Uncategorized

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಲೇಟೆಸ್ಟ್ ಲುಕ್ ನೋಡಿ ಶಾಕ್ ಆದ ಅಭಿಮಾನಿಗಳು….!

ಸೌತ್ ಸಿನಿರಂಗದಲ್ಲಿ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ ಕಾಜಲ್ ಅಗರ್ವಾಲ್ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಇದೀಗ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ. ಆಕೆ ಸಿನೆಮಾಗಳಿಂದ ದೂರವೇ ಉಳಿದರು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಇದೀಗ ಆಕೆಯ ಲೇಟೆಸ್ಟ್ ಲುಕ್ಸ್ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಆಕೆಯ ಅಭಿಮಾನಿಗಳೂ ಸಹ ಆಕೆಯ ಈ ಹೊಸ ಗೆಟಪ್ ನೋಡಿ ಶಾಕ್ ಆಗಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ಇತ್ತಿಚಿಗಷ್ಟೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿದೇ ಇದೆ. ಸದ್ಯ ಆಕೆ ಸಿನೆಮಾಗಳ ಜೊತೆಗೆ ಮಗನ ಲಾಲನೆ ಪಾಲನೆಯಲ್ಲೂ ಸಹ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಹೆಂಗಸರು ಮಕ್ಕಳಾದ ಬಳಿಕ ಸ್ಲಿಮ್ ಬಾಡಿ ಮೈಂಟೈನ್ ಮಾಡುವುದು ತುಂಬಾನೆ ಕಷ್ಟ ಎನ್ನಲಾಗುತ್ತದೆ. ಇದೀಗ ಅಂತಹುದೇ ಸಮಸ್ಯೆಯನ್ನು ಸಹ ಕಾಜಲ್ ಎದುರಿಸಿದ್ದಾರೆ. ಕಳೆದ 2020 ರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಕಾಜಲ್ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಇದೀಗ ಮಗುವಿನ ತಾಯಿಯಾದ ಕಾಜಲ್ ಕೊಂಚ ದಪ್ಪವಾಗಿದ್ದಾರೆ. ಆಕೆಯ ಲೇಟೆಸ್ಟ್ ವಿಡಿಯೋ ಹಾಗೂ ಕೆಲವು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯನ್ನು ಈ ಹೊಸ ಗೆಟಪ್ ನಲ್ಲಿ ನೋಡಿದ ಅಭಿಮಾನಿಗಳು ಶಾಕ್ ಸಹ ಆಗಿದ್ದಾರೆ.

ತಾಯಿಯಾದ ಬಳಿಕ ಕಾಜಲ್ ದಪ್ಪವಾಗಿದ್ದಾರೆ. ಆಕೆಯ ಹೊಸ ಲುಕ್ಸ್ ನೋಡಿದರೇ ತಿಳಿಯುತ್ತದೆ ಆಕೆ ದಪ್ಪ ಆಗಿದ್ದಾರೆಂದು. ಇನ್ನೂ ಆಕೆಯ ಲೇಟೆಸ್ಟ್ ಪೊಟೋಗಳನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಮೇಡಂ ನೀವು ಮೊದಲಿನಂತೆ ಸ್ಲಿಮ್ ಆಗಬೇಕು. ಮೊದಲಿನಂತಹ ಕಾಜಲ್ ಆಗಿ ದೊಡ್ಡ ಪರದೆಯ ಮೇಲೆ ಸದ್ದು ಮಾಡಬೇಕು ಎಂದು ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ. ಇನ್ನೂ ಯಾವುದೇ ಮಹಿಳೆಗೆ ತಾಯ್ತನ ಎಂಬುದು ಎಲ್ಲದಕ್ಕಿಂತಲು ದೊಡ್ದ ವಿಚಾರವಾಗಿದೆ. ಆದ ಕಾರಣ ಆಕೆ ದಪ್ಪವಾಗಿದ್ದಾರೆ ಎಂದು ಬಾದೆಪಡುವ ಅವಶ್ಯಕತೆಯಿಲ್ಲ ಎಂಬ ಕಾಮೆಂಟ್ ಗಳೂ ಸಹ ಕೇಳಿಬರುತ್ತಿವೆ. ಇನ್ನೂ ಕಾಜಲ್ ಇದೀಗ ಮಗನ ಲಾಲನೆ ಪಾಲನೆ ಹಾಗೂ ಸಿನೆಮಾಗಳು ಎರಡನ್ನೂ ಸಹ ಬ್ಯಾಲೆನ್ಸ್ ಮಾಡುತ್ತಾ ಸಾಗುತ್ತಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಭಾರತೀಯುಡು 2 ಸಿನೆಮಾದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಿನೆಮಾ ಸ್ಟಾರ್‍ ನಿರ್ದೇಶಕ ಶಂಕರ್‍ ಹಾಗೂ ನಟ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿದೆ. ಈ ಸಿನೆಮಾದಲ್ಲಿ ಸೆಕೆಂಡ್ ಹಿರೋಯಿನ್ ಆಗಿ ರಕುಲ್ ಪ್ರೀತ್ ಸಿಂಗ್ ಸಹ ನಟಿಸುತ್ತಿದ್ದಾರೆ. ಈ ಸಿನೆಮಾಗಳ ಜೊತೆಗೆ ತಮಿಳಿನಲ್ಲಿ ಎರಡು ಸಿನೆಮಾಗಳು ಹಾಗೂ ಹಿಂದಿ ಸಿನೆಮಾ ಒಂದರಲ್ಲಿ ನಟಿಸುವ ಮೂಲಕ ಬ್ಯುಸಿಯಾಗಿದ್ದಾರೆ. ಜೊತೆಗೆ ತನ್ನ ಪತಿಯ ಬ್ಯುಸಿನೆಸ್ ನಲ್ಲೂ ಸಹ ಸಹಾಯ ಮಾಡುತ್ತಿರುತ್ತಾರೆ.

Trending

To Top