Film News

ಆಚಾರ್ಯ ಚಿತ್ರದ ಮೇಲೆ ಶ್ರೀರೆಡ್ಡಿ ಕಾಂಟ್ರವರ್ಸಿ ಕಾಮೆಂಟ್ಗಳು!

ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಕಾಂಟ್ರವರ್ಸಿ ನಟಿ ಎಂದೇ ಕರೆಯಲಾಗುವ ಶ್ರೀರೆಡ್ಡಿ ಚಿತ್ರದ ಟೀಸರ್ ಮೇಲೆ ವಿವಾದಾತ್ಮಕ ಪೋಸ್ಟ್‌ಗಳನ್ನು ಮಾಡಿದ್ದಾರೆ.

ನಟಿ ಶ್ರೀರೆಡ್ಡಿ ಟಾಲಿವುಡ್‌ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರೂ ಅಷ್ಟೋಂದು ಪ್ಯಾಪುಲರ್ ಆಗಿಲ್ಲ. ಆದರೆ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ನಗ್ನವಾಗಿ ಪ್ರತಿಭಟನೆ ಮಾಡಿದ ನಂತರ ಶ್ರೀರೆಡ್ಡಿ ದೇಶವ್ಯಾಪಿ ಪ್ಯಾಪುಲರ್ ಆಗಿಬಿಟ್ಟರು. ಇನ್ನೂ ಶ್ರೀರೆಡ್ಡಿ ಬೋಲ್ಡ್ ಆಗಿ ನಟರು ಸೇರಿದಂತೆ ರಾಜಕೀಯ ನಾಯಕರ ಮೇಲೂ ವಿವಾದಾತ್ಮಕವಾದ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಜೊತೆಗೆ ಲೈವ್‌ನಲ್ಲೂ ಸಹ ನಾಯಕರ ಕುರಿತು ಆರೋಪಗಳನ್ನು ಸಹ ಮಾಡುತ್ತಿರುತ್ತಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ರಾಜಕೀಯ ನಾಯಕರನ್ನು, ಸ್ಟಾರ್ ಹಿರೋಗಳನ್ನು ಸಹ ಟಾರ್ಗೆಟ್ ಮಾಡಿ ಅವರ ವಿರುದ್ದ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದರ ಭಾಗವಾಗಿ ಇದೀಗ ಆಚಾರ್ಯ ಚಿತ್ರದ ಕುರಿತು ಸಂಚಲನಾತ್ಮಕವಾಗಿ ಕೆಲವೊಂದು ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ. ಆಚಾರ್ಯ ಚಿತ್ರದ ಟೀಸರ್ ಕುರಿತು ಟ್ವಿಟರ್‌ನಲ್ಲಿ ತನ್ನ ಅಭಿಪ್ರಾಯವನ್ನು ಶೇರ್ ಮಾಡಿರುವ ಶ್ರೀರೆಡ್ಡಿ, ಎಷ್ಟೇ ಆದರೂ ಯಂಗ್ ಟೈಗರ್ ಎನ್.ಟಿ.ಆರ್ ನಟನೆಯ ಮುಂದೆ ಚಿರಂಜೀವಿ ನಟನೆ ಸಮವಲ್ಲ. ಆಚಾರ್ಯ ಚಿತ್ರದಲ್ಲಿ ಡೈಲಾಗ್ ಡಿಲೆವರಿ ಸಹ ಅಷ್ಟು ಚೆನ್ನಾಗಿಲ್ಲ ಎಂದು ಟೀಸರ್ ಲಿಂಕ್ ಶೇರ್ ಮಾಡಿ ಈ ಎಲ್ಲಾ ವಾಖ್ಯಗಳನ್ನು ಬರೆದಿದ್ದಾರೆ.

ಜೊತೆಗೆ ಆಚಾರ್ಯ ಚಿತ್ರದ ಕಥೆ ನನಗೆ ತಿಳಿದಿದೆ. ಚಿರಂಜೀವಿ ಎಲ್ಲಿಂದಲೋ ಒಂದು ಊರಿಗೆ ಬರುತ್ತಾನೆ, ಅಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಅಷ್ಟೆ ಎಂಬ ಪೋಸ್ಟ್ ಒಂದನ್ನು ಸಹ ಶೇರ್ ಮಾಡಿದ್ದಾರೆ. ಇನ್ನೂ ನಟಿ ಶ್ರೀರೆಡ್ಡಿರವರ ಪೋಸ್ಟ್ ಗೆ ಚಿರು ಅಭಿಮಾನಿಗಳು ಗರಂ ಆಗಿ ವಿವಿಧ ರೀತಿಯಲ್ಲಿ ಕಾಮೆಂಟ್‌ಗಳನ್ನು ಸಹ ಹಾಕುತ್ತಿದ್ದಾರೆ.

Trending

To Top