News

(video)ಅಂಬಿ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳನ್ನು ಬಿಚ್ಚಿಟ್ಟ ಬಂಟ ಶ್ರೀನಿವಾಸ್, ನೋಡಲೇಬೇಕಾದ ವಿಡಿಯೋ

ramanna1

ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬಿ ಅವರು ನಮ್ಮನ್ನು ಆಗಲಿ ಇಂದಿಗೆ 11 ದಿನ ಕಳೆದಿದೆ. ದಿನಗಳು ಎಷ್ಟು ಬೇಗ ಉರುಳುತ್ತವೆ ಅಲ್ವಾ ಸ್ನೇಹಿತರೆ! ಅಂಬಿ ಅವರ ಕೊನೆಯ ಚಿತ್ರ ಅಂಬಿ ನಿಂಗೆ ವಯಸ್ಸಾಯಿತೋ ಇನ್ನು ಕಣ್ಣ ಮುಂದೇನೆ ಇದೆ! ರೆಬೆಲ್ ಸ್ಟಾರ್ ಅಂಬರೀಶ್ ಅವರ ಮ್ಯಾನೇಜರ್ ಹಾಗು ಅವರ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಅವರ ಬಂಟ ಶ್ರೀನಿವಾಸ್ ಅವರು ಅಂಬರೀಶ್ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳನ್ನು ಈ ವಿಡಿಯೋ ನಲ್ಲಿ ಹೇಳಿದ್ದಾರೆ. ಸುವರ್ಣ ಚಾನೆಲ್ ನಲ್ಲಿ ಬಂದ ಶ್ರೀನಿವಾಸ್ ಅವರ ಸಂದರ್ಶನ ದಲ್ಲಿ ಅಂಬರೀಶ್ ಅವರ ಬಂಟ ಶ್ರೀನಿವಾಸ್ ಅವರ ಅಂಬಿ ಅವರ ಬಗ್ಗೆ ಅದ್ಭುತ ವಿಷ್ಯ ಗಳನ್ನೂ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಅಂಬಿ ಅವರ ಬಂಟ ಶ್ರೀನಿವಾಸ್ ಅವರು ಸುಮಾರು 30 ವರ್ಷಗಳಿಂದ ಅಂಬಿ ಅವರ ಜೊತೆ ಇದ್ದಾರೆ. ಅಂಬಿ ಅವರು ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಸುಮಾರು 12 ವರ್ಷಗಳ ಕಾಲ ಇದ್ದರು, ಆ ಸಮಯದಿಂದ ಶ್ರೀನಿವಾಸ್ ಅವರು ಅಂಬಿ ಅವರ ಕಾಲ್ ಶೀಟ್, ಅವರ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಶ್ರೀನಿವಾಸ್ ಅವರು ಹೇಳುವ ಪ್ರಕಾರ “ಅಂಬಿ ಸಾರ್, ಬಯ್ಯೋದೆ ಒಂದು ಚಂದ, ಅವರು ಎಂದೂ ಸಿಟ್ಟಿನಿಂದ ಬಯ್ಯುತ್ತಿರಲಿಲ್ಲ, ಪ್ರೀತಿ ಇಂದಾನೆ ಬಯ್ಯುತ್ತಿದ್ದರು” ಎಂದು ಹೇಳಿದ್ದಾರೆ. ಅದಲ್ಲದೆ ಅಂಬಿ ಅವರು 100 ರೂಪಾಯಿ ಗಳನ್ನೂ ದುಡಿದರೆ ಅದರಲ್ಲಿ ಸುಮಾರ್ 80 ರೂಪಾಯಿ ಯನ್ನು ಬೇರೆ ಅವರಿಗೆ, ಕಷ್ಟ ಎಂದು ಬಂದವರಿಗೆ ನೀಡುತ್ತಿದ್ದರು, ಮಿಕ್ಕಿದ ಹಣದಲ್ಲಿ ಅವರು ಎಂಜಾಯ್ ಮಾಡುತ್ತಿದ್ದರು. ಇದು ಅಂಬಿ ಅವರ ಅದ್ಭುತ ಗುಣ ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲವೆ ಅಂಬಿ ಅವರಿಗೆ ಕರುನಾಡ ಕರ್ಣ ಎಂದು ಹೇಳಲಾಗುತ್ತದೆ. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಅವರು ತೀರಿಕೊಂಡು ಇಂದಿಗೆ 11 ದಿನ ಕಳೆದಿದೆ. ಹಿಂದೂ ಸಂಪ್ರಾಯದ ಪ್ರಕಾರ ಇಂದು ಅಂಬರೀಷ್ ಅವರ ಪುಣ್ಯ ತಿಥಿಯನ್ನು ಮಾಡಲಾಗುತ್ತದೆ. ಕಂಠೀರವ ಸ್ಟುಡಿಯೋ ದಲ್ಲಿ ಇರುವ ಅಂಬಿ ಅವರ ಸಮಾಧಿಗೆ ಈಗಾಗಲೇ ನೂರಾರು KG ಹೂಗಳ ಅಲಂಕಾರ ನಡೆಯುತ್ತಿದೆ. ಸ್ಟುಡಿಯೋ ದಲ್ಲಿ ಎತ್ತರದ ಅಂಬಿ ಅವರ ಫೋಟೋ ಕೂಡ ಹಾಕಲಾಗಿದೆ. ಈ ಸಮಯದಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಪುತ್ರ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಕೆಲವು ಆಪ್ತರು ಆಗಮಿಸಿದ್ದಾರೆ. ಇದರ ಎಕ್ಸ್ಕ್ಲೂಸಿವ್ – ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

Trending

To Top