ಶೀಘ್ರದಲ್ಲೇ ಬಾಲಿವುಡ್ ಗೆ ಸಾಯಿ ಪಲ್ಲವಿ, ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನ್ಯಾಚುರಲ್ ಬ್ಯೂಟಿ….!

ಸೌತ್ ಸಿನಿರಂಗದಲ್ಲಿ ಹೆಚ್ಚು ಗ್ಲಾಮರ್‍ ಶೋ ಮಾಡದೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಒಬ್ಬರಾಗಿದ್ದಾರೆ. ಗಾರ್ಗಿ ಸಿನೆಮಾದ ಬಳಿಕ ಆಕೆಯ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಆಕೆ ಮದುವೆಯಾಗಲಿದ್ದಾರೆ, ಸಿನೆಮಾಗಳಿಂದ ದೂರವಾಗಲಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿದ್ದು, ಇದೀಗ ಮತ್ತೊಂದು ಸುದ್ದಿ ಸಹ ಹರಿದಾಡುತ್ತಿದೆ. ಅದರಂತೆ ಶೀಘ್ರದಲ್ಲೇ ಸಾಯಿ ಪಲ್ಲವಿ ಬಾಲಿವುಡ್ ಸಿನೆಮಾದಲ್ಲಿ ನಟಿಸಲಿದ್ದಾರಂತೆ. ಸೀತೆಯ ಪಾತ್ರಕ್ಕಾಗಿ ಆಕೆಯನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

ನಟಿ ಸಾಯಿಪಲ್ಲವಿ ಗ್ಲಾಮರ್‍ ಪಾತ್ರಗಳಿಂದ ದೂರವಿದ್ದು, ಕಥೆಗೆ ಹಾಗೂ ನಟನೆಗೆ ಪ್ರಾಧಾನ್ಯತೆ ಇರುವಂತಹ ಸಿನೆಮಾಗಳಲ್ಲಿ ನಟಿಸುವ ಮೂಲಕ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ಈಕೆ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ಅಪಾರ ಪ್ರಮಾಣದ ಅಭಿಮಾನಿ ಬಳಗವನನ್ನು ಗಿಟ್ಟಿಸಿಕೊಂಡಿದ್ದಾರೆ. ಆಕೆ ಯಾವುದೇ ಪಾತ್ರದಲ್ಲಿ ಕಾಣಿಸಿಕೊಂಡರೂ ಆ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಾರೆ. ಜೊತೆಗೆ ಆಕೆ ಒಳ್ಳೆಯ ನೃತ್ಯಗಾರ್ತಿಯಾದ ಹಿನ್ನೆಲೆಯಲ್ಲಿ ಮತಷ್ಟು ಸ್ಪೀಡ್ ಆಗಿ ಸ್ಟಾರ್‍ ಆದರು. ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಮೊದಲನೇ ಸಿನೆಮಾದ ಮೂಲಕವೇ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ತೆಲುಗು, ತಮಿಳು ಭಾಷೆಗಳಲ್ಲೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಮೂಲಕ ತುಂಬಾನೆ ಪಾಪ್ಯುಲರ್ ಆದರು.

ಇನ್ನೂ ನಟಿ ಸಾಯಿಪಲ್ಲವಿ ಕೊನೆಯದಾಗಿ ಗಾರ್ಗಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದಾದ ಬಳಿಕ ಆಕೆ ಕಾಲಿವುಡ್ ಸ್ಟಾರ್‍ ನಟ ಕಮಲ್ ಹಾಸನ್ ನಿರ್ಮಾಣದ ಸಿನೆಮಾದಲ್ಲಿ ಶಿವಕಾರ್ತಿಕೇಯನ್ ಸಿನೆಮಾದಲ್ಲಿ ನಟಿಸಲಿದ್ದಾರೆ. ಇದೀಗ ಬಾಲಿವುಡ್ ರಂಗಕ್ಕೂ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದಿನ ವರ್ಷದ ಸೆಪ್ಟೆಂಬರ್‍ ಮಾಹೆಯಲ್ಲಿ ನಿರ್ಮಾಣವಾಗಲಿರುವ ಪೌರಾಣಿಕ ಸಿನೆಮಾದಲ್ಲಿ ಸಾಯಿ ಪಲ್ಲವಿ ಬಣ್ಣ ಹಚ್ಚಲಿದ್ದಾರಂತೆ. ರಾಮಾಯಣಂ ಎಂಬ ಸಿನೆಮಾದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಸಿನೆಮಾದ ಮೂಲಕ ಸಾಯಿ ಪಲ್ಲವಿ ಬಾಲಿವುಡ್ ಗೆ ರಂಗ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ರಾಮನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ರಣಬೀರ್‍ ಗೆ ಜೋಡಿಯಾಗಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ರಾವಣನ ಪಾತ್ರವನ್ನು ಹೃತಿಕ್ ರೋಷನ್ ಪೋಷಿಸಲಿದ್ದಾರಂತೆ. ಇನ್ನೂ ಈ ಸಿನೆಮಾ ಮುಂದಿನ ವರ್ಷ ಸೆಟ್ಟೇರಲಿದೆ. ಈ ಸಿನೆಮಾದಲ್ಲಿ ಸಾಯಿ ಪಲ್ಲವಿ ನಟಿಸುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Previous articleಬ್ಲಾಕ್ ಡ್ರೆಸ್ ನಲ್ಲಿ ಬಾರ್ಬಿ ಡಾಲ್ ನಂತೆ ಕ್ಯೂಟ್ ಆಗಿ ಪೋಸ್ ಕೊಟ್ಟ ಸ್ಟಾರ್ ಕಿಡ್ ಜಾನ್ವಿ ಕಪೂರ್…….!
Next article’ಮೈ ಟೂ ಬೋಡು ಬೇಬಿಸ್’ ಎಂದು ಪೋಸ್ಟ್ ಹಂಚಿಕೊಂಡ ಬಹುಭಾಷ ನಟಿ ಪ್ರಣಿತಾ ಸುಭಾಷ್…!