ತೆಲುಗು ಚಿಕಟಿ ಗದಿಲೊ ಚಿಕತ್ಕೊಟ್ಟುಡು ಸಿನೆಮಾ ಮೂಲಕ ಖ್ಯಾತಿ ಪಡೆದ ನಟಿ ನಿಕ್ಕಿ ತಂಬೋಲಿ ನಿರ್ದೆಶಕ ತಮ್ಮೊಂದಿಗೆ ನಡೆದುಕೊಂಡ ರೀತಿಯನ್ನು ಬಿಚ್ಚಿಟ್ಟಿದ್ದಾರೆ. ದಕ್ಷಿಣ ಭಾರತ ಸಿನಿ ರಂಗದ ನಿರ್ದೇಶನ ವಿರುದ್ದ ಸಂಚನಾತ್ಮಕವಾಗು ವಾಖ್ಯಾನಿಸಿದ್ದಾರೆ. ನಟಿ ನಿಕ್ಕಿ ಹಿಂದಿಯ ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸಿ ರನ್ನರ್ ಆಗಿದ್ದರು. ಸದ್ಯ ಟಾಲಿವುಡ್ ನಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಈಕೆ ಬಾಲಿವುಡ್ ರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಪ್ರಯತ್ನಿಸುತ್ತಿದ್ದಾರೆ.
ನಟಿ ನಿಕ್ಕಿ ತಂಬೊಲಿ ತೆಲುಗು ಸಿನೆಮಾಗಳ ಮೂಲಕವೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡು ತಮ್ಮ ಸೌದಂರ್ಯದ ಮೈಮಾಟವನ್ನು ಪ್ರದರ್ಶಿಸುತ್ತಾ ಅಭಿಮಾನಿಗಳು ಹಾಗೂ ವೀಕ್ಷಕರನ್ನು ಆಕರ್ಷಣೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ತೆಲುಗು ತಿಪ್ಪರಾ ಮೀಸಂ ಎಂಬ ಸಿನೆಮಾದ ಮೂಲಕ ಪರಿಚಯವಾದ ಈ ನಟಿ, ಚಿಕಟಿ ಗದಿಲೊ ಚಿತಕ್ಕೊಟ್ಟುಡು ಎಂಬ ಸಿನೆಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಇನ್ನೂ ಕಾಂಚನ-3 ಸಿನೆಮಾದಲ್ಲಿ ಸಹ ನಟಿಸಿದ್ದರು. ಬಳಿಕ ಇತರೆ ಭಾಷೆಗಳಲ್ಲೂ ಸಹ ಅವಕಾಶ ಬಂತಾದರೂ ಆಕೆ ಒಪ್ಪಿಲ್ಲವಂತೆ. ಹಿಂದಿ ಬಿಗ್ ಬಾಸ್-14 ಸೀಜನ್ ನಲ್ಲಿ ರನ್ನರ್ ಆಪ್ ಆಗಿ ಬಾಲಿವುಡ್ ನಲ್ಲಿ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್ ನಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕ್ರೇಜ್ ಅನ್ನು ಮತಷ್ಟು ಹೆಚ್ಚಿಸಿಕೊಳ್ಳು ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಸಿನೆಮಾ ಅವಕಾಶಕ್ಕಾಗಿ ಕಾಯುತ್ತಿರುವ ನಿಕ್ಕಿ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಿರ್ದೇಶಕರೊಬ್ಬರು ತಮಗೆ ನೀಡಿದ ಟಾರ್ಚರ್ ಬಗ್ಗೆ ಬಹಿರಂಗೊಳಿಸಿದ್ದಾರೆ. ನನ್ನ ಸಿನಿ ಕೆರೀರ್ ನಲ್ಲಿ ಅತ್ಯಂತ ಕೆಟ್ಟ ಅನುಭವ ಇದು ಎಂದು ಹೇಳಿಕೊಂಡಿದ್ದಾರೆ. ದಕ್ಷಿಣ ಸಿನಿರಂಗದ ಓವð ನಿರ್ದೇಶಕ ಶೂಟಿಂಗ್ ಸಮಯದಲ್ಲಿ ನನಗೆ ಟಾರ್ಚರ್ ನೀಡುತ್ತಿದ್ದರು. ನನ್ನ ಜೊತೆಗಿರುವ ಎಲ್ಲಾ ಡ್ಯಾನ್ಸರ್ ಗಳನ್ನು ಮೆಚ್ಚಿಕೊಳ್ಳುತ್ತಾನೆ. ನನ್ನನ್ನು ಮಾತ್ರ ಕಡಿಮೆ ಮಾಡಿ ಮಾತನಾಡುತ್ತಿದ್ದ ಎಂದು ಕಹಿ ಘಟನೆಯನ್ನು ಬಹಿರಂಗ ಮಾಡಿದ್ದಾಳೆ.
ನನಗೆ ಆತನ ಹೆಸರು ಹೇಳುವುದು ಇಷ್ಟವಿಲ್ಲ. ನನ್ನನ್ನು ತುಂಬಾ ಇಕ್ಕಟ್ಟಿಗೆ ಸಿಲುಕಿಸಿದ್ದ ಆ ನಿರ್ದೇಶಕ. ಶೂಟಿಂಗ್ ಮುಗಿದ ಬಳಿಕ ಮನೆಗೆ ಬಂದು ತುಂಬಾನೆ ಅಳುತ್ತಿದ್ದೆ. ಈ ವಿಚಾರ ನಮ್ಮ ಪೋಷಕರಿಗೂ ಸಹ ತಿಳಿದಿದೆ. ಇನ್ನೂ ವಿದೇಶಗಳಲ್ಲಿ ಶೂಟಿಂಗ್ ಗೆ ಹೋದಾಗಲೂ ಸಹ ಇದೇ ಸಮಸ್ಯೆಯನ್ನು ಎದುರಿಸಿದ್ದೆ. ಆದರೆ ನಾನು ಇದಕ್ಕೆ ಭಯಪಡದೆ ಮುಂದೆ ಸಾಗುತ್ತಿದ್ದೆ. ಮುಂದೆಯಾದರೂ ನನ್ನ ಟ್ಯಾಲೆಂಟ್ ಗುರ್ತಿಸುತ್ತಾರೆ ಎಂದು ಭಾವಿಸಿದ್ದೇನೆ. ಅಂತೆಯೇ ನಿರ್ದೇಶಕ ನನಗೆ ಟಚ್ ನಲ್ಲೇ ಇದ್ದಾರೆ ಎಂದು ಹಳೇಯ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ ನಿಕ್ಕಿ