುಂಬೈ ಮೂಲದ ಪೊಟೋಗ್ರಾಫರ್‍ ಗಳು ಸೋಷಿಯಲ್ ಮಿಡಿಯಾ ಮೂಲಕ ಹರಿಬಿಟ್ಟಿದ್ದಾರೆ. ಇನ್ನೂ ಪೂಜಾ ಹೆಗ್ಡೆ ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಜೊತೆಗೆ ಕಿಸಿಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಶೂಟಿಂಗ್ ಸಮಯದಲ್ಲೇ ಆಕೆ ತನ್ನ ಕಾಲಿಗೆ ಗಾಯ ಮಾಡಿಕೊಂಡಿದ್ದರು. ವೈದ್ಯರು ವಿಶ್ರಾಂತಿ ಅವಶ್ಯಕ ಎಂದು ಹೇಳಿದ್ದರು. ಅದರಂತೆ ಕೆಲವು ದಿನಗಳ ಕಾಲ ಆಕೆ ಮನೆಯಲ್ಲಿಯೇ ರೆಸ್ಟ್ ಮಾಡುತ್ತಿದ್ದರು. ಇದೀಗ ಪೂಜಾ ಹೆಗ್ಡೆ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡೆ ಜಿಮ್ ಗೆ ಹೋಗಿದ್ದಾರೆ. ಜಿಮ್ ನಿಂದ ಹೊರಬರುವಾಗ ಆಕೆ ತನ್ನ ಕಾರಿನ ಬಳಿಕೆ ಹೋಗಲು ತುಂಬಾ ಕಷ್ಟಪಡುತ್ತಿದ್ದರು. ಇದೇ ವೇಳೆ ಆಕೆ ಕ್ಯೂಟ್ ಸ್ಮೈಲ್ ನೊಂದಿಗೆ ಪೊಟೋ ಗ್ರಾಫರ್‍ ಗಳಿಗೆ ಪೋಸ್‌ ಕೊಟ್ಟಿದ್ದಾರೆ.

ಇನ್ನೂ ಪೂಜಾ ಹೆಗ್ಡೆ ಸೌತ್ ಅಂಡ್ ನಾರ್ತ್‌ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಹುಬೇಡಿಕೆ ನಟಿಯರಲ್ಲಿ ಪೂಜಾ ಸಹ ಒಬ್ಬರಾಗಿದ್ದಾರೆ. ಆಕೆಯ ಸಿನೆಮಾಗಳು ಸೋತರೂ ಸಹ ಆಕೆ ಸಾಲು ಸಾಲು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

Previous articleಸಮಂತಾ ನಿರ್ಧಾರದ ಮೇಲೆ ಯಶೋಧ ಸೀಕ್ವೆಲ್ ಬರಲಿದೆ ಎಂದ ನಿರ್ದೇಶಕ ಹಾಗೂ ನಿರ್ಮಾಪಕ…!
Next articleನಡುರಸ್ತೆಯಲ್ಲೇ ಕುಡಿದು ಗಲಾಟೆ ಮಾಡಿದ ಆಶಿಕಾ ರಂಗನಾಥ್, ವೈರಲ್ ಆದ ವಿಡಿಯೋ…!