ಸ್ಟಾರ್ ನಟರಷ್ಟೆ ಸಂಭಾವನೆ ಏರಿಸಿಕೊಂಡ ನಟಿ ನಯನತಾರಾ, ಮದುವೆಯಾದರೂ ಡಿಮ್ಯಾಂಡ್ ಕಡಿಮೆಯಾಗಿಲ್ಲ…!

ದಕ್ಷಿಣ ಭಾರತದ ಸಿನಿರಂಗದಲ್ಲಿ ಟಾಪ್ ನಟಿಯರಲ್ಲಿ ಅಗ್ರಸ್ಥಾನದಲ್ಲಿರುವ ನಯನತಾರಾ ಇದೀಗ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಇತ್ತೀಚಿಗಷ್ಟೆ ಆಕೆ ನಿರ್ದೇಶಕ ವಿಘ್ನೇಶ್ ಎಂಬುವವರ ಜೊತೆ ಮದುವೆಯಾದರು. ಮದುವೆಯಾದರೂ ಸಹ ಆಕೆ ಅನೇಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೊಡ್ಡ ಸ್ಠಾರ್‍ ನಟರ ಜೊತೆ ದೊಡ್ಡ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಣ ಭಾರತದ ಕ್ರೇಜಿ ನಟಿಯಾದ ಈಕೆ ಇದೀಗ ಬಾಲಿವುಡ್ ಸಿನೆಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಆಕೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಹಾಗೂ ಕಾಲಿವುಡ್ ಖ್ಯಾತ ನಿರ್ದೇಶಕ ಅಟ್ಲಿ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾದಲ್ಲಿ ನಾಯಕಿಯಾಗಿ ಕಾಣಸಿಕೊಳ್ಳಲಿದ್ದಾರೆ.

ನಯನತಾರಾ ಸಿನೆಮಾಗಳಲ್ಲಿ ನಟಿಸಿ ಸುಮಾರು 15 ವರ್ಷಗಳು ಕಳೆದಿದೆ. ಸಿನೆಮಾಗಳಲ್ಲಿ ಎಂಟ್ರಿ ಆದಾಗಿನಿಂದ ಒಂದೇ ವಿಧದ ಸ್ಟಾರ್‍ ಇಮೇಜ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇನ್ನೂ ಆಕೆ ಸಿನೆಮಾಗಳಿಂದ ಸಿನೆಮಾಗಳಿಗೆ ಸಂಭಾವನೆ ಏರಿಸಿಕೊಂಡು ಹೋಗುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ಟಾಪ್ ಸ್ಟಾರ್‍ ನಟಿಯಾಗಿ ತನ್ನದೇ ಆದ ಸ್ಟಾರ್‍ ಇಮೇಜ್ ಅನ್ನು ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಆಕೆಗೆ ಅದೆಷ್ಟೊ ಮಂದಿ ಎದುರು ಬಂದರೂ ಸಹ ಕಡಿಮೆಯಾಗದೇ ತನ್ನ ಕ್ರೇಜ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇನ್ನೂ ಆಕೆಯ ಕೆಲವೊಂದು ಸಿನೆಮಾಗಳೂ ಸೋತರೂ ಸಹ ಎದೆಗುಂದದೆ ಸಿನೆಮಾಗಳಲ್ಲಿ ಮುಂದುವರೆಯುತ್ತಿದ್ದಾರೆ. ಅನೇಕ ಸಿನೆಮಾಗಳಲ್ಲಿ ನಯನತಾರಾ ಸೋತರೂ ಸಹ ಆಕೆಗೆ ಅವಕಾಶಗಳು ಬರುವುದು ಮಾತ್ರ ಕಡಿಮೆಯಾಗಿಲ್ಲ. ಇದೀಗ ಸಿನೆಮಾಗಳಲ್ಲಿ ಆಕೆಯ ಸಂಭಾವನೆ ಏರುತ್ತಲೇ ಇದೆ.

