ಐಶ್ವರ್ಯ ರೈ ಗರ್ಭಿಣಿಯಾದರೇ, ಹೊಟ್ಟೆ ದಪ್ಪ ಕಾಣಿಸಿದ್ದಕ್ಕೆ ನೆಟ್ಟಿಗರು ಅಯೋಮಯ, ಸಿಕ್ಕಾಪಟ್ಟೆ ಟ್ರೋಲ್ ಆದ ಐಶ್ವರ್ಯ…!

ದೇಶದ ಸಿನಿರಂಗದಲ್ಲಿ ದೊಡ್ಡ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಐಶ್ವರ್ಯ ರೈ ಬಚ್ಚನ್ ಸಹ ಒಬ್ಬರಾಗಿದ್ದಾರೆ. ವಿಶ್ವ ಸುಂದರಿಯಾಗಿ ವಿಶ್ವಕ್ಕೆ ಪರಿಚಯವಾದರು. ವಯಸ್ಸಾದರೂ ಸಹ ಆಕೆ ಇಂದಿಗೂ ಸಹ ಸಿನೆಮಾಗಳಲ್ಲಿ ಬ್ಯುಸಿಯಾದ ನಟಿಯಾಗಿದ್ದಾರೆ. ಇನ್ನೂ ಐಶ್ವರ್ಯ ಬಹುನಿರೀಕ್ಷಿತ ಪೊನ್ನಿಯನ್ ಸೆಲ್ವನ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಿನೆಮಾ ಪ್ರಮೋಚನ್ ಕೆಲಸ ಭರದಿಂದ ಸಾಗುತ್ತಿದೆ. ಈ ಸಮಯದಲ್ಲೇ ಐಶ್ವರ್ಯರನ್ನು ಕಂಡ ಅನೇಕರು ಆಕೆ ಗರ್ಭಿಣಿಯಾಗಿದ್ದಾರೆಯೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿಗಷ್ಟೆ ಐಶ್ವರ್ಯ ರೈ ಮುಂಬೈ ವಿಮಾನ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದರು. ಈ ಪ್ರಯಾಣ ಆಕೆ ಏತಕ್ಕಾಗಿ ಕೈಗೊಂಡರು ಎಂಬ ಬಗ್ಗೆ  ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. ಐಶ್ವರ್ಯ ಕಪ್ಪು ಟಿ ಶರ್ಟ್ ಹಾಗೂ ಟೈಟ್ ಲೆಗ್ಗಿಂಗ್ಸ್ ಧರಿಸಿದ್ದು, ಅದರ ಮೇಲೆ ವೈಟ್ ಕಲರ್‍ ಉದ್ದನೇಯ ಕೋಟ್ ಧರಿಸಿದ್ದಾರೆ. ಶೂಗಳನ್ನು ಧರಿಸಿ ಕೈನಲ್ಲಿ ಕಪ್ಪು ಬಣ್ಣದ ಹ್ಯಾಂಡ್ ಬ್ಯಾಗ್ ಸಹ ಹಿಡಿದುಕೊಂಡಿದ್ದರು. ಈ ಪೊಟೋಗಳಲ್ಲಿ ಐಶ್ವರ್ಯ ಕೊಂಚ ದಪ್ಪವಾಗಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಐಶ್ವರ್ಯ ಮತ್ತೆ ಗರ್ಭಿಣಿಯಾಗಿದ್ದಾರೆಯೆ ಎಂಬ ಅನುಮಾನಗಳು ಸಹ ನೆಟ್ಟಿಗರಲ್ಲಿ ಹುಟ್ಟಿದೆ. ಐಶ್ವರ್ಯ ರೈ ರವರ ಈ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ವಿಡಿಯೋ ಪೊಟೋಗಳನ್ನು ನೋಡಿದ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಐಶ್ವರ್ಯ ರೈ ರನ್ನು ನೋಡಿದ ಅನೇಕರು ಆಕೆ ಮತ್ತೆ ಗರ್ಭಿಣಿಯಾಗಿದ್ದಾರೆ. ಒಳ್ಳೆಯ ಸುದ್ದಿ ಶುಭಾಷಯಗಳು ಎಂದರೇ ಮತ್ತೆ ಕೆಲವರು ಆಕೆ ಗರ್ಭಿಣಿಯಾಗಿದ್ದಾರೆ ಆದರೆ ಅದನ್ನು ರಹಸ್ಯವಾಗಿ ಇಡುವ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಎರಡನೇ ಬೇಬಿ ಬಚ್ಚನ್  ಅವರ ಕುಟುಂಬದಲ್ಲಿ ಸೇರಲಿದೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕಳೆದ 2007 ರಲ್ಲಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ರವರಿಗೆ ಮದುವೆಯಾಗಿದ್ದು, 2011 ರಲ್ಲಿ ಆರಾಧ್ಯಳಿಗೆ ಜನ್ಮ ನೀಡಿದರು. ಇದೀಗ ಐಶ್ವರ್ಯ ರೈ ಶೀಘ್ರದಲ್ಲೆ 49ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ಟ್ರೋಲ್ ಗಳು ಎಲ್ಲಾ ಕಡೆ ಸಖತ್ ವೈರಲ್ ಆಗಿದೆ.

ಇನ್ನೂ ಸೌತ್ ನಲ್ಲಿ ಬಹುನಿರೀಕ್ಷಿತ ಸಿನೆಮಾ ಪೊನ್ನಿಯನ್ ಸೆಲ್ವನ್-1 ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಈ ಸಿನೆಮಾ ತಮಿಳು ಸೇರಿದಂತೆ ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಸೆ.30 ರಂದು ಈ ಸಿನೆಮಾ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ. ಮೂಲಗಳ ಪ್ರಕಾರ ಈ ಸಿನೆಮಾ ಸುಮಾರು ಐನೂರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದೆಯಂತೆ. ಈ ಸಿನೆಮಾ ಯಾವ ಸಿನೆಮಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Previous articleಸಮಂತಾ ಆ ಕಾರಣಕ್ಕಾಗಿಯೇ ಅಮೇರಿಕಾ ಹೋದ್ರಂತೆ, ಆಕ್ಷನ್ ಗಾಗಿ ಆಕೆ ಅಮೇರಿಕಾಗೆ ಹೋದರಂತೆ…!
Next articleಅಂತೂ ಇಂತೂ ನಯನ್ ವಿಘ್ನೇಶ್ ಮದುವೆಯ ಟೀಸರ್ ವಿಡಿಯೋ ರಿಲೀಸ್, ವಿಘ್ನೇಶ್ ಪ್ರೀತಿಗೆ ನಯನ್ ಬಿದ್ದಿದ್ದು ಹೇಗೆ ಗೊತ್ತಾ?