ಮದುವೆಯಾದರೂ ಕಡಿಮೆಯಾಗಿಲ್ಲ ನಯನತಾರಾ ಕ್ರೇಜ್, ಗಾಡ್ ಫಾದರ್ ಸಿನೆಮಾಗೆ ಭಾರಿ ಮೊತ್ತ ಪಡೆದ ನಯನ್….!

ಸದ್ಯ ಸೌತ್ ಸಿನಿರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆದುಕೊಳ್ಳುತ್ತಿರುವ ನಟಿಯರಲ್ಲಿ ನಯನತಾರಾ ಟಾಪ್ ನಲ್ಲಿದ್ದಾರೆ. ವಯಸ್ಸಾಗುತ್ತಿದ್ದರೂ ಸಹ ತನ್ನ ರೇಂಜ್ ಬೆಳೆಸಿಕೊಳ್ಳುತ್ತಿರುವ ಈಕೆ ಪುಲ್ ಫಾಂ ನಲ್ಲಿರುವ ನಟಿಯರಿಗಿಂತ ಮೂರು ಪಟ್ಟು ಅಧಿಕ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸೀನಿಯರ್‍ ಬ್ಯೂಟಿ ನಯನತಾರಾ ಇದೀಗ ಮೆಗಾಸ್ಟಾರ್‍ ಚಿರಂಜೀವಿ ಯವರ ಗಾಡ್ ಫಾದರ್‍ ಸಿನೆಮಾದಲ್ಲಿ ನಟಿಸಲು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಸೌತ್ ಸಿನಿರಂಗದಲ್ಲಿ ಲೇಡಿ ಸೂಪ್ ಸ್ಟಾರ್‍ ಎಂದೇ ಖ್ಯಾತಿ ಪಡೆದುಕೊಂಡ ನಯನತಾರಾ ಬರೊಬ್ಬರಿ 15 ವರ್ಷಗಳಿಂದ ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಸಿನಿರಂಗವನ್ನು ಆಳುತ್ತಿದ್ದಾರೆ. ಸದ್ಯ ಈಕೆ ಮಹಿಳಾ ಪ್ರಧಾನ ಸಿನೆಮಾಗಳಲ್ಲಿ ಹಾಗೂ ಸ್ಟಾರ್‍ ನಟರಿಗೆ ಮುಖ್ಯವಾದ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೆ ಆಕೆ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಮದುವೆಯಾದರು. ಮದುವೆಯಾದರೂ ಸಹ ಆಕೆ ಸಿನೆಮಾಗಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ವಯಸ್ಸಾಗುತ್ತಿದ್ದಂತೆ ಆಕೆಯೆ ಕ್ರೇಜ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ, ಜೊತೆಗೆ ಸಂಭಾವನೆಯನ್ನೂ ಸಹ ದೊಡ್ಡ ಮಟ್ಟದಲ್ಲೇ ಏರಿಸಿಕೊಳ್ಳುತ್ತಿದ್ದಾರೆ. ಇನ್ನೂ ನಯನತಾರಾ ಚಿರಂಜೀವಿನ ಅಭಿನಯದ ಗಾಡ್ ಫಾದರ್‍ ಸಿನೆಮಾದಲ್ಲಿ ಚಿರಂಜೀವಿಯವರಿಗೆ ತಂಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿನ ಆ ಪಾತ್ರಕ್ಕೆ ಆಕೆ ತೆಗೆದುಕೊಂಡ ಸಂಭಾವನೆ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ನಟಿಸಲು ನಯನತಾರಾ ಈ ಹಿಂದೆ ಕೆಲವೊಂದು ಕಂಡಿಷನ್ ಗಳನ್ನು ಇಟ್ಟಿದ್ದರು ಎಂದು ಆಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಆಕೆಯ ಪಾತ್ರಕ್ಕಾಗಿ ಪಡೆದುಕೊಂಡ ಸಂಭಾವನೆಯ ವಿಚಾರ ಹಲ್ ಚಲ್ ಸೃಷ್ಟಿ ಮಾಡಿದೆ. ಆಕೆ ಪಡೆದುಕೊಂಡ ಮೊತ್ತ ಈ ಹಿಂದೆ ಆಕೆ ತೆಲುಗು ಸಿನೆಮಾಗಳ ಪೈಕಿ ಹೆಚ್ಚು ಸಂಭಾವನೆ ಗಾಡ್ ಫಾದರ್‍ ಸಿನೆಮಾದಲ್ಲಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಸಿನೆಮಾಗಾಗಿ ನಯನತಾರಾ ಬರೊಬ್ಬರಿ 7 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರಂತೆ. ಇನ್ನೂ ನಯನತಾರಾ ಯಾವುದೇ ಸಿನೆಮಾ ಒಪ್ಪಿಕೊಂಡರೂ ಸಹ ಒಂದು ಸಂದೇಶ ಪಕ್ಕಾ ಇರುತ್ತದೆ ಎಂಬುದು ಆಕೆಯ ಅಭಿಮಾನಿಗಳ ನಂಬಿಕೆ. ಆದರೆ ಗಾಡ್ ಫಾದರ್‍ ನಲ್ಲಿ ಆಕೆಯ ಪಾತ್ರಕ್ಕೆ ಅಷ್ಟೊಂದು ಮಹತ್ವ ಇಲ್ಲ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾಗುತ್ತಿದೆ.

ಇನ್ನೂ ನಯನತಾರಾ ಸೌತ್ ಇಂಡಿಯಾದಲ್ಲಿ ಮದುವೆಯಾದರೂ ಸಹ ಸಿನೆಮಾಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿರು ನಟಿಯಾಗಿದ್ದಾರೆ. ಇನ್ನೂ ಆಕೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಜೊತೆಗೆ ಜವಾನ್ ಹಾಗೂ ರಜನಿಕಾಂತ್ ರವರ ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾಗಳಲ್ಲೂ ಸಹ ಆಕೆ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳುತ್ತಿರುವುದಾಗಿ ಈ ಹಿಂದೆಯೇ ಸುದ್ದಿಗಳು ಹರಿದಾಡಿದ್ದವು.

Previous articleಮತ್ತೇ ಒಂದಾಗಲಿದ್ದಾರೆ ಸ್ಟಾರ್ ಜೋಡಿ ಧನುಷ್ ಐಶ್ವರ್ಯ, ಪುಲ್ ಖುಷಿಯಾಗಲಿದ್ದಾರೆ ತಲೈವಾ ರಜನಿಕಾಂತ್…!
Next articleಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ದಸರಾ ಸ್ಪೇಷಲ್ ಪಿಕ್ಸ್…!