ಇನ್ನೂ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಅನೇಕ ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಕಳೆದ ಜೂನ್ 9 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಾಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯಾದರು. ಮದುವೆಯಾದ ಬಳಿಕ ನಟಿಯರಿಗೆ ಸಂಭಾವನೆ ಕಡಿಮೆಯಾಗುವುದು ಸಾಮಾನ್ಯ. ಜೊತೆಗೆ ಸಿನೆಮಾಗಳಲ್ಲಿ ಅವಕಾಶಗಳೂ ಸಹ ಕಡಿಮೆಯಾಗುತ್ತವೆ. ಆದರೆ ನಯನತಾರಾ ಗೆ ಮಾತ್ರ ಇದಕ್ಕೆ ವಿರುದ್ದವಾಗಿದೆ. ಆಕೆ ಪ್ರತಿಭೆಗೆ ಅನೇಕ ಸಿನೆಮಾಗಳ ಆಫರ್‍ ಗಳು ಹರಿಸಿ ಬರುತ್ತಿವೆ. ಇದರ ಜೊತೆಗೆ ಬಾಲಿವುಡ್ ನಲ್ಲೂ ಸಹ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಹಾಗೂ ತಮಿಳು ನಿರ್ದೇಶಕ ಅಟ್ಲಿ ಕಾಂನಿನೇಷನ್ ನಲ್ಲಿ ಮೂಡಿಬರುತ್ತಿರುವ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಾಗಿ ನಯನತಾರಾ ಎಂಟು ಕೋಟಿ ಡಿಮ್ಯಾಂಡ್ ಮಾಡಿದ್ದಾಗಿ ಸುದ್ದಿಗಳು ಹರಿದಾಡಿವೆ. ಇದೀಗ ಆಕೆ ಮುಂದಿನ ಚಿತ್ರಕ್ಕೆ ಮತಷ್ಟು ಸಂಭಾವನೆಯನ್ನು ಏರಿಸಿದ್ದಾರೆ ಎನ್ನಲಾಗಿದೆ.

ಖ್ಯಾತ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಬ್ಯಾನರ್‍ ನಡಿ ಮೂಡಿಬರಲಿರುವ ಸಿನೆಮಾಗೆ ನಯನತಾರಾ ಒಪ್ಪಿಗೆ ನೀಡಿದ್ದಾರೆ. ಈ ಸಿನೆಮಾ ನಯನತಾರಾಗೆ 75 ನೇ ಸಿನೆಮಾ ಆಗಿದೆ. ಈ ಸಿನೆಮಾಗೆ ನಯನತಾರಾ ಗ್ರೀನ್ ಸಿಗ್ನಲ್ ನೀಡಿದ್ದು, ಈ ಸಿನೆಮಾ ಲೇಡಿ ಓರಿಯೆಂಟೆಂಡ್ ಸಿನೆಮಾ ಆಗಿದೆ. ಈ ಸಿನೆಮಾದಲ್ಲಿ ನಟಿಸಲು ನಯನತಾರಾ 10 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸದ್ಯ ನಯನತಾರಾ ಇತರೆ ಸ್ಟಾರ್‍ ನಟರ ಸಂಭಾವನೆಗೆ ಸಮನಾಗಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಈ ಟಾಪಿಕ್ ಹಾಟ್ ಟಾಪಿಕ್ ಆಗಿದೆ.

Previous articleಸಾರ್ವಜನಿಕವಾಗಿಯೇ ಲಿಪ್ ಲಾಕ್ ಮಾಡಿದ ನಿಶ್ವಿಕಾ ನಾಯ್ಡು, ವೈರಲ್ ಆದ ವಿಡಿಯೋ..!
Next articleಕಾಲಿವುಡ್ ಸ್ಟಾರ್ ನಟನ ಸಿನೆಮಾದಲ್ಲಿ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಯಾಮ್….!