ಆ ಸಮಯದಲ್ಲಿ ಆತ್ಮಹತ್ಯೆಗೆ ಸಿದ್ದವಾಗಿದ್ದೆ ಎಂದ ಸೀತಾರಾಮಂ ಬ್ಯೂಟಿ ಮೃಣಾಲ್, ಕಾರಣ ಏನು?

ಸೀತಾರಾಮಂ ಸಿನೆಮಾದ ಮೂಲಕ ದೊಡ್ಡ ಕ್ಲಾಸಿಕಲ್ ಹಿಟ್ ಮುಡಿಗೇರಿಸಿಕೊಂಡ ನಟಿ ಮೃಣಾಲ್ ಠಾಕೂರ್‍ ತುಂಬಾ ಕಷ್ಟಗಳನ್ನು ಅನುಭವಿಸಿದ್ದರಂತೆ. ಒಂದು ಸಮಯದಲ್ಲಿ ಡಿಪ್ರೆಷನ್ ಗೆ ಸಿಲುಕಿ ಆತ್ಮಹತ್ಯೆ ಸಹ ಮಾಡಿಕೊಳ್ಳಲು ಸಿದ್ದವಾಗಿದ್ದರಂತೆ. ಸೀತಾರಾಮಂ ಸಿನೆಮಾದ ಮೂಲಕ ಅನೇಕರ ಯುವಕರ ಕ್ರಷ್ ಆಗಿದ್ದ ಮೃಣಾಲ್ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾದರೂ ಯಾಕೆ, ಆಕೆ ಜೀವನದಲ್ಲಿ ಎದುರಿಸಿದ ಸಂಕಷ್ಟಗಳು ಯಾವುದು ಎಂದು ವಿಚಾರಕ್ಕೆ ಬಂದರೇ,

ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಅನೇಕ ಯುವಕರ ಮನಗೆದ್ದಿದ್ದಾರೆ. ಆಕೆಯ ಫಾಲೋಯಿಂಗ್ ಸಾಗರದಂತೆ ಹಬ್ಬುತ್ತಿದೆ. ಬಾಲಿವುಡ್ ನಟಿ ಮೃಣಾಲ್ ಇದೀಗ ತೆಲುಗು ಸಿನಿರಂಗದಲ್ಲಿ ಸೀತಾ ಎಂದೇ ಕರೆಯಲಾಗುತ್ತಿದೆ. ಪುರಾಣಗಳಲ್ಲಿ ಸೀತೆ ಎಷ್ಟು ಕಷ್ಟಗಳನ್ನು ಪಟ್ಟಿದ್ದಾರೆಯೋ ಅದೇ ರೀತಿ ಮೃಣಾಲ್ ಸಹ ತುಂಬಾನೆ ಕಷ್ಟಗಳನ್ನು ಎದುರಿಸಿದ್ದಾರಂತೆ. ಸಿನೆಮಾಗಳಲ್ಲಿ ನಟಿಸಲು ಆಡಿಷನ್ ಗೆ ಹೋದಾಗ ಆಕೆ ತುಂಬಾ ಅವಮಾನಗಳನ್ನು ಎದುರಿಸಿದ್ದರಂತೆ. ಸೀರಿಯಲ್ ಗಳಲ್ಲಿ ನಟಿಸುವಂತಹವರು ನೀನು ಹೇಗೆ ನಟಿಯಾಗುತ್ತೀಯಾ ಎಂದು ಅವಮಾನಿಸಿದ್ದಾರೆ. ಬಾಲ್ಯದಲ್ಲೂ ಸಹ ಆಕೆ ಸಂಕಷ್ಟಗಳನ್ನು ಸಹ ಎದುರಿಸಿದ್ದರಂತೆ. ಮೃಣಾಲ್ ಹುಟ್ಟಿದ್ದು ಮಹಾರಾಷ್ಟ್ರದಲ್ಲಿ. ಆಕೆಯ ತಂದೆಯದ್ದು ಬ್ಯಾಂಕ್ ಕೆಲಸ ಅದ್ದರಿಂದ ವರ್ಗಾವಣೆ ಆಗುತ್ತಲೇ ಇದ್ದರು. ಈ ಕಾರಣದಿಂದ 11 ಶಾಲೆಗಳನ್ನು ಇಂಟರ್‍ ಮುಗಿಯುವ ಒಳಗೆ ಬದಲಿಸಿದ್ದೇನೆ. ಈ ಕಾರಣದಿಂದಲೇ ನನಗೆ ಸ್ನೇಹಿತರೂ ಸಹ ಇಲ್ಲ ಎಂದಿದ್ದಾರೆ.

