Film News

ಪ್ರಿಯಾಮಣಿ ಅವರಿಗೆ 300 ರೂಪಾಯಿ ನೀಡಿದ್ದೇಕೆ ಕಿಂಗ್ ಖಾನ್?

ಬಾಲಿವುಡ್ ನಟ ಶಾರುಖ್ ಖಾನ್ ಜೊತೆ ಆಕ್ಟ್ ಮಾಡಬೇಕೆಂಬುದು ಅದೆಷ್ಟೋ ಜನರ ಆಸೆ ಅದಕ್ಕಾಗಿ ಕಾಯುತ್ತಿರುತ್ತಾರೆ.2013 ರಲ್ಲಿ ಶಾರುಖ್ ನಟನೆಯ ಚೆನೈ ಎಕ್ಸ್ಪ್ರೆಸ್ ಸಿನಿಮಾ ರಿಲೀಸ್ ಆಗಿತ್ತು.ಶಾರುಖ್ ಗೆ ಜೋಡಿಯಾಗಿ ದೀಪಿಕಾ ಮಿಂಚಿದ್ದರು.ಇದೇ ಚಿತ್ರದಲ್ಲಿ ಮತ್ತೊಬ್ಬ ಕನ್ನಡತಿ ಬಾದ್ಷಾ ಜೊತೆ 1 2 3 4 ಅಂತ ಹೆಜ್ಜೆ ಹಾಕಿದರು.ಹಾಡಿನ ಶೂಟಿಂಗ್ ನಲ್ಲಿ ಶಾರುಖ್ 300 ಕೊಟ್ಟಿರುವ ವಿಷಯ ಹೊರಬಿದ್ದಿದೆ.

ಒಂದು ಸಿನಿಮಾ ಶೂಟಿಂಗ್ ಅಂತ ಬಂದರೆ ಸಿನಿಮಾ ತಂಡ ಅದೆಷ್ಟೋ ದಿನ ಮನೆಗಳಿಂದ ದೂರವಾಗಿ ಚಿತ್ರೀಕರಣ ಮಾಡುತ್ತದೆ.ಸಹಜವಾಗಿ ಅಲ್ಲಿ ಜೊತೆಯಲ್ಲಿರುವ ಜೊತೆ ಒಂದು ಬಾಂಡಿಗ್ ಬೆಳೆಯುತ್ತೆ.ಸಿನಿಮಾಗು ಮುನ್ನ ಯಾರು ಎಂದು ಗೊತಿಲ್ಲದವರು ಸಿನಿಮಾ ಮುಗಿದಾಗ ಆಪ್ತರಾಗುತ್ತಾರೆ.ಇದೇ ರೀತಿ ಚೆನೈ ಎಸ್ಪ್ರೆಸ್ ಸಿನಿಮಾದ ಬಗ್ಗೆ ಪ್ರಿಯಾಮಣಿ ಮಾತನಾಡಿದ್ದಾರೆ.

ದಿಲ್ವಾಲ ನನ್ನ ಹೊಗಳಿ ಹಾಗಿದ್ದಾರೆ ಪಕ್ಕ ಸೌತ್ ಇಂಡಿಯನ್ ಶೈಲಿಯ ಹಾಡು ಅದಾಗಿತ್ತು 5 ದಿನ ರಾತ್ರಿ ನಿರಂತರವಾಗಿ ಶೂಟಿಂಗ್ ಅದಾಗಿತ್ತು.ಇನ್ನು ಶಾರೂಖ್ ಅಲ್ಲಿದ್ದವರ ಜೊತೆ ಎಂಜಾಯ್ ಮಾಡುತ್ತಾ ಶೂಟಿಂಗ್ ನಲ್ಲಿ ಬಾಗಿಯಾಗುತ್ತಿದ್ದರು ಯಾರಿಗೂ ತಾನೊಬ್ಬ ದೊಡ್ಡ ಸ್ಟಾರ್ ಎನ್ನುವ ಆಟಿಟ್ಯೂಡ್ ತೋರಿಸುತ್ತಿರಲಿಲ್ಲ.

ಶೂಟಿಂಗ್ ಟೈಮ್ ನ ಬಿಡುವಿನ ವೇಳೆಯಲ್ಲಿ ಗೇಮ್ ಆಡುತ್ತಾ ಇರುತ್ತಿದ್ವಿ.ಅವರ ಐ ಪ್ಯಾಡ್ ನಲ್ಲಿ ಕೌನ್ ಬನೇಗ ಕರೊಡ್ ಪತಿ ಅಡುತ್ತಿದೆ ಆ ಆಟದಲ್ಲಿ ಶಾರೂಖ್ ನನಗೆ 300 ಹಣ ಕೊಟ್ಟಿದ್ದರು.ಆ ಹಣ ಇನ್ನು ನನ್ನ ವಾಲೆಟ್ ನಲ್ಲಿದೆ ಎಂದು ಸ್ವೀಟ್ ಮೆಮೊರಿ ಯನ್ನ ಪ್ರಿಯಾಮಣಿ ಶೇರ್ ಮಾಡಿಕೊಂಡಿದ್ದಾರೆ..

Trending

To Top