ಶಿವರಾತ್ರಿ ಹಬ್ಬದಂದು ಸರ್ಕಾರು ವಾರಿ ಪಾಟ ತಂಡದಿಂದ ಸ್ಪೆಷಲ್ ವಿಡಿಯೋ!

ಹೈದರಾಬಾದ್: ಟಾಲಿವುಡ್ ಸ್ಟಾರ್ ನಟರಲ್ಲೊಬ್ಬರಾದ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರ ಈಗಾಗಲೇ ಸಖತ್ ಸದ್ದು ಮಾಡುತ್ತಿದ್ದು, ಮಾರ್ಚ್ 11 ರಂದು ಈ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.

ನಟ ಮಹೇಶ್ ಬಾಬು ಸರ್ಕಾರು ವಾರಿ ಪಾಟ ಚಿತ್ರದ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಶೂಟಿಂಗ್ ಸಹ ಮುಗಿಸಿದೆ ಚಿತ್ರತಂಡ. ಜೊತೆಗೆ ಎರಡನೇ ಹಂತದ ಶೂಟಿಂಗ್ ಸಹ ಪ್ರಾರಂಭ ಆಗಿದೆ ಎನ್ನಲಾಗಿದೆ. ಇನ್ನೂ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ನಾಯಕಿಯಾಗಿ ನಟಿಸುತ್ತಿರುವ ಕೀರ್ತಿ ಸುರೇಶ್ ಸಹ ಕೆಲವು ದಿನಗಳ ಹಿಂದೆಯಷ್ಟೆ ದುಬೈಗೆ ತೆರಳಿದ್ದು, ಎರಡನೇ ಹಂತದ ಶೂಟಿಂಗ್ ಮುಗಿದ ಕೂಡಲೇ ವಿಶೇಷವಾದ ವಿಡಿಯೋ ಒಂದನ್ನು ಮಾರ್ಚ್ 11 ಶಿವರಾತ್ರಿ ಹಬ್ಬದಂದು ಬಿಡುಗಡೆ ಮಾಡಲಾಗುತ್ತೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇನ್ನೂ ಈ ವಿಡಿಯೋದಲ್ಲಿ ಸರ್ಕಾರು ವಾರಿ ಪಾಟ ಚಿತ್ರದ ಕುರಿತು ಮಹೇಶ್ ಬಾಬು ಸ್ಟೇಟ್‌ಮೆಂಟ್ ಒಂದನ್ನು ನೀಡುತ್ತಿದ್ದಾರಂತೆ ಜೊತೆಗೆ ಶೂಟಿಂಗ್ ಸ್ಟಾಪ್ ಮೇಕಿಂಗ್ ವಿಡಿಯೋ ಒಂದನ್ನು ಸಹ ತೋರಿಸಲಾಗುತ್ತಿದೆ ಎನ್ನಲಾಗುತ್ತಿದ್ದು, 2022 ಸಂಕ್ರಾಂತಿ ಹಬ್ಬದಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಈಗಾಗಲೇ ಭರತ್ ಅನೆ ನೇನು, ಮಹರ್ಷಿ, ಸರಿಲೇರು ನೀಕೆವ್ವರು ಎಂಬ ಸೂಪರ್ ಹಿಟ್ ಸಿನೆಮಾಗಳನ್ನು ನೀಡಿದ ಮಹೇಶ್ ಬಾಬು ಇದೀಗ ಸರ್ಕಾರು ವಾರಿ ಪಾಟ ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದು, ಚಿತ್ರವನ್ನು ಟಾಲಿವುಡ್ ನಿರ್ದೇಶಕ ಪರಶುರಾಂ ನಿರ್ದೇಶನ ಮಾಡುತ್ತಿದ್ದಾರೆ.

Previous articleಬ್ರಹ್ಮಾಸ್ತ್ರ ಚಿತ್ರದ ಕುರಿತು ನಾಗಾರ್ಜುನ ಕ್ರೇಜಿ ಟ್ವೀಟ್ಸ್!
Next articleಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ಈ ಸೀನ್ ಹೈಲೈಟ್ ಆಗಲಿದೆ!