ನಾನು 8ನೇ ತರಗತಿಯಲ್ಲಿ ನನ್ನ ತಂದೆಗೆ ಮುಂಬೈಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅಲ್ಲೇ ಶಾಲೆಗೆ ಸೇರಿಸಿದ್ದೇನೆ. ಅಲ್ಲಿಯವರೆಗೂ ಗ್ರಾಮೀಣ ಪ್ರದೇಶದಲ್ಲಿ ಓದಿದ ಹಿನ್ನೆಲೆಯಲ್ಲಿ ನನಗೆ ಇಂಗ್ಲೀಷ್ ಸರಿಯಾಗಿ ಬರಲಿಲ್ಲ.  ಇದರಿಂದ ನನ್ನ ಸಹಪಾಠಿ ಗಳು ನನ್ನನ್ನು ಹಿಯಾಳಿಸಿದರು. ಬಳಿಕ ಮಾಸ್ ಮಿಡಿಯಾ ಕೋರ್ಸ್ ಮಾಡಲು ಹೋದೆ. ಆಗ ನನ್ನ ತಂದೆಯ ಸ್ನೇಹಿತರು ಅದೇನೂ ಕೋರ್ಸ್ ನಾನು ಎಂದೂ ಕೇಳಿಯೇ ಇಲ್ಲ ಎಂದು ಹೇಳಿದ್ದರು. ಬಳಿಕ ನನ್ನ ತಂದೆಗೆ ಬೇರೆ ಕಡೆಗೆ ವರ್ಗಾವಣೆಯಾದ ಕಾರಣ ನಾನು ಮುಂಬೈನಲ್ಲಿ ಸಿಂಗಲ್ ಆಗಿಯೇ ಇರಬೇಕಾಯಿತು. ಒಂದು ಕಡೆ ಒಂಟಿತನ, ಮತ್ತೊಂದು ಕಡೆ ನನ್ನ ತಂದೆಗೆ ನೋವು ಕೊಡುತ್ತಿದ್ದೇನೇಯೇ ಎಂಬ ಭವನೆಯಿಂದ ಓದಿನ ಕಡೆ ಗಮನ ಹರಿಸದೇ ಕಷ್ಟಪಡುತ್ತಿದೆ. ಎಲ್ಲಾ ಆಲೋಚನೆಗಳ ಕಾರಣದಿಂದ ನಾನು ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಸಿದ್ದವಾಗಿದೆ. ಟ್ರೈನ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಕೊಂಡೆ ಎಂದು ತಾನು ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ.

ಬಳಿಕ ಹಂತ ಹಂತವಾಗಿ ಡಿಪ್ರೆಷನ್ ನಿಂದ ಹೊರಬಂದೆ. ಆಗಲೇ ನಾನು ಸ್ನೇಹಿತರ ಸಲಹೆಯಂತೆ ಸಿನೆಮಾಗಳಲ್ಲಿ ಎಂಟ್ರಿ ಕೊಡಲು ತೀರ್ಮಾನಿಸಿದೆ. ಮಾಡಲಿಂಗ್ ಮೂಲಕ ಸಿನಿರಂಗದಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲು ಮುಂದಾದೆ. ಇನ್ನೂ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕರೊಬ್ಬರು ನನ್ನನ್ನು ನೋಡಿ ಕುಚ್ ಕಹೋ ತಿ ಹೈ ಖಾ ಮೋಷಿಯಾ ಎಂಬ ಸೀರಿಯಲ್ ನಲ್ಲಿ ಅವಕಾಶ ಕೊಟ್ಟರು. ಬಳಿಕ ಸಿನೆಮಾಗಳಲ್ಲಿ ಎಂಟ್ರಿ ಕೊಡಲು ಸಹ ಆಡಿಷನ್ ಗಳಲ್ಲಿ ಭಾಗಿಯಾದರು ಆದರೆ ಅಲ್ಲಿ ಅನೇಕ ಅವಮಾನಗಳನ್ನು ಎದುರಿಸಿದೆ. ಪಟ್ಟು ಬಿಡದೇ ನಾನು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡೆ ಎಂದು ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಸಂಕಷ್ಟಗಳ ಬಗ್ಗೆ ಮೃಣಾಲ್ ತಿಳಿಸಿದ್ದಾರೆ.

Previous articleಜಾಕೆಟ್ ಬಿಚ್ಚಿ ಬ್ರಾ ಸೌಂದರ್ಯ ಪ್ರದರ್ಶನ ಮಾಡಿದ ಹಾಟ್ ಬ್ಯೂಟಿ ಶ್ರದ್ದಾದಾಸ್…!
Next articleರಾತ್ರಿ ಸಮಯದಲ್ಲಿ ಸಿಂಗಲ್ ಆಗಿಬಿಟ್ಟಿದ್ದೇನೆ ಎಂದು ವಿರಹ ವೇದನೆಯಿಂದ ಬೆಡ್ ರೂಂ ವಿಡಿಯೋ ಶೇರ್ ಮಾಡಿದ ಅನಸೂಯ..!