ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್….!

ಸೌತ್ ಸಿನಿರಂಗದಲ್ಲಿ ಲೇಡಿ ವಿಲನ್ ಆಗಿ ಅನೇಕ ಹಿಟ್ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ವರಲಕ್ಷ್ಮೀ ಶರತ್ ಕುಮಾರ್‍ ಇತ್ತೀಚಿಗಷ್ಟೆ ಪ್ಯಾನ್ ಇಂಡಿಯಾ ಸಿನೆಮಾ ಯಶೋಧ ಸಿನೆಮಾದಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದರು. ಈ ಸಿನೆಮಾದಲ್ಲಿ ಆಕೆಯ ನಟನೆಗೆ ಒಳ್ಳೆಯ ರೆಸ್ಪಾನ್ಸ್ ಸಹ ಸಿಕ್ಕಿದೆ ಎನ್ನಬಹುದಾಗಿದೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಆಕೆ ತನ್ನ ವೈಯುಕ್ತಿಕ ವಿಚಾರಗಳನ್ನು ಹಾಗೂ ಸಿನಿ ಕೆರಿಯರ್‍ ಬಗ್ಗೆ ಮಾತನಾಡಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

ತೆಲುಗು ಹಾಗೂ ತಮಿಳು ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ ಶರತ್ ಕುಮಾರ್‍ ಸ್ಟಾರ್‍ ಕಿಡ್ ಆದರೂ ಸಹ ತಂದೆಯ ಪ್ರಾಬಲ್ಯವನ್ನು ಬಳಸಿಕೊಳ್ಳದೇ ಸ್ವಂತ ಟ್ಯಾಲೆಂಟ್ ಮೂಲಕ ಸ್ಟಾರ್‍ ನಟಿಯಾಗಿ ಬೆಳೆದಿದ್ದಾರೆ. ನಟಿಯಾಗಿ ಎಂಟ್ರಿ ಕೊಟ್ಟ ಈಕೆ ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ಪಾತ್ರಗಳನ್ನು ಸಹ ಪೋಷಣೆ ಮಾಡಿದ್ದಾರೆ. ಲೇಡಿ ವಿಲನ್ ಆಗಿಯೇ ಹೆಚ್ಚು ಸಿನೆಮಾಗಳಲ್ಲಿ ನಟಿಸುತ್ತಿರುವ ಈಕೆ ವಿಭಿನ್ನವಾದ ಅಭಿನಯದ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುತ್ತಾರೆ. ಸಿನೆಮಾಗಳ ಜೊತೆ ಜೊತೆಗೆ ಆಕೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುವ ಮೂಲಕ ತನ್ನಲ್ಲಿನ ಒಳ್ಳೆಯ ವ್ಯಕ್ತಿತ್ವವನ್ನು ಸಹ ತೋರಿಸಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ತನ್ನ ಮೇಲೆ ನಡೆದಂತಹ ಲೈಂಗಿಕ ದೌರ್ಜನ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಸಂದರ್ಶನದಲ್ಲಿ ವರಲಕ್ಷ್ಮೀ ಮಾತನಾಡುತ್ತಾ ತನ್ನ ಚಿಕ್ಕವಯಸ್ಸಿನಲ್ಲೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತಂತೆ. ಜೊತೆಗೆ ಒಂದು ಟಿವಿ ಚಾನಲ್ ಮುಖ್ಯಸ್ಥ ಸಹ ತನ್ನ ಜೊತೆ ಮಲಗುವಂತೆ ಕೇಳಿದ್ದನಂತೆ. ಕೂಡಲೇ ಆಕೆ ಆತನ ವಿರುದ್ದ ಆಕ್ರೋಷಗೊಂಡು ಬೈಯುತ್ತಾ ಹೊಡೆಯಲು ಹೋದಾಗ ಆತ ಓಡಿಹೋಗಿದ್ದನಂತೆ ಎಂದು ಆಕೆಯ ಮೇಲೆ ನಡೆದಂತಹ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಆಕೆ ತನ್ನ ಕೆರಿಯರ್‍ ಬಗ್ಗೆ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ನಟಿಯಾಗಲಿದ್ದೇನೆ ಎಂದುಕೊಂಡಾಗ ತನ್ನ ತಂದೆ ಶರತ್ ಕುಮಾರ್‍ ಬೇಡ ಎಂದಿದ್ದರಂತೆ. ಬಳಿಕ ತನ್ನ ತಾಯಿ ರಾಧಿಕಾ ರವರೊಂದಿಗೆ ಜೊತೆಗೂಡಿ ಶರತ್ ಕುಮಾರ್‍ ರವರನ್ನು ಒಪ್ಪಿಸಿದ್ದರಂತೆ ವರಲಕ್ಷ್ಮೀ. ಸಿನಿರಂಗದಲ್ಲಿ ಆಕೆ ಸಹ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾಗಿ ಸಂದರ್ಶನದಲ್ಲಿ ವಿಚಾರ ಹಂಚಿಕೊಂಡಿದ್ದಾರೆ.

ಇನ್ನೂ ನಟಿ ವರಲಕ್ಷ್ಮೀಗೆ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಫ್ರೆಂಚ್ ಹಾಗೂ ಸ್ಪಾನಿಷ್ ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದಾರಂತೆ. ಇನ್ನೂ ತಮ್ಮ ಶ್ರೀ ಶಕ್ತಿ ಎನ್.ಜಿ.ಒ ಕೆಲಸಗಳನ್ನು ಸಹ ಆಕೆ ನೋಡಿಕೊಳ್ಳುತ್ತಿರುತ್ತಾರೆ. ಅತ್ಯಾಚಾರಕ್ಕೆ ಗುರಿಯಾದವರಿಗೆ ಧೈರ್ಯ ತುಂಬುವ, ಗೃಹ ಹಿಂಸೆಗೆ ತುತ್ತಾದವರ ಬೆಂಬಲಕ್ಕೆ ನಿಲ್ಲುವ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ತೊಂದರೆಯನ್ನು ಅನುಭವಿಸುವಂತಹ ಯಾರೇ ಆಗಲಿ ತಮ್ಮ ಸಂಸ್ಥೆಯ ನೆರವು ಕೋರಿ ಬಂದರೇ, ತಮ್ಮ ಸಂಸ್ಥೆಯ ಮೂಲಕ ನ್ಯಾಯ ಒದಗಿಸಲು ಹೋರಾಟ ಮಾಡುತ್ತಾರಂತೆ ವರಲಕ್ಷ್ಮಿ.

Previous article80ರ ದಶಕದ ಸ್ಟಾರ್ ಗಳು ಒಂದೇ ಫ್ರೇಂ ನಲ್ಲಿ, ವೈರಲ್ ಆದ ಗ್ರೂಪ್ ಪೊಟೋ….!
Next articleಯಂಗ್ ನಟರೊಂದಿಗೆ ನಟಿಸಲು ಕಂಫರ್ಟ್ ಎನ್ನುತ್ತಿದ್ದಾರಂತೆ ಮೀರಾ ಜಾಸ್ಮೀನ್, ಆ ನಟರು ಬೇಡ ಎಂದರೇ ಮೀರಾ?