ಮೊದಲಿನಂತೆ ಬಲಿಷ್ಟವಾಗಲು ಸಮಂತಾ ಹರಸಾಹಸ, ಸಮಂತಾ ವರ್ಕೌಟ್ ವಿಡಿಯೋ ಸಖತ್ ವೈರಲ್….!

Follow Us :

ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆಯುಳ್ಳ ಸಮಂತಾ ಇತ್ತೀಚಿಗೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದು ತಿಳಿದೇ ಇದೆ. ಮಾಂಸಕಂಡಗಳಿಗೆ ಸಂಬಂಧಿಸಿದ ಈ ಕಾಯಿಲೆಯಿಂದ ಸುಮಾರು ಎಂಟು ತಿಂಗಳಿಗೂ ಹೆಚ್ಚು ದಿನಗಳ ಕಾಲ ಈ ವ್ಯಾಧಿಯೊಂದಿಗೆ ಹೋರಾಟ ನಡೆಸಿದರು. ಆಕೆ ಈ ವ್ಯಾಧಿಗೆ ತುತ್ತಾಗಿದ್ದನ್ನು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದರು. ಬಳಿಕ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಆಕೆಯ ಅಭಿಮಾನಿಗಳೂ ಸಹ ಆಕೆಯ ಧೈರ್ಯ ತುಂಬಿದ್ದರು. ಇದೀಗ ಆಕೆ ಈ ವ್ಯಾಧಿಯಿಂದ ಹೊರಬಂದಿದ್ದು, ಸಿನೆಮಾಗಳಲ್ಲಿ ಕಮ್ ಬ್ಯಾಕ್ ಸಹ ಆಗಿದ್ದಾರೆ. ಇನ್ನೂ ಮೊದಲಿನಂತೆ ಫಿಟ್ ನೆಸ್ ಪಡೆಯಲು ಪ್ರಯತ್ನಗಳನ್ನು ಸಹ ಮಾಡುತ್ತಿದ್ದು, ಜಿಮ್  ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ಸಮಂತಾ ಇತ್ತೀಚಿಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಯೋಸೈಟೀಸ್ ವ್ಯಾಧಿಯಿಂದ ತುಂಬಾ ವೀಕ್ ಆಗಿದ್ದರು. ಇದೀಗ ಆಕೆ ಬಲಿಷ್ಟವಾಗಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಂತ ಹಂತವಾಗಿ ತನ್ನ ಫಿಟ್ ನೆಸ್ ಮರಳಿ ಪಡೆಯುತ್ತಿದ್ದಾರೆ. ಆದರೆ ಸಮಂತಾ ಇದ್ದಕ್ಕಾಗಿ ತುಂಬಾನೆ ಕಷ್ಟಪಡುತ್ತಿದ್ದಾರೆ. ಕಠಿಣವಾದ ವರ್ಕೌಟ್ಸ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಕಷ್ಟವನ್ನು ನೋಡಿದ ಅಭಿಮಾನಿಗಳು ಸಹ ಆಕೆಗೆ ಧೈರ್ಯ ಸಹ ತುಂಬುತ್ತಿದ್ದಾರೆ. ಈ ಕುರಿತು ಅನೇಕ ಪೋಸ್ಟ್ ಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಸಮಂತಾ ಇದೀಗ ಮತ್ತೊಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಭಾರವಾದ ಜಿಮ್ ಉಪಕರಣಗಳೊಂದಿಗೆ ವರ್ಕೌಟ್ ಮಾಡುತ್ತಿದ್ದಾರೆ. ಬಲವಾದ ಮಾಂಸಖಂಡಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಇದೇ ಸಮಯದಲ್ಲಿ ಆಕೆ ತನ್ನ ಆರೋಗ್ಯದ ಬಗ್ಗೆ ಮತ್ತೊಂದು ಸುದ್ದಿಯನ್ನು ಸಹ ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಪರಿಸ್ಥಿತಿಯ ಬಗ್ಗೆ ಆಕೆ ತೆಗೆದುಕೊಳ್ಳುತ್ತಿರುವ ಚಿಕಿತ್ಸೆಯ ಬಗ್ಗೆ ಸೋಷಿಯಲ್ ಮಿಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಮಯೋಸೈಟೀಸ್ ವ್ಯಾದಿಗೆ ಸಂಬಂಧಿಸಿದ ತಿಂಗಳ ಇಂಟರಾವಿನಸ್ ಇಮ್ಯೂನೋಗ್ಲೋಬಲಿನ್ ಥೆರಫಿಗೆ ಹಾಜಾರಾಗಿದ್ದು, ಸೋಷಿಯಲ್ ಮಿಡಿಯಾ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಹಂಚಿಕೊಂಡಿದ್ದಾರೆ. ಇದಕ್ಕೆ ನ್ಯೂ ನಾರ್ಮಲ್ ಎಂಬ ಕಾಪ್ಷನ್ ಸಹ ಕೊಟ್ಟಿದ್ದಾರೆ.

ಇನ್ನೂ ನಾನೂ ಪೂರ್ವ ಸ್ಥಿತಿಗೆ ತಲುಪಿದ್ದೇನೆ. ಮಾನವ ಶರೀರದಲ್ಲಿ ಬಲಹೀನವಾದ ಇಮ್ಯೂನಿಟಿ ಸಿಸ್ಟಂ ಸರಿಯಾಗಿ ಕೆಲಸ ಮಾಡದೇ ಇತರೆ ವ್ಯಾಧಿಗಳ ಕಾರಣದಿಂದ ಸಮಸ್ಯೆಗೆ ಸಿಲುಕದಂತೆ ಈ ಥೆರಪಿ ಸಹಾಯವಾಗುತ್ತದೆ. ಇದಕ್ಕಾಗಿ ದಿನಕ್ಕೆ ನಾಲ್ಕು ಗಂಟೆಗಳ ಕಾಲ ಸಮಂಯ ಬೇಕಾಗುತ್ತದೆ. ಈ ಟ್ರೀಟ್ ಮೆಂಟ್ ಅನ್ನು ತಾನು ಮನೆಯಿಂದಲೇ ಪಡೆದುಕೊಳ್ಳುತ್ತಿದ್ದಾರೆ ಸಮಂತಾ. ಇನ್ನೂ ಸಮಂತ ಇದೀಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಖುಷಿ ಸಿನೆಮಾದ ಶೂಟಿಂಗ್ ನಲ್ಲೂ ಸಹ ಭಾಗಿಯಾಗಲಿದ್ದಾರೆ. ಈ ತಿಂಗಳ 17 ರಂದು ಸಮಂತಾ ರವರ ಶಾಕುಂತಲಂ ಸಿನೆಮಾ ಸಹ ಬಿಡುಗಡೆಯಾಗಬೇಕಿತ್ತು. ಆದರೆ ಏಪ್ರಿಲ್ 14 ಕ್ಕೆ ಈ ಸಿನೆಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.