ಒಂದೇ ದಿನದಲ್ಲಿ ತೆಲುಗು ತಮಿಳು ಹಿಂದಿ ಚಿತ್ರಗಳಿಗೆ ಚಳಿ ಬಿಡಿಸಿದ ದರ್ಶನ್ ಹಾಗು ಸುದೀಪ್! ಆದಷ್ಟು ಶೇರ್ ಮಾಡಿ

movie03
movie03

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರ ರಂಗದ ಇಬ್ಬರು ಪಿಲ್ಲರ್ ಗಳು ಎಂದೇ ಹೇಳಬಹುದು. ಇವರ ಸ್ನೇಹದಲ್ಲಿ ಬಿರುಕು ಮೂಡಿರಬಹುದು, ಆದರೆ ಸಿನಿಮಾ ಅಂತ ಬಂದಾಗ ಇಬ್ಬರೂ ಕೂಡ ಕನ್ನಡ ಚಿತ್ರ ರಂಗದ ಕಾವಲು ಗಾರರು. ನೆನ್ನೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿತ್ತು. ಇನ್ನೊಂದೆಡೆ ನೆನ್ನೆ ನಮ್ಮ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಈ ಎರಡು ವಿಡಿಯೋ ಗಳು ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿತ್ತು ಮತ್ತು 20 ಲಕ್ಷಕ್ಕೂ ಹೆಚ್ಚು ಮಂದಿ ಯೌಟ್ಯೂಬ್ ನಲ್ಲಿ ನೋಡಿದ್ದಾರೆ. ಈಗ ವಿಷ್ಯ ಏನಪ್ಪಾ ಅಂದರೆ ಈ ಎರಡು ವಿಡಿಯೋ ಗಳನ್ನೂ ನೋಡಿ ಪರ ಭಾಷೆಯ ಸಿನಿಮಾ ಮಂದಿ ಶಾಕ್ ಆಗಿದ್ದಾರೆ ಹಾಗು ಕನ್ನಡದ ಕಡೆ ತಿರುಗಿ ನೋಡುತ್ತಾ ಇದ್ದಾರೆ. ಕಂಪ್ಲೀಟ್ ಡೀಟೇಲ್ಸ್ ಓದಿರಿ
ಸಂಕ್ರಾಂತಿ ಹಬ್ಬದ ದಿನ ದಂದು ತಮಿಳ್ನಾಲ್ಲಿ ಸಿಂಭಾ ಚಿತ್ರದ ಟ್ರೇಲರ್, ವಿಕ್ರಂ ಅವರ Kadaram Kondan Official ಟೀಸರ್, ಪ್ರಭು ದೇವಾ ಅವರ ಚಾರ್ಲಿ ಚಾಪ್ಲಿನ್ ಚಿತ್ರದ ಟ್ರೇಲರ್ , ತೆಲುಗಿನ ಧನ್ ಧನ್ ಎಂಬ ಚಿತ್ರದ ಹಾಡಿನ ಟ್ರೇಲರ್, ಹಿಂದಿ ಯಲ್ಲಿ ರಣವೀರ್ ಸಿಂಗ್ ಅವರ ಗಲ್ಲಿ ಬಾಯ್ ಚಿತ್ರದ ಒಂದು ಹಾಡಿನ ಟೀಸರ್ ಕೂಡ ಬಿಡುಗಡೆ ಆಗಿತ್ತು. ಇದರ ಜೊತೆಗೆ ನಮ್ಮ ಕನ್ನಡದಲ್ಲಿ ಸಂಕ್ರಾಂತಿ ದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಹಾಗು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿತ್ತು. ಬೇರೆ ಯಾವ ಭಾಷೆಯ ಟ್ರೇಲರ್ ಗಳು ಅಥವಾ ಹಾಡುಗಳು ಅಥವಾ ಟೀಸರ್ ಗಳು ನೆನ್ನೆ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿರಲಿಲ್ಲ. ಆದರೆ ನಮ್ಮ ಕನ್ನಡದ ಯಜಮಾನ ಹಾಗು ಪೈಲ್ವಾನ್ ಚಿತ್ರದ ವಿಡಿಯೋಗಳು ಯೌಟ್ಯೂಬ್ ನಲ್ಲಿ ಸುಮಾರು 20 ಘಂಟೆಗಳಿಂದ ಟ್ರೆಂಡಿಂಗ್ ಆಗಿದೆ. ಇದಲ್ಲದೆ ಪೈಲ್ವಾನ್ ಚಿತ್ರದ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್, ಪ್ರಭು ದೇವಾ, ರಾಮ್ ಗೋಪಾಲ್ ವರ್ಮಾ, ಇನ್ನೂ ಹಲವಾರು ಭಾರತದ ಚಿತ್ರ ರಂಗದ ತಾರೆಯರು ಟ್ವೀಟ್ ಮಾಡಿದ್ದಾರೆ.
