ಆಫ್ರಿಕಾ ಅರಣ್ಯದಲ್ಲಿ ತನ್ನ ಪ್ರೀತಿಯ ಪತ್ನಿಯೊಂದಿಗೆ ಎಂಜಾಯ್ ಮಾಡುತ್ತಿರುವ ರಾಮ್ ಚರಣ್…!

ತೆಲುಗು ಸಿನಿರಂಗದ ಕ್ಯೂಟ್ ಅಂಡ್ ಬೆಸ್ಟ್ ಜೋಡಿಗಳಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ಜೋಡಿ ಸಹ ಒಂದೆಂದು ಹೇಳಬಹುದಾಗಿದೆ. ಮದುವೆಯಾದಾಗಿನಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಟಾಲಿವುಡ್ ನಲ್ಲಿ ಬೆಸ್ಟ್ ಕಪಲ್ಸ್ ಆಗಿ ಜೀವನ ಮುಂದುವರೆಸುತ್ತಿದ್ದಾರೆ. ಇನ್ನೂ ಸಮಾಜದ ಬಗ್ಗೆ ಸಹ ಚಿಂತಿಸುವ ಇವರು ತುಂಬಾ ಜವಾಬ್ದಾರಿಯಿಂದ ಅನೇಕರಿಗೆ ಆದರ್ಶಪ್ರಾಯರಾಗಿದ್ದಾರೆ. ಇತ್ತೀಚಿಗಷ್ಟೆ RRR ಸಿನೆಮಾದ ಪ್ರಮೋಷನ್ ಗಾಗಿ ಜಪಾನ್ ಗೆ ರಾಮ್ ಚರಣ್ ಉಪಾಸನಾ, ಎನ್.ಟಿ.ಆರ್‍ ಪ್ರಣಿತಿ ರಾಜಮೌಳಿಯೊಂದಿಗೆ ಹೋಗಿದ್ದರು. ಅಲ್ಲಿನ ಕೆಲವೊಂದು ವಿಡಿಯೋಗಳು ಪೊಟೋಗಳು ಸಹ ವೈರಲ್ ಆಗಿತ್ತು.

