ಮಗನೊಂದಿಗೆ ಮುದ್ದಾದ ಪೊಟೋ ಶೇರ್ ಮಾಡಿದ ಕಾಜಲ್ ಅಗರ್ವಾಲ್…!

ಟಾಲಿವುಡ್ ನ ಬಹುಬೇಡಿಕೆ ಹೊಂದಿದ್ದ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದರು. ಇನ್ನೂ ಆಕೆ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದರು. ಸದ್ಯ ಆಕೆ ಮಗುವಿಗೆ ಜನ್ಮ ಕೊಟ್ಟಿದ್ದು, ಮಗುವಿನೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸಿನೆಮಾಗಳಿಂದ ದೂರವುಳಿದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಇದ್ದು ಅಭಿಮಾನಿಗಳ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಮಗುವಾದ ಬಳಿಕ ಕಾಜಲ್ ಮಗುವಿನ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಎಲ್ಲೆಡೆ ಈ ಪೊಟೋಗಳು ವೈರಲ್ ಆಗುತ್ತಿವೆ.

ಕೆಲವು ತಿಂಗಳುಗಳ ಹಿಂದೆಯಷ್ಟೆ ಕಾಜಲ್ ಅಗರ್ವಾಲ್ ಮುದ್ದಾಗ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸೋಷಿಯಲ್ ಮಿಡಿಯಾದ ಮೂಲಕ ತಾನು ಗರ್ಭಿಣಿಯಾದ ವಿಚಾರ, ಬೇಬಿ ಬಂಪ್ ಪೊಟೋಗಳು, ಮಗುವಿನ ಜನನ ಎಲ್ಲ ವಿಚಾರಗಳನ್ನು ಸಹ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೋಳ್ಳುತ್ತಿದ್ದರು. ಇನ್ನೂ ಸದಾ ತಮ್ಮ ಮಗನ ಜೊತೆಗೆ ಕಾಲ ಕಳೆಯುವ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಇನ್ನೂ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಮಗನ ಜೊತೆಗಿನ ಪೊಟೋ ಒಂದನ್ನು ಶೇರ್‍ ಮಾಡಿದ್ದು, ಇದು ಇಡೀಗ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ.  ಕಾಜಲ್ ಮಗುವಿಗೆ ಜನ್ಮ ಕೊಟ್ಟ ಬಳಿಕ ತುಂಬಾ ಸಂತೋಷದಿಂದ ಮಾತೃತ್ವ ವನ್ನು ಆಸ್ವಾದಿಸುತ್ತಿದ್ದಾರೆ.

ಇನ್ನೂ ಕಾಜಲ್ ಮಗನೊಂದಿಗೆ ಬೆಡ್ ಮೇಲೆ ಮಲಗಿ ಪೋಸ್ ಕೊಟ್ಟಿದ್ದಾರೆ. ಬೆಡ್ ಮೇಲೆ ಕಾಜಲ್ ಮಲಗಿದ್ದು, ಕಾಜಲ್ ತನ್ನ ಮಗನನ್ನು ಎದೆಯ ಮೇಲೆ ಮಲಗಿಸಿಕೊಂಡಿದ್ದಾರೆ. ಈ ಪೊಟೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಇನ್ನೂ ಮಗು ಜನಿಸಿದಾಗಿನಿಂದ ಮಗುವಿನ ಮುದ್ದಾದ ಮುಖವನ್ನು ಇಲ್ಲಿಯವರೆಗೂ ಕಾಜಲ್ ತೋರಿಸಿಲ್ಲ. ಅಭಿಮಾನಿಗಳು ಮಗನ ಮುಖವನ್ನು ತೋರಿಸಿ ಎಂದು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಆಕೆ ತನ್ನ ಮಗನ ಮುಖವನ್ನು ಜಗತ್ತಿಗೆ ತೋರಿಸಬಹುದು ಎನ್ನಲಾಗುತ್ತಿದೆ. ಸದ್ಯ ತಾಯ್ತನವನ್ನು ಸಂಪೂರ್ಣವಾಗಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಅಪಾರ ಸಂಖ್ಯೆಯಲ್ಲಿರುವ ಆಕೆಯ ಅಭಿಮಾನಿಗಳು ಮಾತ್ರ ಆಕೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಬಹುದು ಎನ್ನುವ ಮಾತುಗಳು ಸಹ ಬಲವಾಗಿ ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಕಾಜಲ್ ಮುಂದಿನ ವರ್ಷದಲ್ಲಿ ಸಿನೆಮಾಗಳಲ್ಲಿ ನಟಿಸಬಹುದು ಎನ್ನಲಾಗುತ್ತಿದೆ. ತಾಯಿಯಾಗಿರುವ ಕಾಜಲ್ ರವರನ್ನು ಸಿನಿ ಪ್ರೇಕ್ಷಕರು ಯಾವ ರೀತಿಯಲ್ಲಿ ಬೆಂಬಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಕಾಜಲ್ ಗರ್ಭಿಣಿಯಾದ ಕಾರಣಕ್ಕೆ ಎರಡು ಸಿನೆಮಾಗಳನ್ನು ಬಿಡಬೇಕಾಯಿತು. ಇದೀಗ ಸೆಕೆಂಡ್ ಇನ್ನಿಂಗ್ಸ್ ಕಾಜಲ್ ಯಾವಾಗ ಶುರು ಮಾಡುತ್ತಾರೆ ಎಂದು ಎಲ್ಲರೂ ಕಾತುರತೆಯಿಂದ ಕಾಯುತ್ತಿದ್ದಾರೆ.

Previous articleಆ ನಟಿಗೆ ವಿಜಯದೇವರಕೊಂಡ ರನ್ನು ಪೂರ್ಣ ಬೆತ್ತಲೆಯಾಗಿ ನೋಡಬೇಕೆಂಬ ಆಸೆಯಂತೆ…!
Next articleಚಿರು ಇಷ್ಟಪಟ್ಟ ಆ ಹುಡುಗಿ ಯಾರು? ಇಷ್ಟು ವರ್ಷಗಳ ಬಳಿಕ ರಿವೀಲ್ ಆಯ್ತು ಚಿರಂಜೀವಿ ಲವ್ ಫೈಯಲ್ಯೂರ್ ಸ್ಟೋರಿ…!