ಮಾಲ್ಡೀವ್ಸ್ ಬೀಚ್ ಗಳ ಬಗ್ಗೆ ನಟಿ ಸಾಯಿ ಪಲ್ಲವಿ ಹೇಳಿದ್ದು ಏನು ಗೊತ್ತಾ?

ಸಿನಿರಂಗದ ಬಹುತೇಕ ನಟ/ನಟಿಯರಿಗೆ ಮಾಲ್ಡೀವ್ಸ್ ಅಂದರೇ ತುಂಬಾನೆ ಫೇವರಿಟ್ ಸ್ಪಾಟ್. ಸಮಯ ಸಿಕ್ಕರೇ ಸಾಕು ಮಾಲ್ಡೀವ್ಸ್ ಗೆ ಹಾರಿ ಅಲ್ಲಿನ ಪ್ರಾಕೃತಿಕ ಸೌಂದರ್ಯಗಳನ್ನು ಸವಿಯುತ್ತಿರುತ್ತಾರೆ. ಅಲ್ಲಿನ ಬೀಚ್ ಗಳಲ್ಲಿ ಎಂಜಾಯ್ ಮಾಡುತ್ತಾ, ರೆಸಾರ್ಟ್ ಗಳಲ್ಲಿ ಸುತ್ತಾಡುತ್ತಾ ಪೋಸ್ ಕೊಡುತ್ತಿರುತ್ತಾರೆ. ಅದರಲ್ಲೂ ಕೆಲವು ನಟಿಯರು ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿಯಲ್ಲಿ ಹಾಟ್ ಪೋಸ್ ಗಳನ್ನು ಕೊಟ್ಟು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇನ್ನೂ ಮಾಲ್ಡೀವ್ಸ್ ಬೀಚ್ ಗಳ ಬಗ್ಗೆ ಸಾಯಿ ಪಲ್ಲವಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಅನೇಕ ನಟಿಯರು ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುವಂತಹ ಪೊಟೋಗಳು ಸಖತ್ ವೈರಲ್ ಆಗಿದೆ. ಎಲ್ಲಾ ಸೌಕರ್ಯಗಳನ್ನು ಹೊಂದಿರುವಂತಹ ಏಕೈಕ ಸ್ಥಳ ಎಂದು ಮಾಲ್ಡೀವ್ಸ್ ಅನ್ನು ಹೇಳುತ್ತಿರುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ಗೋವಾ ಸಹ ಇಂಡಿಯನ್ ಮಾಲ್ಡೀವ್ಸ್ ಎಂದೇ ಕರೆಯಲಾಗುತ್ತದೆ. ಇದು ಸಹ ಕೆಲವೊಂದು ನಟಿಯರಿಗೆ ಫೇವರಿಟ್ ಆಗಿದೆ. ಬೀಚ್ ನಲ್ಲಿ ಬಿಕಿನಿ, ಸ್ವಿಮ್ ಸ್ಯೂಟ್ ಧರಿಸಿ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಆದರೆ ದಕ್ಷಿಣ ಭಾರತದ ಬಹುಬೇಡಿಕೆ ನಟಿ ಸಾಯಿ ಪಲ್ಲವಿ ಮಾತ್ರ ಇದಕ್ಕೆ ದೂರವಾಗಿದ್ದಾರೆ. ಎಲ್ಲ ನಟಿಯರೂ ಬಿಕಿನಿಯಲ್ಲಿ, ಸ್ವಿಮ್ ಸ್ಯೂಟ್ ನಲ್ಲಿ ಹಾಟ್ ಪೋಸ್ ಗಳನ್ನು ಹಂಚಿಕೊಳ್ಳುತ್ತಿದ್ದರೇ, ಸಾಯಿ ಪಲ್ಲವಿ ಮಾತ್ರ ಬೀಚ್ ಸೌಂದರ್ಯವನ್ನು ವಿಭಿನ್ನವಾಗಿ ಆಸ್ವಾಧಿಸುತ್ತಿದ್ದಾರೆ.

