ಹೊಸ ಸಿನೆಮಾದ ಮೂಲಕ ವಿಭಿನ್ನವಾಗಿ ಕಾಣಿಸಿಕೊಂಡ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ…!

ಸೌತ್ ಸಿನಿರಂಗದಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ನಟಿ ಅನುಷ್ಕಾ ಶೆಟ್ಟಿಯವರನ್ನು ದೊಡ್ಡ ಪರದೆಯ ಮೇಲೆ ಕಂಡು ತಿಂಗಳುಗಳು ಕಳೆಯುತ್ತಿವೆ. ಬಾಹುಬಲಿ ಬಳಿಕ ಈಕೆ ಸಕ್ಸಸ್ ಕಂಡು ತಿಂಗಳುಗಳೇ ಕಳೆಯುತ್ತಿದೆ. ಅನುಷ್ಕಾ ಅಭಿಮಾನಿಗಳು ಸಹ ಅನುಷ್ಕಾ ರವರ ಹಿಟ್ ಸಿನೆಮಾಗಾಗಿ ತುದಿಗಾಲಿನ ಮೇಲೆ ಕಾಯುತ್ತಿದ್ದಾರೆ. ಬಾಹುಬಲಿ ಸಿನೆಮಾ ಬಳಿಕ ಭಾಗಮತಿಯಲ್ಲಿ ಕಾಣಿಸಿಕೊಂಡ ಈಕೆ ತಮ್ಮ ಸ್ಪೀಡ್ ಕಡಿಮೆ ಮಾಡಿಕೊಂಡಿದ್ದಾರೆ. ಕೊನೆಯದಾಗಿ ಆಕೆ ನಿಶ್ಯಬ್ದಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ನಟಿ ಅನುಷ್ಕಾ ಅಭಿನಯದ ನಿಶ್ಯಬ್ದಂ ಎಂಬ ಸಿನೆಮಾ ಒಟಿಟಿ ಮೂಲಕ ಬಿಡುಗಡೆಯಾಗಿತ್ತು. ಆದರೆ ಈ ಸಿನೆಮಾ ನಿರೀಕ್ಷೆಯನ್ನು ದೊಡ್ಡದಾಗಿಯೇ ಹುಸಿ ಮಾಡಿಬಿಟ್ಟಿತು. ಟಾಲಿವುಡ್ ನಲ್ಲಿ ಅರುಂಧತಿ, ಬಾಹುಬಲಿ, ಭಾಗಮತಿ ಮೊದಲಾದ ಸಿನೆಮಾಗಳಲ್ಲಿ ನಟಿಸುವ ಮೂಲಕ ತನ್ನದೇ ಆದ ಕ್ರೇಜ್ ಅನ್ನು ಪಡೆದುಕೊಂಡರು. ಆದರೆ ಆಕೆ ಕೊನೆಯದಾಗಿ ಕಾಣಿಸಿಕೊಂಡ ನಿಶ್ಯಬ್ದಂ ಸಿನೆಮಾ ಮಾತ್ರ ಆಕೆಯ ಅಭಿಮಾನಿಗಳನ್ನು ತುಂಬಾನೆ ನಿರಾಸೆ ಮಾಡಿತ್ತು. ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದರು. ತೂಕವನ್ನು ಕಡಿಮೆ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಅನುಷ್ಕಾ ಸಿನೆಮಾಗಳಿಂದ ದೂರ ಉಳಿದಿದ್ದರು ಎಂಬ ಮಾತುಗಳೂ ಸಹ ಇದೆ. ಇದೀಗ ಅನುಷ್ಕಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಆಕೆಯ ಹೊಸ ಸಿನೆಮಾ ಘೋಷಣೆಯಾಗಿದೆ.

ಇನ್ನೂ ಅನುಷ್ಕಾ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ರೂಮರ್‍ ಗಳೂ ಸಹ ಹರಿದಾಡಿತ್ತು. ಸುಮಾರು ತಿಂಗಳುಗಳಿಂದ ಅನುಷ್ಕಾ ಸಿನೆಮಾದ ಅಪ್ಡೇಟ್ ಗಾಗಿ ಆಕೆಯ ಅಭಿಮಾನಿಗಳು ತುಂಬಾನೆ ಕಾಯುತ್ತಿದ್ದರು. ಇದೀಗ ಆಕೆ ಅಭಿನಯಿಸುತ್ತಿರುವ ಹೊಸ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ರಿಲೀಸ್ ಆಗಿದೆ. ಈ ಪೋಸ್ಟರ್‍ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದ್ದಾರೆ. ಆಕೆಯ ಹುಟ್ಟುಹಬ್ಬದ ನಿಮಿತ್ತ ಅನೇಕ ದಿನಗಳಿಂದ ಎದುರು ನೋಡುತ್ತಿದ್ದ ಸಿನೆಮಾದ ಬಗ್ಗೆ ಅಪ್ಡೇಟ್ ದೊರೆತಿದೆ. ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ಕಾಂಬಿನೇಷನ್ ನಲ್ಲಿ ಯೂವಿ ಕ್ರಿಯೇಷನ್ಸ್ ಬ್ಯಾನರ್‍ ನಡಿ ಮಹೇಶ್ ಎಂಬ ನಿರ್ದೇಶಕನ ಸಾರಥ್ಯದಲ್ಲಿ ಈ ಸಿನೆಮಾ ಮೂಡಿಬರಲಿದ್ದು, ಸಿನೆಮಾದಲ್ಲಿ ಅನುಷ್ಕಾ ಪ್ರಧಾನ ಪಾತ್ರ ಪೋಷಿಸಲಿದ್ದಾರೆ.

ಇನ್ನೂ ಅನುಷ್ಕಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನುಷ್ಕಾ ಅಭಿನಯದ ಈ ಹೊಸ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್‍ ನಲ್ಲಿ ಅನುಷ್ಕ ಆಕರ್ಷಣೆಯಾಗಿದ್ದಾರೆ. ಈ ಸಿನೆಮಾದಲ್ಲಿ ಆಕೆ ಚೆಫ್ ಪಾತ್ರದಲ್ಲಿ ರಂಜಿಸಲಿದ್ದಾರೆ. ಅನುಷ್ಕಾ ರವರ ಸಿನಿ ಕೆರಿಯರ್‍ ನಲ್ಲಿ ಇದು ವಿಭಿನ್ನವಾದ ಪಾತ್ರ ಎಂದು ಹೇಳಲಾಗುತ್ತಿದೆ. ಕಥೆ ಸಹ ಸಿನಿ ಪ್ರೇಕ್ಷಕರಿಗೆ ಪುಲ್ ಎಂಟರ್‍ ಟೈನ್ ಮೆಂಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅನುಷ್ಕಾರವರ ಈ ಪೋಸ್ಟರ್‍ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Previous articleಮೊದಲ ಬಾರಿಗೆ ಮಗಳ ಮುಖ ದರ್ಶನ ಮಾಡಿಸಿದ ನಟಿ ಪ್ರಣಿತಾ, ವೈರಲ್ ಆದ ಪೊಟೋಸ್….!
Next articleನಾಗಿನಿಯಂತೆ ಬುಸುಗುಡುವ ಸೌಂದರ್ಯದೊಂದಿಗೆ ಟೆಂಪ್ಟಿಂಗ್ ಲುಕ್ಸ್ ಕೊಟ್ಟ ಪ್ರಗ್ಯಾ…..!