ಬೆಂಗಳೂರು: ಸ್ಯಾಂಡಲ್ವುಡ್ನ ಕಿಸ್ ಬೆಡಗಿ ನಟಿ ಶ್ರೀಲೀಲಾ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಲಿರುವ ದುಬಾರಿ ಚಿತ್ರದಲ್ಲಿ ಜೋಡಿಯಾಗಲಿದ್ದಾರಂತೆ.
ಕನ್ನಡ ಸಿನಿರಂಗದಲ್ಲಿ ಭಾರಿ ಹವಾ ಕ್ರಿಯೇಟ್ ಮಾಡಿರುವ ಪೊಗರು ಚಿತ್ರದ ಬಳಿಕ ಧ್ರುವ ಸರ್ಜಾ ದುಬಾರಿ ಚಿತ್ರದಲ್ಲಿ ನಟರಾಗಲಿದ್ದಾರೆ. ಪೊಗರು ಚಿತ್ರದ ರಿಲೀಸ್ ಬಳಿಕ ಶೂಟಿಂಗ್ ಪ್ರಾರಂಭವಾಗಲಿದ್ದು, ಕಿಸ್ ಮತ್ತು ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಗಳಲ್ಲಿ ನಾಯಕಿಯಾಗಿದ್ದ ಹೊಸ ಪ್ರತಿಭೆ ಶ್ರೀಲೀಲಾ ರವರು ಈ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ನಾಯಕಿಯಾಗಲಿದ್ದಾರೆ.
ಹೊಸ ಪ್ರತಿಭೆ ಶ್ರೀಲೀಲಾ ರವರಿಗೆ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪೊಗರು ನಟನೊಂದಿಗೆ ನಟಿಸುವ ಅವಕಾಶ ದೊರೆತಿದೆ. ಇದರಿಂದ ಆರಂಭದಲ್ಲಿಯೇ ಸ್ಟಾರ್ ನಟರ ಸಿನೆಮಾಗಳಲ್ಲಿ ಆಕ್ಟ್ ಮಾಡುವ ಅವಕಾಶವನ್ನು ಕೈಗೇರಿಸಿಕೊಂಡಿದ್ದಾರೆ ಶ್ರೀಲೀಲಾ.
ಈಗಾಗಲೇ ದುಬಾರಿ ಸಿನೆಮಾ ಪೋಸ್ಟರ್ಗಳು ಲಾಂಚ್ ಆಗಿದ್ದು, ನಂದಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಇನ್ನೂ ಶ್ರೀಲೀಲಾರವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಚಿತ್ರದ ನಿರ್ದೇಶಕ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀಲೀಲಾ ತಮ್ಮ ಎರಡು ಸಿನೆಮಾಗಳಲ್ಲಿಯೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ದುಬಾರಿ ಚಿತ್ರಕ್ಕೆ ಅವರೇ ಸೂಕ್ತ ಆಯ್ಕೆ ಎಂದು ಅನ್ನಿಸಿದ್ದು, ಜೊತೆಗೆ ಕನ್ನಡ ಪ್ರತಿಭೆಗೆ ಅವಕಾಶ ನೀಡಬೇಕೆಂದು ಶ್ರೀಲೀಲಾ ರವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಈಗಾಗಲೇ ಪೊಗರು ಚಿತ್ರದಲ್ಲಿ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಜೊತೆಗೆ ಕೆಲಸ ಮಾಡಿದ್ದು, ಮತ್ತೊಮ್ಮೆ ಅವರಿಬ್ಬರ ಕಾಂಬಿನೇಷನ್ನಲ್ಲಿ ದುಬಾರಿ ಚಿತ್ರ ತೆರೆಕಾಣಲಿದೆ. ೨೦೨೧ ರಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