ಇನ್ನೂ ಬೀಚ್ ಗಳ ಬಗ್ಗೆ ತನ್ನ ಮನಸ್ಸಿನಲ್ಲಿನ ವಿಚಾರವನ್ನು ಹಂಚಿಕೊಂಡಿದ್ದಾರೆ ಸಾಯಿ ಪಲ್ಲವಿ. ವಿಶ್ವದಲ್ಲಿ ಅನೇಕ ಸುಂದರ ಪ್ರದೇಶಗಳಿದ್ದರೂ ಬೀಚ್ ಗಳನ್ನೇ ಏಕೆ ಇಷ್ಟಪಡುತ್ತಾರೆ ಎಂದರೇ, ಅದಕ್ಕೆ ಕಾರಣವೇ ಇಲ್ಲ ಎಂದು ಹೇಳಿದ್ದಾರೆ. ಬೀಚ್ ಬಳಿ ನಿಂತು ಸಮುದ್ರವನ್ನು ನೋಡುತ್ತಿದ್ದರೇ ಆಗುವಂತಹ ಅನುಭೂತಿಯೇ ಬೇರೆಯಾಗಿದೆ. ಆ ಸಮಯದಲ್ಲಿ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಂಡು ಧ್ಯಾನ ಮಾಡಿದಂತೆ ಫೀಲಿಂಗ್ ಉಂಟಾಗುತ್ತದೆ. ಬೀಚ್ ನಲ್ಲಿ ಪುಸ್ತಕಗಳನ್ನು ಓದುವುದು ಎಂದರೇ ನನಗೆ ತುಂಬಾ ಇಷ್ಟ. ಸಿನೆಮಾ ಸ್ಕ್ರಿಪ್ಟ್ ಸಹ ಪುಸ್ತಕದಂತೆ ಭಾವಿಸುತ್ತಾರಂತೆ ಸಾಯಿ ಪಲ್ಲವಿ. ಇದೆಲ್ಲಾ ಬೀಚ್ ನಲ್ಲಿ ಸಾಯಿ ಪಲ್ಲವಿ ಮಾಡುವಂತಹ ಕೆಲಸಗಳಂತೆ. ಸಮುದ್ರ ತೀರದ ಸೌಂದರ್ಯವನ್ನು ಆಕೆ ಈ ರೀತಿಯಾಗಿ ಎಂಜಾಯ್ ಮಾಡುತ್ತಾರಂತೆ.

ಸಿನಿರಂಗದಲ್ಲಿ ಗ್ಲಾಮರ್‍ ಪ್ರದರ್ಶನದಿಂದ ದೂರವುಳಿದೇ ಬೇಡಿಕೆ ಹೆಚ್ಚಿಸಿಕೊಂಡ ನಟಿಯರಲ್ಲಿ ಸಾಯಿ ಪಲ್ಲವಿ ಮೊದಲಿಗರಾಗಿರುತ್ತಾರೆ. ಈ ಕಾರಣಕ್ಕೆ ಸಾಯಿ ಪಲ್ಲವಿ ಅಂದರೇ ಅನೇಕ ಯುವಕರಿಗೆ ತುಂಬಾ ಇಷ್ಟ. ಇತ್ತೀಚಿಗಷ್ಟೆ ಆಕೆ ಅಭಿನಯದ ವಿರಾಟಪರ್ವಂ, ಗಾರ್ಗಿ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು.

Previous articleನಟಿ ಅನುಷ್ಕಾ ಫಾಲೋ ಮಾಡುವ ಆ ಸ್ಟಾರ್ ನಟರು ಯಾರು ಗೊತ್ತಾ?
Next articleಅವರು ಕರೆದಾಗ ಹೋದ್ರೆ ಸಿನೆಮಾದಲ್ಲಿ ಚಾನ್ಸ್ ಪಕ್ಕಾ, ಮಲ್ಲಿಕಾ ಶೆರಾವತ್ ಹೇಳಿದ್ದು ಯಾರ ಬಗ್ಗೆ?