ಸೌತ್ ಸಿನಿರಂಗದಲ್ಲಿ ಹೋಮ್ಲಿ ಬ್ಯೂಟಿಯಾಗಿ ಕ್ರೇಜ್ ಪಡೆದುಕೊಂಡ ಮೀರಾ ಜಾಸ್ಮಿನ್ ಸೆಕೆಂಡ್ ಇನ್ನಿಂಗ್ಸ್ ನಲ್ಲಂತೂ ಹಾಟ್ ಅವತಾರ ತಾಳಿದ್ದಾರೆ. ಸಿನೆಮಾಗಳಲ್ಲಿ ರಿಎಂಟ್ರಿಗಾಗಿ ತಾನು ಗ್ಲಾಮರ್ ಪಾತ್ರಗಳಲ್ಲೂ ಸಹ ನಟಿಸಬಲ್ಲೇ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುವ ಮೀರಾ, ಇದೀಗ ಕುದುರೆಯನ್ನೇರಿ ಸ್ಟೈಲಿಷ್ ಲುಕ್ಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
ನಟಿ ಮೀರಾ ಜಾಸ್ಮೀನ್ ಕುದುರೆಯನ್ನೇರಿ ರೈಡಿಂಗ್ ಮಾಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಟೈಲಿಷ್ ಲುಕ್ಸ್ ನೊಂಡಿದೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ತಲೆಯ ಮೇಲೆ ಕೌ ಭಾಯ್ ಹ್ಯಾಟ್ ಧರಿಸಿ, ಚೆಕ್ಸ್ ಶರ್ಟ್ ಧರಿಸಿದ್ದಾರೆ. ವೈಟ್ ಟಿ ಶರ್ಟ್ ಧರಿಸಿ, ಚೆಕ್ಸ್ ಶರ್ಟ್‌ನ ಬಟನ್ಸ್ ಬಿಚ್ಚಿ, ಬ್ಲಾಕ್ ಟೈಟ್ ಜೀನ್ಸ್ ನಲ್ಲಿ ಮೈಂಡ್ ಬ್ಲಾಕ್ ಮಾಡುವಂತಹ ಪೋಸ್ ಕೊಟ್ಟಿದ್ದಾರೆ. ಈ ಪೊಟೊಗಳನ್ನು ಆಕೆ ತನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ. ಇನ್ನೂ ಮೀರಾ ಜಾಸ್ಮೀನ್ ಈ ಪೋಟೊಗಳಲ್ಲಿ ಸಖತ್ ಹಾಟ್ ಆಗಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ತನ್ನ ಮೊದಲಿನ ಕ್ರೇಜ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಆಕೆ ತುಂಬಾನೆ ಕಷ್ಟಪಡುತ್ತಿದ್ದಾರೆ. ಸೆಕೆಂಡ್ ಎಂಟ್ರಿ ನಿಮಿತ್ತ ಆಕೆ ಮಲಯಾಳಂ ಸಿನೆಮಾದಲ್ಲಿ ನಟಿಸಿದರು. ಆದರೆ ಆ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಇದೀಗ ಆಕೆ ಸೌತ್ ನ ಎಲ್ಲಾ ಭಾಷೆಗಳಲ್ಲಿ ನಟಿಸಲು ಪ್ರಯತ್ನ ಮಾಡುತ್ತಿದ್ದಾರೆ.
ನಟಿ ಮೀರಾ ಜಾಸ್ಮೀನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಪೊಟೋಶೂಟ್ಸ್ ಶೇರ್ ಮಾಡುತ್ತಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸಂಪ್ರದಾಯಿಕವಾಗಿ ಕಾಣಿಸಿಕೊಂಡ ಈಕೆ ಇದೀಗ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೀರಾ ಜಾಸ್ಮೀನ್ ರನ್, ಪಂದೆಂಕೋಡಿ, ಭದ್ರ ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿಟ್ಟಿಸಿಕೊಂಡ ಈಕೆ ಎಲ್ಲಾ ಸಿನೆಮಾಗಳಲ್ಲೂ ಸಹ ಹೋಮ್ಲಿಯಾಗಿಯೇ ಕಾಣಿಸಿಕೊಂಡರು. ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವಾದ ಈಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ನಟಿಸಲು ನಾನು ಸಿದ್ದವಾಗಿದ್ದೇನೆ ಎಂದು ಸಾರಲು ಸಾಲು ಸಾಲು ಪೊಟೋಶೂಟ್ಸ್ ಮೂಲಕ ನಿರ್ಮಾಪಕರು ಹಾಗೂ ನಿರ್ದೇಶಕರ ಗಮನ ಸೆಳೆಯುತ್ತಿದ್ದಾರೆ.
ಇನ್ನೂ ನಟಿ ಮೀರಾ ಜಾಸ್ಮಿನ್ 2016ರ ಬಳಿಕ ಸಿನೆಮಾಗಳಿಂದ ದೂರವಾದರು. 2014 ರಲ್ಲಿ ಅನೀಲ್ ಜಾನ್ ಎಂಬಾತನೊಂದಿಗೆ ಮದುವೆಯಾಗಿ ದುಬೈನಲ್ಲೇ ಸೆಟಲ್ ಆದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಪತಿಯೊಂದೊಗೆ ವಿಬೇದಗಳು ಹುಟ್ಟಿಕೊಂಡ ಕಾರಣ ಆಕೆ ಆತನೊಂದಿಗೆ ದೂರವಾದರು ಎನ್ನಲಾಗುತ್ತಿದೆ. ಇದೀಗ ಆಕೆ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಟ್ಟಿದ್ದು, ತೆಲುಗು ಸಿನೆಮಾಗಳಲ್ಲೂ ಸಹ ನಟಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