ಹಾಗು ಮೊನ್ನೆ ಬಿಡುಗಡೆ ಆದ ತಮಿಳು, ತೆಲುಗು ಹಾಗು ಹಿಂದಿ ಭಾಷೆಯ ಟ್ರೇಲರ್/ ಟೀಸರ್ ಗಳಿಗೆ ನಮ್ಮ ಕನ್ನಡದ ಯಜಮಾನ ಹಾಗು ಪೈಲ್ವಾನ್ ಚಿತ್ರಕ್ಕೆ ಬಂಡ ಲಕ್ಷಗತಲ್ಲೆ views ಬಂದಿಲ್ಲ. ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ ಎಂದೇ ಹೇಳಬಹುದು. ಯಜಮಾನ ಚಿತ್ರದ ಹಾಡನ್ನು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಮಂದಿ ಯೌಟ್ಯೂಬ್ ನಲ್ಲಿ ನೋಡಿದ್ದಾರೆ, ಹಾಗು ಪೈಲ್ವಾನ್ ಚಿತ್ರದ ಟೀಸರ್ ಅನ್ನು ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಯೌಟ್ಯೂಬ್ ನಲ್ಲಿ ನೋಡಿದ್ದಾರೆ. ಇದೇ ಕಾರಣಕ್ಕೆ ಈಗ ತೆಲುಗು, ತಮಿಳು ಹಾಗು ಹಿಂದಿ ಭಾಷೆಯ ಸಿನಿಮಾ ಮಂದಿ ನಮ್ಮ ಕನ್ನಡದ ಕಡೆ, ಕರ್ನಾಟಕದ ಕಡೆ ತಿರುಗಿ ನೋಡುತ್ತಿದ್ದಾರೆ. ಈ ಹಿಂದೆ ಕನ್ನಡದ ಕೆಜಿಫ್ ಚಿತ್ರ ಬಂದಾಗ ಇಡೀ ಭಾರತವೇ ನಮ್ಮ ಚಿತ್ರ ರಂಗದ ಕಡೆ ತಿರುಗಿ ನೋಡಿತ್ತು.
ಇಂತಹ ಅದ್ಭುತ ಸಾಧನೆ ಗಳನ್ನೂ ಮಾಡುತ್ತಿರುವ ಯಜಮಾನ ಚಿತ್ರ ತಂಡಕ್ಕೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ, ಪೈಲ್ವಾನ್ ಚಿತ್ರ ತಂಡಕ್ಕೆ ಹಾಗು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ನಮ್ಮ ಕಡೆ ಇಂದ ಸಲಾಂ! ಕನ್ನಡದಲ್ಲಿ ಇನ್ನೂ ಹೆಚ್ಚು ಹೆಚ್ಚು ಅದ್ಭುತ ಕಂಟೆಂಟ್ ಇರುವ ಸಿನಿಮಾಗಳು ಬರಬೇಕು, ಇಡೀ ಭಾರತವೇ ನಮ್ಮ ಸಿನಿಮಾಗಳಿಗೆ ವೇಟ್ ಮಾಡಬೇಕು, ಅಂತಹ ಸಮಯ ಆದಷ್ಟು ಬೇಗ ಬರಲಿ ಎಂದು ನಮ್ಮ ಆಸೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Previous articleಒಂದೇ ದಿನದಲ್ಲಿ ತೆಲುಗು ತಮಿಳು ಹಿಂದಿ ಚಿತ್ರಗಳಿಗೆ ಚಳಿ ಬಿಡಿಸಿದ ದರ್ಶನ್ ಹಾಗು ಸುದೀಪ್! ಆದಷ್ಟು ಶೇರ್ ಮಾಡಿ
Next article(video)ಯಾವನೋ ಅವ್ನು ಅಮ್ಮ ಅಕ್ಕ ಅನ್ನೋನು! ಯಾವನು ಏನು ಕಿತ್ಕೊಳಕ್ಕೆ ಆಗಲ್ಲ ಎಂದ ಜಗ್ಗೇಶ್, ವಿಡಿಯೋ ನೋಡಿ