ಪುಷ್ಪಾ-2 ಸಿನೆಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ಮಧ್ಯದಲ್ಲೆ ಸಾಯಿಸಿ, ಫಾರಿನ್ ಬ್ಯೂಟಿ ಎಂಟ್ರಿಯಂತೆ…..!

ದೇಶದ ಸಿನಿರಂಗದಲ್ಲಿ ದೊಡ್ಡ ಕ್ರೇಜ್ ದಕ್ಕಿಸಿಕೊಂಡಿರುವ ಸಿನೆಮಾದಲ್ಲಿ ಪುಷ್ಪಾ ಸಹ ಸ್ಥಾನ ಗಳಿಸಿಕೊಂಡಿದೆ. ಇಂದಿಗೂ ಸಹ ಈ ಸಿನೆಮಾದ ಹಾಡುಗಳು ಡೈಲಾಗ್ ಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಸದ್ಯ ಪುಷ್ಪಾ-2 ಸಿನೆಮಾದ ಬಗ್ಗೆ ದೊಡ್ಡ ಕ್ರೇಜ್ ಹುಟ್ಟಿಕೊಂಡಿದೆ. ಪುಷ್ಪಾ-1 ಸಿನೆಮಾ ಈಗಾಗಲೇ ದಕ್ಷಿಣ ಸೇರಿದಂತೆ ಬಾಲಿವುಡ್ ನಲ್ಲೂ ಸಹ ಒಳ್ಳೆಯ ಕಲೆಕ್ಷನ್ ಮಾಡಿದೆ. ಕೋಟಿಗಟ್ಟಲೇ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಮಾಡಿದೆ. ಇನ್ನೂ ಪುಷ್ಪಾ-2 ಸಿನೆಮಾವನ್ನು ಮತಷ್ಟು ಹಿಟ್ ಮಾಡಲು ನಿರ್ದೇಶಕ ಸುಕುಮಾರ್‍ ಪ್ಲಾನ್ ಮಾಡಿದ್ದು, ಅದಕ್ಕಾಗಿ ತಿಂಗಳುಗಳ ಗಟ್ಟಲೇ ಸ್ಕ್ರಿಪ್ಟ್ ವರ್ಕ್ ಮಾಡಿದ್ದಾರೆ.

ನಿರ್ದೇಶಕ ಸುಕುಮಾರ್‍ ಪುಷ್ಪಾ ಪಾರ್ಟ್-1 ಸಿನೆಮಾ ಕಥೆ ಸಿದ್ದ ಮಾಡಿದಾಗಲೇ ಪಾರ್ಟ್-2 ಸಹ ಸಿದ್ದ ಮಾಡಿದ್ದರಂತೆ. ಆದರೆ ಪುಷ್ಪಾ ಸಿನೆಮಾದ ಮುಂದುವರೆದ ಭಾಗವನ್ನು ದೊಡ್ಡ ಹಿಟ್ ಮಾಡುವ ಸಲುವಾಗಿ ಮೊದಲೇ ಸಿದ್ದಪಡಿಸಿದ ಕಥೆಯನ್ನು ಬದಲಾಯಿಸಿದ್ದಾರಂತೆ ಸುಕುಮಾರ್‍. ಸುಮಾರು ಆರು ತಿಂಗಳುಗಳಿಂದ ಸುಕುಮಾರ್‍ ಪುಷ್ಪಾ-2 ಸಿನೆಮಾದ ಸ್ಕ್ರಿಪ್ಟ್ ಸಿದ್ದ ಮಾಡಿದ್ದಾರಂತೆ. ಫೈನಲ್ ಸ್ಕ್ರಿಪ್ಟ್ ಅನ್ನು ಸಹ ನಟ ಅಲ್ಲು ಅರ್ಜುನ್ ಗೆ ಕೇಳಿಸಿದ್ದು, ಆತ ಸಹ ಒಪ್ಪಿಗೆ ನೀಡಿದ್ದಾರಂತೆ. ಇನ್ನೂ ಈ ಹಿಂದೆ ಸಿನೆಮಾದಲ್ಲಿನ ನಾಯಕಿಯ ಶ್ರೀವಲ್ಲಿ ಪಾತ್ರ ಅರ್ಧದಲ್ಲೇ ಸಾಯಿಸುತ್ತಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿತ್ತು. ಇದಕ್ಕೆ ಸಿನೆಮಾದ ನಿರ್ಮಾಪಕರೂ ಸಹ ನಾವೆ ಇನ್ನೂ ಕಥೆ ಕೇಳಿಲ್ಲ. ಆಗಿರುವಾಗ ಶ್ರೀವಲ್ಲಿ ಸಾಯುತ್ತಾರೆ ಅನ್ನೋದು ಎಷ್ಟರಮಟ್ಟಿಗೆ ಸರಿ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದರು.

