Cinema

ಕರೋನ ಕಾರಣಕ್ಕೆ ಸೆಕ್ಯುರಿಟಿ ಕೆಲಸ ಶುರು ಮಾಡಿದ ಕಿರುತೆರೆ ನಟ ಶ್ರೀನಾಥ್ ವಶಿಷ್ಠ!

ಕರೊನಾ ಇಂದ ಬಂದಿರುವ ಸಮಸ್ಯೆಗಳು ಒಂದೊಂದಲ್ಲ. ಕೆಲ ದಿನಗಳ ಹಿಂದೆ ನಮ್ಮ ಬಡಾವಣೆಯಲ್ಲಿ ಅಥವ ನಮ್ಮ ಏರಿಯಾದಲ್ಲಿ ಇಬ್ಬರು ಸೋಂಕಿತರಿದ್ದಾರೆ ಎಂದು ಹೇಳುತ್ತಿದ್ದೆವು. ಇದೀಗ ನಮ್ಮ ಅಕ್ಕ ಪಕ್ಕದಲ್ಲೇ ಇಬ್ಬರು ಸೋಂಕಿತರಿದ್ದಾರೆ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಅಷ್ಟು ವೇಗವಾಗಿ ಹರಡುತ್ತಿದೆ ಕರೊನಾ ಸೋಂಕು. ದೇಶದಲ್ಲಿ 7 ಲಕ್ಷ ಸೋಂಕಿತರ ಸಂಖ್ಯೆ ದಾಟಿದೆ. ರಾಜ್ಯದಲ್ಲೂ ಸೋಂಕಿತರು ಹಾಗೂ ಇದರಿಂದ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಎಲ್ಲರ ಜೀವನ ಅಸ್ತವ್ಯಸ್ತವಾಗಿರುವುದಂತೂ ನಿಜ. ಕರೊನಾ ಇಂದ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಸಮಸ್ಯೆ ಕಾಡುತ್ತಿದೆ.
ನಮ್ಮ ಕಲಾವಿದರು ಸಹ ಇದಕ್ಕೆ ಹೊರತಾಗಿಲ್ಲ. ಪಾಪಾ ಪಾಂಡು ಧಾರಾವಾಹಿ ಖ್ಯಾತಿಯ ಪ್ರಸಿದ್ಧ ಕಿರುತೆರೆ ನಟ ಶ್ರೀನಾಥ್ ವಸಿಷ್ಠ ಅವರು ಕರೊನಾ ಇಂದಾಗಿ ಸೆಕ್ಯೂರಿಟಿ ಕೆಲಸ ಮಾಡುವಂತಾಗಿದೆ. ಶ್ರೀನಾಥ್ ಅವರು ನೆಲೆಸಿರುವ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ ಗೆ ಕರೊನಾ ಪಾಸಿಟಿವ್ ಬಂದಿದೆ. ಇನ್ನುಳಿದ ಸಿಬ್ಬಂದಿಗಳು ಹೋಮ್ ಕ್ವಾರಂಟೈನ್ ನಲ್ಲಿ ಇರುವ ಕಾರಣ ಅಪರ್ಟ್ಮೆಂಟ್ ನ ನಿವಾಸಿಗಳೇ ಸೆಕ್ಯೂರಿಟಿ ಕೆಲಸ ಮಾಡುವ ಹಾಗಾಗಿದೆ, ಹಾಗಾಗಿ ಶ್ರೀನಾಥ್ ವಸಿಷ್ಠ ಅವರು ಸಹ ಸೆಕ್ಯೂರಿಟಿ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಸೆಕ್ಯೂರಿಟಿ ಕೆಲಸ ಮಾಡಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಅಪಾರ್ಟ್‌ಮೆಂಟ್‌ನ ಒಬ್ಬ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನುಳಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಕ್ವಾರಂಟೈನ್‌ಗೆ ನಲ್ಲಿದ್ದಾರೆ. ಹಾಗಾಗಿ ಅಪಾರ್ಟ್‌ಮೆಂಟ್ ನಲ್ಲಿ ನೆಲೆಸಿರುವವರೇ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ನಿರ್ಧಾರ ಮಾಡಿದ್ದೇವೆ. ಇಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಾನು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿದ್ದೇನೆ. ಎಲ್ಲರೂ ಈ ಕೆಲಸವನ್ನು ಹಂಚಿಕೊಂಡಿದ್ದು, 10 ದಿನಗಳ ಕಾಲ ಅಪಾರ್ಟ್‌ಮೆಂಟ್ ವಾಸಿಗಳೇ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಲಿದ್ದಾರೆ. ನನ್ನ ಮಗ ಋತ್ವಿಕ್ ಕೂಡ ನಾಳೆ ಸೆಕ್ಯೂರಿಟಿ ಗಾರ್ಡ್ ಆಗಿರಲಿದ್ದಾನೆ. ಇದೊಂದು ಹೊಸ ಅನುಭವ.. ಫೇಸ್ ಬುಕ್ ಖಾತೆಯಲ್ಲಿ ಬರೆದಿದ್ದಾರೆ ಶ್ರೀನಾಥ್

Trending

To Top