ಬುಟ್ಟಬೊಮ್ಮ ತೆಗೆದುಕೊಂಡ್ರಾ ಸಂಚಲನಾತ್ಮಕ ನಿರ್ಣಯ, ತನ್ನ ದೇಹದ ಆ ಭಾಗವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಿದ್ದಾರಂತೆ?

ಸೌತ್ ಸಿನಿರಂಗದಲ್ಲಿ ಟಾಪ್ ನಟಿಯರಲ್ಲಿ ಪೂಜಾ ಹೆಗ್ಡೆ ಒಬ್ಬರಾಗಿದ್ದು, ಸ್ಟಾರ್ ನಟರೊಂದಿಗೆ ಅನೇಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆಯ ಕುರಿತಂತೆ ದೊಡ್ಡ ಸುದ್ದಿಯೊಂದು ಸಿನಿ ವಲಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪೂಜಾ ಹೆಗ್ಡೆ ತನ್ನ ದೇಹದಲ್ಲಿನ ಆ ಭಾಗವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಿದ್ದಾರಂತೆ. ತನ್ನ ದೇಹದಲ್ಲಿನ ಆ ಭಾಗದ ಬಗ್ಗೆ ಆಕೆ ಅಪ್ ಸೆಟ್ ಆಗಿದ್ದಾರಂತೆ. ಈ ಕಾರಣದಿಂದಲೇ ಆಕೆ ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದಾರಂತೆ. ಇನ್ನೂ ಪೂಜಾ ತನ್ನ ದೇಹದಲ್ಲಿನ ಯಾವ ಪಾರ್ಟ್‌ಗೆ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎಂಬ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಮುನ್ನುಗ್ಗುತ್ತಿರುವ ಪೂಜಾ ಹೆಗ್ಡೆ ಸಾಲು ಸಾಲು ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಜೊತೆಗೆ ಸಾಲು ಸಾಲು ಫ್ಲಾಪ್ಸ್ ಗಳನ್ನು ಸಹ ಕಾಣುತ್ತಿದ್ದಾರೆ. ಇನ್ನೂ ಬಾಲಿವುಡ್ ನಲ್ಲೂ ಸಹ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ನಲ್ಲೂ ಸಹ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೀಗ ಆಕೆಯ ಕುರಿತ ಸುದ್ದಿಯೊಂದು ಹರಿದಾಡುತ್ತಿದೆ. ಶೀಘ್ರದಲ್ಲೇ ಆಕೆ ಪ್ಲಾಸ್ಟಿಕ್ ಸರ್ಜರಿಗೆ ಸಿದ್ದವಾಗುತ್ತಿದ್ದಾರಂತೆ. ಪೂಜಾ ಕೆರಿಯರ್‍ ಇತ್ತಿಚಿಗೆ ಕೊಂಚ ಹಿಂದೆ ಬೀಳುತ್ತಿದೆ. ಸ್ಟಾರ್‍ ನಟರ ಜೊತೆಗೆ ಸಿನೆಮಾಗಳು ಮಾಡಿದರೂ ಸಹ ಹ್ಯಾಟ್ರಿಕ್ ಸೋಲನ್ನು ಸಹ ಕಂಡರು. ಈ ಕಾರಣದಿಂದ ಆಕೆಯ ಮೇಲೆ ನೆಗೆಟಿವಿಟಿ ಸಹ ಬಂದಿದೆ. ಇದರಿಂದ ಪೂಜಾ ಹೆಗ್ಡೆಯನ್ನು ಐರನ್ ಲೆಗ್ ಎಂದೂ ಸಹ ಟ್ರೋಲ್ ಮಾಡಿದ್ದರು, ಆ ಟ್ರೋಲರ್‍ ಗಳಿಗೆ ಪೂಜಾ ಸಹ ಸ್ಟ್ರಾಂಗ್ ಡೋಸ್ ಕೊಟ್ಟಿದ್ದರು.

ಇನ್ನೂ ಪೂಜಾ ಹೆಗ್ಡೆ ಇದೀಗ ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದಾರಂತೆ. ತನ್ನ ಮೂಗಿನ ಬಗ್ಗೆ ಅನೇಕರು ಟ್ರೋಲ್ ಮಾಡುತ್ತಿದ್ದಾರಂತೆ. ಪೂಜಾಗೆ ತನ್ನ ಮೂಗು ಮೈನಸ್ ಆಗಿದೆಯಂತೆ. ಕೆಲವರಂತೂ ಪೂಜಾರವರಿಗೆ ನೇರವಾಗಿ ಮೂಗಿನ ಬಗ್ಗೆ ಮಾತನಾಡಿದ್ದಾರಂತೆ. ಇದನ್ನು ಕೇಳಿದ ಪೂಜಾ ತುಂಬಾನೆ ಹರ್ಟ್ ಆಗಿದ್ದಾರಂತೆ. ಏನಾದರೂ ಮಾಡಿ ತನ್ನ ಮೂಗನ್ನು ಸುಂದರವಾಗಿ ಬದಲಾವಣೆ ಮಾಡಿಕೊಳ್ಳಲು ಫಿಕ್ಸ್ ಆಗಿದ್ದಾರಂತೆ. ಈ ಕಾರಣಕ್ಕೆ ಆಕೆ ತನ್ನ ಮೂಗಿಗೆ ಸರ್ಜರಿ ಮಾಡಿಸಲು ಸಿದ್ದವಾಗುತ್ತಿದ್ದಾರಂತೆ. ಇನ್ನೂ ಈ ವಿಚಾರ ಅಧಿಕೃತವಾಗಿ ಹೊರಬರದೇ ಇದ್ದರೂ ಸಹ ಈ ಸುದ್ದಿ ಇದೀಗ ಸಿನಿ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಈ ಕುರಿತು ಪೂಜಾ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವರ್ಷದಲ್ಲೇ ಪೂಜಾ ಅಭಿನಯದ ಆಚಾರ್ಯ, ರಾಧೆಶ್ಯಾಮ್, ಬೀಸ್ಟ್ ಮೂರು ಸಿನೆಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ವರ್ಷದ ಪ್ರಾರಂಭದಲ್ಲೇ ಪೂಜಾ ಹೆಗ್ಡೆ ಹ್ಯಾಟ್ರಿಕ್ ಸೋಲು ಕಂಡರು. ಇನ್ನೂ ಇದೀಗ ಟಾಲಿವುಡ್ ನಲ್ಲಿ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾದಲ್ಲಿ ಹಾಗೂ ಬಾಲಿವುಡ್ ನಲ್ಲೂ ಸಹ ಪೂಜಾ ನಟಿಸುತ್ತಿದ್ದಾರೆ. ಅಷ್ಟೇಅಲ್ಲದೇ ಪೂಜಾ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿದ್ದು, ಸಾಲು ಸಾಲು ಪೊಟೋಶೂಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Previous articleಕಲರ್ಸ್ ಕನ್ನಡ ಚಾನೆಲ್ ನ ಆ ಶೋ ನಲ್ಲಿ ಬರಲು ರಮ್ಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ?
Next articleಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ಮರಣದ ಬಳಿಕ ಮೊದಲ ಬಾರಿ ಎಮೋಷನಲ್ ಪೋಸ್ಟ್….!