ಇದೀಗ ಶ್ರೀವಲ್ಲಿ ಪಾತ್ರವನ್ನು ಅರ್ಧದಲ್ಲೇ ಸಾಯಿಸಿ ಆ ಸ್ಥಾನಕ್ಕೆ ವಿದೇಶಿ ನಟಿಯರೊಬ್ಬರನ್ನು ಕರೆತರಲಾಗುತ್ತದೆ ಎಂದ ವದಂತಿ ಜೋರಾಗಿಯೇ ಹರಿದಾಡುತ್ತಿದೆ. ಪುಷ್ಪಾ-2 ಸಿನೆಮಾದ ಬಗ್ಗೆ ದೊಡ್ಡ ದೊಡ್ಡ ರೂಮರ್‍ ಗಳೇ ಹುಟ್ಟಿ ಬರುತ್ತಿವೆ. ಆದರೆ ಈ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಕ್ಲಾರಿಟಿ ನೀಡಬೇಕೆಂದು ಅಲ್ಲು ಅರ್ಜುನ್ ಫ್ಯಾನ್ಸ್ ಸೋಷಿಯಲ್ ಮಿಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.  ಇದೀಗ ಶ್ರೀವಲ್ಲಿ ಪಾತ್ರವನ್ನು ಮಧ್ಯದಲ್ಲೇ ಸಾಯಿಸಿ ಆ ಸ್ಥಾನಕ್ಕೆ ವಿದೇಶಿ ಬ್ಯೂಟಿಯನ್ನು ಕರೆತರಲಿದ್ದಾರೆ ಎಂಬ ರೂಮರ್‍ ಶುರುವಾಗಿದೆ. ಈ ಕುರಿತು ನಿರ್ದೇಶಕ ಸುಕುಮಾರ್‍ ಸಹ ಭರ್ಜರಿ ಪ್ಲಾನ್ ಮಾಡಿದ್ದಾರೆ ಎಂತಲೂ, ಈಗಾಗಲೇ ಮೂವರು ವಿದೇಶಿ ನಟಿಯರನ್ನು ಆಯ್ಕೆ ಮಾಡಿ ಆಡಿಷನ್ಸ್ ಗೆ ಸಿದ್ದವಾಗುತ್ತಿದ್ದಾರೆ ಎಂಭ ಸುದ್ದಿ ಜೋರಾಗಿ ಪ್ರಚಾರವಾಗುತ್ತಿದೆ.

ಆದರೆ ಈ ಕುರಿತು ಚಿತ್ರತಂಡ ಮಾತ್ರ ಯಾವುದೇ ರೀತಿಯಲ್ಲಿ ಕ್ಲಾರಿಟಿ ನೀಡಿಲ್ಲ. ಆದರೆ ಪುಷ್ಪಾ ಸಿನೆಮಾದ ಅಭಿಮಾನಿಗಳು ಮಾತ್ರ ಶ್ರೀವಲ್ಲಿ ಸತ್ತ ಮೇಲೆ ವಿದೇಶಿ ಬ್ಯೂಟಿಯೊಂದಿಗೆ ಪುಷ್ಪರಾಜ್ ರೊಮ್ಯಾನ್ಸ್ ಮಾಡುತ್ತಾರೆ ಎಂದು ಅವರಿಗೆ ತೋಚಿದಂತೆ ಊಹೆ ಮಾಡುಕೊಳ್ಳುತ್ತಿದ್ದಾರೆ. ಇನ್ನೂ ಸದ್ಯ ಪುಷ್ಪಾ-2 ಸಿನೆಮಾದ ಬಗ್ಗೆ ಬಂದ ರೂಮರ್‍ ಗಳಿಗೆ ಚಿತ್ರತಂಡ ಯಾವುದೇ ರೀತಿಯಲ್ಲಿ ರೆಸ್ಪಾನ್ಸ್ ಮಾಡಿಲ್ಲ. ಇನ್ನೂ ಪುಷ್ಪಾ-2 ಸಿನೆಮಾ ಕೆಜಿಎಫ್-2 ಸಿನೆಮಾದ ರೆಕಾರ್ಡ್ ಗಳನ್ನು ಬ್ರೇಕ್ ಮಾಡಬೇಕೆಂಬ ಆಶಯವನ್ನು ಅಲ್ಲು ಅರ್ಜುನ್ ಫ್ಯಾನ್ಸ್ ಆಶಯ ವ್ಯಕ್ತಪಡಿಸಿದ್ದಾರೆ.

Previous articleಲೇಡಿ ಸೂಪರ್ ಸ್ಟಾರ್ ನಯನತಾರಾ ಬಳಿಯಿದೆಯಂತೆ ಪ್ರವೈಟ್ ಜೆಟ್..! ಶಾಕ್ ಆದ ನಟಿಯರು..!
Next articleಟಾಪ್ ನಟಿ ಟಬು ಗೆ ಮದುವೆಯಾಗದೇ ಇರಲು ಆ ಬಾಲಿವುಡ್ ನಾಯಕನಂತೆ ಕಾರಣ?