ಸ್ಟಾರ್ ನಟಿ ಶ್ರುತಿ ಹಾಸನ್ ಲವರ್ ಜೊತೆಗೆ ಬ್ರೇಕಪ್ ಅಂತೆ, ನಟಿಯ ಬ್ರೇಕಪ್ ರೂಮರ್ ಸಖತ್ ವೈರಲ್….!

ನಟಿ ಶ್ರುತಿ ಹಾಸನ್ ಅನಗನಗಾ ಓ ಧೀರುಡು ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಸ್ಟಾರ್‍ ಕಿಡ್ ಆದರೂ ಆಕೆ ತನ್ನ ಸ್ವಂತ ಪ್ರತಿಭೆಯಿಂದಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಇನ್ನೂ ಶ್ರುತಿ ಹಾಸನ್ ಕೆಲವು ದಿನಗಳಿಂದ ಶಾಂತನು ಹಜಾರಿಕಾ ಎಂಬಾತನೊಂದಿಗೆ ಪ್ರೇಮ ಪಯಣ ಸಾಗಿಸುತ್ತಿರುವ ವಿಚಾರ ತಿಳಿದೇ ಇದೆ. ಆದರೆ ಇದೀಗ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ವೈಯಕ್ತಿಕ ಜೀವನ, ಸಿನೆಮಾಗಳ ಬಗ್ಗೆ, ಪೊಟೋಗಳು ಹಾಗೂ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋ ಒಂದು ಹೊಸ ರೂಮರ್‍ ಹುಟ್ಟಿಕೊಳ್ಳಲು ಕಾರಣವಾಗಿದೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳ ವಿಚಾರಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ ಅದರಲ್ಲೂ ನಟಿಯರ ಬ್ರೇಕಪ್, ಲವ್, ಡೇಟಿಂಗ್ ವಿಚಾರಗಳಂತೂ ಮತಷ್ಟು ಜೋರಾಗಿಯೇ ಹರಿದಾಡುತ್ತವೆ. ಸದ್ಯ ಶ್ರುತಿ ಹಾಸನ್ ಮುಂಬೈನಲ್ಲಿದ್ದಾರೆ. ಮುಂಬೈ ಮೂಲ ಡೂಡುಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನನ್ನು ಸುಮಾರು ತಿಂಗಳುಗಳಿಂದ ಪ್ರೀತಿಸುತ್ತಿದ್ದಾರೆ. ಒಂದೇ ಮನೆಯಲ್ಲಿ ಸಹಜೀವನ ಸಾಗಿಸುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ. ಇದೀಗ ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ಶ್ರುತಿ ಹಾಸನ್ ರವರ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲೂ ಸಹ ಶಾಂತಾನು ಭಾಗಿಯಾಗುತ್ತಿರುತ್ತಾರೆ. ಇತ್ತೀಚಿಗೆ ಶ್ರುತಿ ಹಾಸನ್ ತಂಗಿ ಅಕ್ಷರ ಹಾಸನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ಸಹ ಶಾಂತಾನು ಭಾಗಿಯಾಗಿದ್ದರು. ಈ ವೇಳೆ ತೆಗೆದ ಕೆಲವೊಂದು ಪೊಟೋಗಳನ್ನೂ ಸಹ ಆಕೆ ಸೋಷಿಯಲ್ ಮಿಡಿಯಾದ ಮೂಲಕ ಹಂಚಿಕೊಂಡಿದ್ದರು. ಶೀಘ್ರದಲ್ಲೇ ಅವರಿಬ್ಬರೂ ಸಹ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿರುವ ಸಮಯದಲ್ಲಿ ಇದೀಗ ಅವರಿಬ್ಬರು ಬೇರೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಕಾರಣ ಶ್ರುತಿ ಹಂಚಿಕೊಂಡ ಪೋಸ್ಟ್. ಶ್ರುತಿ ಹಾಸನ್ ತಮ್ಮ ಇನ್ಸ್ಟಾ ಪೋಸ್ಟ್ ನಲ್ಲಿ ನನ್ನೊಂದಿಗೆ ನಾನು ಇದ್ದರೇ ಸಂತೋಷ, ನನ್ನ ಅಮೂಲ್ಯವಾದ ಸಮಯ, ಏಕಾಂಗಿತನವನ್ನು ಪ್ರೀತಿಸುತ್ತೇನೆ. ಜೀವನದಲ್ಲಿ ಇಲ್ಲಿಯವರೆಗೂ ಬರಲು ದೊಡ್ಡ ಅದೃಷ್ಟ, ಅದಕ್ಕಾಗಿ ಕೃತಜ್ಞತೆ, ಇದೀಗ ಆ ವಿಚಾರ ನನಗೆ ತಿಳಿದು ಬಂತು ಎಂಬ ಅರ್ಥದಲ್ಲಿ ಕಾಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು. ಸದ್ಯ ಈ ಪೋಸ್ಟ್ ನಿಂದ ಶಾಂತಾನು ಹಾಗೂ ಶ್ರುತಿ ಹಾಸನ್ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಶ್ರುತಿ ಹಾಸನ್ ಸಿಂಗಲ್ ಆಗಿರುವುದೇ ಸಂತೋಷ ಎಂದು ಹೇಳಿದ ಕಾರಣದಿಂದಾಗಿ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸಹ ಶ್ರುತಿ ಹಾಸನ್ ಲಂಡನ್ ಮೂಲದ ಪ್ರಿಯಕರ ಮೈಖೆಲ್ ಜೊತೆಗೆ ಬ್ರೇಕಪ್ ಮಾಡಿಕೊಂಡರು. ಬಳಿಕ ಶಾಂತಾನು ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಆದರೆ ಇದೀಗ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಶ್ರುತಿ ಹಾಸನ್ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Previous articleಹುಲಿ ನಾಲ್ಕು ಹೆಜ್ಜೆ ಹಿಂದೆ ಹಾಕಿದೆ ಎಂದ್ರೆ, ಪುಷ್ಪಾ ರಾಜ್ ಬಂದಂತೆ, ಪುಷ್ಪಾ-2 ಸಿನೆಮಾದ ಡೈಲಾಗ್ ಲೀಕ್……!
Next articleನನ್ನ ಪತಿಗೆ ತಮನ್ನಾ ಅಂದ್ರೆ ತುಂಬಾ ಇಷ್ಟ ಎಂದ ಸೀನಿಯರ್ ನಟಿ ಜಯಮಾಲಿನಿ, ವೈರಲ್ ಆದ ಕಾಮೆಂಟ್ಸ್……!