ಬ್ರೇಕಪ್ ರೂಮರ್ ಬಗ್ಗೆ ಕೋಪಗೊಂಡ ಶ್ರುತಿ ಹಾಸನ್, ನನ್ನ ಮದುವೆಯ ಬಗ್ಗೆ ನನಗಿಂತ ನಿಮಗೇ ಉತ್ಸಾಹ ಜಾಸ್ತಿ ಏಕೆ ಎಂದ ನಟಿ…!

ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಯಾವುದೇ ಸುದ್ದಿ ಬರಲಿ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಆ ಸುದ್ದಿ ನಿಜವಿರಲಿ ಅಥವಾ ಸುಳ್ಳಾಗಿರಲಿ ಸಖತ್ ವೈರಲ್ ಆಗುತ್ತದೆ. ಈ ಹಾದಿಯಲ್ಲೇ ಸೌತ್ ಸ್ಟಾರ್‍ ನಟಿ ಶ್ರುತಿ ಹಾಸನ್ ಹಾಗೂ ಆಕೆಯ ಬಾಯ್ ಫ್ರೆಂಡ್ ಶಾಂತಾನು ಹಜಾರಿಕಾ ನಡುವೆ ಬ್ರೇಕಪ್ ಆಗಿದೆ  ಎಂಬ ಸುದ್ದಿ ಸೋಷಿಯಲ್ ಮಿಡಿಯಾ ತುಂಬಾ ಸುನಾಮಿಯಂತೆ ಹರಿದಾಡುತ್ತಿತ್ತು. ಈ ಸುದ್ದಿ ಶ್ರುತಿ ಹಾಸನ್ ವರೆಗೂ ತಲುಪಿದ್ದು, ಈ ವಿಚಾರಕ್ಕಾಗಿ ಆಕೆ ಗರಂ ಆಗಿದ್ದಾರೆ.  ಮದುವೆ ಬಗ್ಗೆ ನನಗಿಲ್ಲದ ಇಂಟ್ರಸ್ಟ್ ನಿಮಗೆ ಜಾಸ್ತಿಯಿದೆ ಎಂದು ಕೌಂಟರ್‍ ಕೊಟ್ಟಿದ್ದಾರೆ.

ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಶ್ರುತಿ ಹಾಸನ್ ಹಾಗೂ ಶಾಂತಾನು ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿತ್ತು. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಒಂದು ಪೋಸ್ಟ್ ನಿಂದಾಗಿ ಆಕೆ ಶಾಂತಾನು ಜೊತೆಗೆ ಬೇರೆಯಾಗಿದ್ದಾರೆ ಎಂಬ ಸುದ್ದಿ ಕ್ಷಣಗಳಲ್ಲೇ ವೈರಲ್ ಆಗಿದೆ. ಈ ರೂಮರ್‍ ಗಳನ್ನು ಕೇಳಿದ ಶ್ರುತಿ ರೂಮರ್‍ ಹಬ್ಬಿಸಿದವರು ವಿರುದ್ದ ಆಕ್ರೋಷಗೊಂಡಿದ್ದಾರೆ. ಅವರ ವಿರುದ್ದ ಫೈರಿಂಗ್ ಕಾಮೆಂಟ್ಸ್ ಮಾಡಿದ್ದಾಎ. ತನ್ನ ಜೀವನದ ಬಗ್ಗೆ, ಮದುವೆಯ ಬಗ್ಗೆ ತನಗಿಲ್ಲದ ಉತ್ಸಾಹ ಸೋಷಿಯಲ್ ಮಿಡಿಯಾದಲ್ಲಿನ ಜನರಿಗೆ ತುಂಬಾ ಉತ್ಸಾಹವಾಗಿದೆ. ನನಗಿಲ್ಲದ ಬಾದೆ ನಿಮಗೆ ಯಾಕೆ ಎಂದು ಫೈರ್‍ ಆಗಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಏನೇ ಸುದ್ದಿ ಬಂದರೂ ಕ್ಷಣದಲ್ಲೇ ವೈರಲ್ ಆಗುತ್ತದೆ. ಕೆಲವು ದಿನಗಳಿಂದ ಶ್ರುತಿ ಹಾಸನ್ ಹಾಗೂ ಶಾಂತಾನು ಹಜಾರಿಕಾ ನಡುವೆ ವಿಬೇದಗಳು ಹುಟ್ಟಿದ್ದು, ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್‍ ಗಳು ಹರಿದಾಡಿತ್ತು. ಈ ಬಗ್ಗೆ ಆಕೆ ಕೋಪಗೊಂಡಿದ್ದು, ಕೆಲವೊಂದು ಕೌಂಟರ್‍ ಸಹ ನೀಡಿದ್ದಾರೆ. ಸೆಲೆಬ್ರೆಟಿಗಳ ಮದುವೆ ವಿಚಾರದಲ್ಲಿ ಅನೇಕರು ಏತಕ್ಕಾಗಿ ಅತೀಯಾದ ಉತ್ಸಾಹ ತೋರುತ್ತಾರೋ, ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾಗ ಮದುವೆ ಬಗ್ಗೆ ಆಲೋಚನೆ ಮಾಡುವ ಅವಸರ ಏನಿದೆ ಎಂದಿದ್ದಾರೆ. ನಮ್ಮಿಬ್ಬರ ಅಭಿರುಚಿ ಒಂದಾಗಿದೆ. ಆ ಕಾರಣದಿಂದಲೇ ನಾವಿಬ್ಬರೂ ಲೈಫ್ ಲೀಡ್ ಮಾಡುತ್ತಿದ್ದೇವೆ. ನಮಗೆ ಇನ್ನೂ ಎರಡು ಮೂರು ವರ್ಷ ಮದುವೆಯಾಗುವ ಉದ್ದೇಶವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇನ್ನೂ ಶ್ರುತಿ ಹಾಸನ್ ರವರ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸುಮಾರು ತಿಂಗಳುಗಳಿಂದ ಶಾಂತಾನು ಹಾಗೂ ಶ್ರುತಿ ಹಾಸನ್ ಡೇಟಿಂಗ್ ನಲ್ಲಿದ್ದಾರೆ. ಇಬ್ಬರೂ ಒಂದೇ ಮನೆಯಲ್ಲಿ ಸಹಜೀವನ ಸಹ ನಡೆಸುತ್ತಿದ್ದಾರೆ. ಇನ್ನೂ ನಟಿ ಶ್ರುತಿ ಹಾಸನ್ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಸಲಾರ್‍, ವೀರಸಿಂಹಾರೆಡ್ಡಿ, ವಾಲ್ತೇರು ವೀರಯ್ಯ ಎಂಬ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Previous articleನೆವರ್ ಬಿಪೋರ್ ಹಾಟ್ ಟ್ರೀಟ್ ಕೊಟ್ಟ ಸೀನಿಯರ್ ಬ್ಯೂಟಿ, ಬೋಲ್ಡ್ ಸೌಂದರ್ಯದೊಂದಿಗೆ ಬಿಸಿಯೇರಿಸಿದ ಶ್ರೇಯಾ….!
Next articleಕುದುರೆಯನ್ನೇರಿ ಸ್ಟೈಲಿಷ್ ಲುಕ್ಸ್ ಕೊಟ್ಟ ಮೀರಾ ಜಾಸ್ಮೀನ್, ವೈರಲ್ ಆದ ಲೇಟೆಸ್ಟ್ ಪೊಟೋಸ್…!