ಮಗನೊಂದಿಗೆ ಸಂತೋಷದ ಕ್ಷಣಗಳನ್ನು ಸಂಭ್ರಮಿಸುತ್ತಿರುವ ಕಾಜಲ್ ಅಗರ್ವಾಲ್ ವಿಡಿಯೋ ವೈರಲ್…!

ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡ ಕಾಜಲ್ ಅಗರ್ವಾಲ್ ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಸಿನೆಮಾಗಳ ಜೊತೆಗೆ ಮಗನ ಲಾಲನೆ ಪಾಲನೆ ಎರಡನ್ನೂ ಸಮರೋಪಾಧಿಯಲ್ಲಿ ಮುನ್ನೆಡೆಸುತ್ತಿದ್ದಾರೆ. ಸದಾ ತನ್ನ ಮಗನೊಂದಿಗೆ ಸಂಭ್ರಮಿಸುವಂತಹ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು, ಇದೀಗ ಕಾಜಲ್ ಅಗರ್ವಾಲ್ ತಮ್ಮ ಮಗನನ್ನು ಎತ್ತಿಕೊಂಡು ಪ್ರೀತಿಯಿಂದ ಮುದ್ದಾಡುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಕಾಜಲ್ ಅಗರ್ವಾಲ್ ಮದುವೆಯಾದ ಬಳಿಕ ಪತಿ ಹಾಗೂ ಮಗನೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಕಳೆದ 2020 ಅಕ್ಟೋಬರ್‍ 30 ರಂದು ಮುಂಬೈ ಮೂಲದ ಖ್ಯಾತ ಉದ್ಯಮಿ ಗೌತಮ್ ಕಿಚ್ಲು ಎಂಬಾತನೊಂದಿಗೆ ವಿವಾಹವಾದರು. ಕುಟುಂಬಸ್ಥರು ಹಾಗೂ ಹತ್ತಿರದವರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಕೆಲವೇ ತಿಂಗಳಲ್ಲೇ ಆಕೆ ಗರ್ಭಿಣಿಯಾದ ವಿಚಾರವನ್ನು ಸಹ ಅನೌನ್ಸ ಮಾಡಿದರು. ಗರ್ಭಿಣಿಯಾದ ಕಾರಣದಿಂದ ಕಾಜಲ್ ಸಿನೆಮಾಗಳಿಂದ ದೂರವುಳಿದರು. ಆದರೆ ತಮ್ಮ ಅಭಿಮಾನಿಗಳಿಗಾಗಿ ತಮ್ಮ ಅಪ್ಡೇಟ್ ಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ನೀಡುತ್ತಿದ್ದರು. ಬೇಬಿ ಬಂಪ್ ಪೊಟೋಸ್ ಸೇರಿದಂತೆ ತಮ್ಮ ವೈಯುಕ್ತಿಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಕಳೆದ ಏಪ್ರಿಲ್ 19 ರಂದು ಮುದ್ದಾದ ಗಂಡು ಮಗುವಿಗೆ ಜನ್ಮಕೊಟ್ಟರು.

ಮಗು ಜನಿಸಿದ ಬಳಿಕ ಪತಿ ಹಾಗೂ ಮಗನೊಂದಿಗೆ ಸಂತೊಷದಿಂದ ಜೀವನ ಸಾಗಿಸುತ್ತಿದ್ದಾರೆ ಕಾಜಲ್ ಅಗರ್ವಾಲ್. ಮಗನಿಗೆ ನೀಲ್ ಕಿಚ್ಲು ಎಂದು ನಾಮಕರಣ ಮಾಡಿದ್ದು, ಮಗನ ಮುಖವನ್ನು ಪ್ರದರ್ಶನ ಮಾಡದೇ ಗೌಪ್ಯವಾಗಿಟ್ಟಿದ್ದರು. ವೀಕೆಂಡ್ ನಿಮಿತ್ತ ಕಾಜಲ್ ಪತಿ ಗೌತಮ್ ಕಿಚ್ಲು, ಮಗ ನೀಲ್ ಕಿಚ್ಲು ಜೊತೆಗೆ ಹ್ಯಾಪಿಯಾಗಿ ಸಮಯ ಕಳೆದಿದ್ದಾರೆ. ಮಗನನ್ನು ನೋಡುತ್ತಾ ತುಂಬಾ ಆನಂದಿಸಿದ್ದಾರೆ. ಮಗನನ್ನು ಎತ್ತಿಕೊಂಡು ಸಂತೋಷದಿಂದ ಇದ್ದಾರೆ. ಈ ಸಂಬಂಧ ಕಾಜಲ್ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕಾಜಲ್ ಅಗರ್ವಾಲ್ ಎಷ್ಟು ಸಂತೋಷವಾಗಿದ್ದಾರೆ ಎಂಬುದನ್ನು ಆ ವಿಡಿಯೋ ನೋಡಿದರೇ ತಿಳಿಯಬಹುದಾಗಿದೆ. ಕಾಜಲ್ ಅಭಿಮಾನಿಗಳೂ ಸಹ ಆಕೆಯ ಸಂತೋಷವನ್ನ ನೋಡಿ ತಾವು ಸಹ ಸಂತೋಷದಿಂದಲೇ ವಿಡಿಯೋ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಸೌತ್ ಸಿನಿರಂಗದ ಖ್ಯಾತ ನಿರ್ದೇಶಕ ಶಂಕರ್‍ ಹಾಗೂ ಖ್ಯಾತ ನಟ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಇಂಡಿಯನ್-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟೀಂಗ್ ನಲ್ಲೂ ಸಹ ಕಾಜಲ್ ಭಾಗವಹಿಸುತ್ತಿದ್ದಾರೆ.  ಮತಷ್ಟು ಅವಕಾಶಗಳೂ ಸಹ ಹರಿದು ಬರುತ್ತಿವೆ ಎನ್ನಲಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಬ್ಯುಸಿಯಾಗಿದ್ದು, ಅನೇಕ ಪ್ರಾಡಕ್ಟ್ ಗಳನ್ನು ಸಹ ಪ್ರಮೋಟ್ ಮಾಡುತ್ತಿರುತ್ತಾರೆ.

Previous articleಹೊಗಳಿಕೆಗಾಗಿ ನಾನು ಪರಿತಪಿಸುವುದಿಲ್ಲ ಎಂದ ತಾಪ್ಸಿ ಪನ್ನು, ವೈರಲ್ ಆದ ಕಾಮೆಂಟ್ ಗಳು…..!
Next articleಪತ್ನಿಯೊಂದಿಗೆ ರೊಮ್ಯಾಂಟಿಕ್ ಪೊಟೋ ಹಂಚಿಕೊಂಡ ಜೂನಿಯರ್ ಎನ್.ಟಿ.ಆರ್, ಪ್ರೀತಿಯ ಅಪ್ಪುಗೆ ಮಾಡಿದ ಪೊಟೋ ವೈರಲ್….!