Film News

ಸುದೀಪ್ ಸಿನೆಮಾ ರಂಗದಲ್ಲಿ 25 ವರ್ಷ ಪೂರೈಕೆ: ಹರಿದುಬಂದ ಶುಭಾಷಯಗಳು

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಇಂದಿಗೆ ಚಿತ್ರರಂಗಕ್ಕೆ ಪ್ರವೇಶಿಸಿ ೨೫ ವರ್ಷಗಳನ್ನು ಪೂರೈಸಿದ್ದು, ದೇಶದ ಸಿನಿರಂಗದ ಖ್ಯಾತ ಕಲಾವಿದರಿಂದ ಶುಭಾಷಯಗಳ ಸುರಿಮಳೆ ಹರಿದು ಬರುತ್ತಿದೆ.

ಸುದೀಪ್ ರವರ ಸಿನಿರಂಗ ಪ್ರವೇಶಿಸಿ ಇಂದಿಗೆ ೨೫ ವರ್ಷ ಪೂರೈಸಿದದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮ ಜೋರಾಗಿ ನಡೆಯುತ್ತಿದೆ. ಇನ್ನೂ ರಿಯಲ್ ಸ್ಟಾರ್ ಉಪೇಂದ್ರ, ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್, ಬಹುಭಾಷ ನಟಿ ಪ್ರಿಯಮಣಿ, ರಮ್ಯಕೃಷ್ಣ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ವಿಡಿಯೋ ಮೂಲಕ ಕಿಚ್ಚನಿಗೆ ಶುಭಾಷಯಗಳನ್ನು ಕೋರಿದ್ದಾರೆ. ಇನ್ನೂ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಸಹ ಟ್ವಿಟರ್ ಮೂಲಕ ಕಿಚ್ಚನಿಗೆ ಶುಭಾಷಯಗಳನ್ನು ಕೋರಿದ್ದಾರೆ. ಉಪೇಂದ್ರ ರವರು ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಇಂಡಸ್ಟ್ರಿಯರಲ್ಲಿ ೨೫ ವರ್ಷ ಪೂರೈಸಿ ಮುನ್ನುಗ್ಗುತ್ತಿರುವ ಸುದೀಪ್ ರವರಿಗೆ ಶುಭಾಷಯಗಳು, ನಿಮ್ಮ ತಂದೆ-ತಾಯಿ, ಅಭಿಮಾನಿಗಳ ಆರ್ಶೀವಾದವರಿರಲಿ ಎಂದು ಶುಭ ಹಾರೈಸಿದ್ದಾರೆ.

ಇನ್ನೂ ಇದೇ ಹಾದಿಯಲ್ಲಿ ಬಹುಭಾಷ ನಟಿ ಪ್ರಿಯಮಣಿ ಸಹ ಶುಭಾಷಯಗಳನ್ನು ಕೋರಿದ್ದು, ಸಿನೆಮಾ ಇಂಡಸ್ಟ್ರಿಯಲ್ಲಿ ೨೫ ವರ್ಷ ಪೂರೈಸಿದ ಸುದೀಪ್ ರವರಿಗೆ ಶುಭಾಷಯಗಳು, ನಿಮ್ಮ ಸಾಧನೆ ಇನಷ್ಟು ಮುಂದುವರೆಯಲಿ, ನಿಮ್ಮ ಜೊತೆ ನಟಿಸಿದ್ದ ನನಗೆ ನಿಜಕ್ಕೂ ಸಂತಸ ತಂದಿದೆ ಎಂದು ವಿಶ್ ಮಾಡಿದ್ದಾರೆ.

ಇನ್ನೂ ಮತ್ತೋರ್ವ ಬಹುಭಾಷ ನಟ ರಮ್ಯಕೃಷ್ಣ ಸಹ ಸುದೀಪ್ ರವರಿಗೆ ಶುಭಾಷಯಗಳನ್ನು ಕೋರಿದ್ದಾರೆ. ಜೊತೆಗೆ ಟಾಲಿವುಡ್ ನಿರ್ದೇಶಕ ಸುರೇಂದ್ರರೆಡ್ಡಿ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಷಯಗಳನ್ನು ಕೋರುತ್ತಿದ್ದಾರೆ.

Trending

To Top