Film News

ಮುತ್ತಪ್ಪ ರೈ ಚಿತ್ರದಲ್ಲಿ ನಾಯಕಿಯಾಗಿ ಮಲಯಾಳಂ ನಟಿ!

ಬೆಂಗಳೂರು: ಅಂಡರ್ ವರ್ಲ್ಡ್ ಡಾನ್ ಆಗಿ ನಂತರದ ದಿನಗಳಲ್ಲಿ ಸಮಾಜ ಸೇವಕನಾಗಿ ಗುರ್ತಿಸಿಕೊಂಡಿದ್ದ ಮುತ್ತಪ್ಪ ರೈ ರವರ ಜೀವನಾಧರಿತ ಸಿನೆಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ಮಲಯಾಳಂ ನಟಿ ಸೌಮ್ಯ ಮೆನನ್ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ರವಿ ಶ್ರೀವತ್ಸ ರವರು ನಿರ್ದೇಶಿಸುತ್ತಿರುವ ಮುತ್ತಪ್ಪ ರೈ ಜೀವನ ಚರಿತ್ರೆಯನ್ನು ಆಧಾರವಾಗಿಟ್ಟು ತೆಗೆಯುತ್ತಿರುವ ಚಿತ್ರಕ್ಕೆ ಎಂಆರ್ ಎಂಬ ಹೆಸರನ್ನಿಡಲಾಗಿದೆ. ಈ ಚಿತ್ರದಲ್ಲಿ ನಾಯಕನಾಗಿ ದೀಕ್ಷಿತ್ ನಟಿಸಲಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಗಳು ಹರಿದಾಡುತ್ತಿವೆ. ಇನ್ನೂ ಶ್ರೀವತ್ಸ ನಿರ್ದೇಶನದ ಡೆಡ್ಲಿ ಸೋಮ ಸಿನೆಮಾದಲ್ಲಿ ಬಾಲನಟನಾಗಿ ಇದೇ ದೀಕ್ಷಿತ್ ನಟಿಸಿದ್ದರು.

ಇನ್ನೂ ಎಂಆರ್ ಸಿನೆಮಾದಲ್ಲಿ ನಾಯಕಿಯ ವಿಚಾರದಲ್ಲಿ ಚಿತ್ರತಂಡ ಕೇರಳ ಸಿನಿರಂಗದ ನಟಿ ಸೌಮ್ಯ ಮೆನನ್ ರವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಸೌಮ್ಯ ಮೆನನ್ ಈಗಾಗಲೇ ೫ ಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಸಿನೆಮಾದ ನಾಯಕನ ಕೆಲವೊಂದು ಶಾಟ್ ಗಳನ್ನು ತೆಗೆಯುವ ಮೂಲಕ ಚಿತ್ರೀಕರಣವನ್ನು ಸಹ ಆರಂಭಿಸಲಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಚಿತ್ರವನ್ನು ದೀಕ್ಷಿತ್ ತಂದೆಯವರೇ ಬಂಡವಾಳ ಹೂಡಿದ್ದು, ಮಂಗಳೂರು, ಪುತ್ತೂರು, ಬೆಂಗಳೂರು ಹಾಗೂ ದುಬೈ ನಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ, ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶಕರಾಗಿದ್ದಾರೆ.

Trending

To Top