ಇದೀಗ ರಾಮ್ ಚರಣ್ ಹಾಗೂ ಉಪಾಸನಾ ರವರ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆಫ್ರಿಕಾ ಅರಣ್ಯಗಳಲ್ಲಿ ವೈಲ್ಡ್ ಲೈಫ್ ಎಂಜಾಯ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರೂ ಆಫ್ರಿಕಾ ಅರಣ್ಯದ ಸೌಂದರ್ಯವನ್ನು ಸವಿಯುತ್ತಾ ಆ ಸಂತಸದ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ನಿಟ್ಟಿನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅರಣ್ಯದಲ್ಲಿನ ಹುಲಿಗಳನ್ನು ಪೊಟೋ ತೆಗೆದಿದ್ದಾರೆ. ಜತೆಗೆ ಅಲ್ಲಿನವರೊಂದಿಗೆ ಬೆರೆತು ಅಡುಗೆ ಸಹ ಮಾಡಿದ್ದಾರೆ. ಇನ್ನೂ ವಿಡಿಯೋ ರನ್ನಿಂಗ್ ನಲ್ಲಿರುವಾಗಲೇ ಪೊಟೋಗಳಿಗೂ ಸಹ ಚರಣ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಚರಣ್ ರವರ ಈ ಸ್ಟೈಲಿಷ್ ಲುಕ್ಸ್ ಅಭಿಮಾನಿಗಳನ್ನು ಸೆಳೆದಿವೆ. ಇನ್ನೂ ಚರಣ್ ರವರ ಈ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಸಹ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇತ್ತೀಚಿಗಷ್ಟೆ ಜಪಾನ್ ಗೆ ಆರ್‍.ಆರ್‍.ಆರ್‍ ಸಿನೆಮಾ ಪ್ರಮೋಷನ್ ಗಾಗಿ ರಾಜಮೌಳಿ, ಯಂಗ್ ಟೈಗರ್‍ ಎನ್.ಟಿ.ಆರ್‍, ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಹೋಗಿದ್ದರು. ಅವರೊಂದಿಗೆ ಅವರ ಪತ್ನಿಯರೂ ಸಹ ಹೋಗಿದ್ದರು. ಅಲ್ಲಿನ ಕೆಲವೊಂದು ಪೊಟೊಗಳು, ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. RRR ಸಿನೆಮಾದ ಮೂಲಕ ರಾಮ್ ಚರಣ್ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಇಡೀ ಪ್ರಪಂಚದಲ್ಲೇ ಫೇಮ್ ಪಡೆದುಕೊಂಡರು. ಇನ್ನೂ ಜಪಾನ್ ನಲ್ಲೂ ಸಹ RRR ಸಿನೆಮಾ ಗ್ರಾಂಡ್ ಆಗಿ ರಿಲೀಸ್ ಆಗಿದೆ. ಜಪಾನ್ ನ ಸಿನಿರಸಿಕರು ತೋರಿದ ಪ್ರೀತಿಗೆ ಚರಣ್ , ಎನ್.ಟಿ.ಆರ್‍ ಇಬ್ಬರೂ ತುಂಬಾನೆ ಖುಷಿಪಟ್ಟರು. ಇನ್ನೂ RRR ಸಿನೆಮಾ ಅನೇಕ ರೆಕಾರ್ಡ್‌ಗಳನ್ನು ಸಹ ಬ್ರೇಕ್ ಮಾಡಿದೆ. ಜೊತೆಗೆ ವಿಶ್ವದ ಖ್ಯಾತ ಸಿನೆಮಾ ಮ್ಯಾಗಜೈನ್ ಎಂಪೈರ್‍ ಸಹ ರಾಜಮೌಳಿಯವರನ್ನು ಪ್ರತ್ಯೇಕವಾಗಿ ಸಂದರ್ಶನ ಮಾಡಿದ್ದು ಈ ಸಿನೆಮಾದ ವಿಶೇಷತೆ ಎಂತಲೇ ಕರೆಯಬಹುದು.

ಸದ್ಯ ರಾಮ್ ಚರಣ್ ಕಾಲಿವುಡ್ ಸ್ಟಾರ್‍ ನಿರ್ದೇಶಕ ಶಂಕರ್‍ ನಿರ್ದೇಶನ ಮಾಡುತ್ತಿರುವ RC15 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೈದರಾಬಾದ್ ಗೆ ಮರಳಿದ ಬಳಿಕ ಸಿನೆಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಚರಣ್. ಇನ್ನೂ ಈ ಸಿನೆಮಾ ಈಗಾಗಲೇ ತುಂಬಾನೆ ಹೈಪ್ ಕ್ರಿಯೇಟ್ ಮಾಡಿದ್ದು, ಚರಣ್ ಕೆರಿಯರ್‍ ನಲ್ಲೇ ಬಿಗ್ಗೆಸ್ಟ್ ಹಿಟ್ ಸಿನೆಮಾ ಆಗಲಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ.

Previous articleಮದುವೆಗೂ ಮುಂಚೆಯೇ ಆಲಿಯಾ ಭಟ್ ಗರ್ಭಿಣಿಯಾಗಿದ್ರಾ, ವೈರಲ್ ಆದ ಸುದ್ದಿ….!
Next articleಪಬ್ಲಿಕ್ ನಲ್ಲಿ ಪ್ರಣಿತಾ ಮಾಡಿದ ಆ ಕೆಲಸಕ್ಕೆ ಸಿಕ್ಕಾಪಟ್ಟೆ ಟ್ರೋಲ್, ತಾಳಲಾರದೆ ಹೋದ್ರಾ ಎಂದ ನೆಟ್ಟಿಗರು…!