ಹಾರರ್ ಮೂವಿಯಲ್ಲಿ ಅವಕಾಶ ಪಡೆದುಕೊಂಡ ಕಾಜಲ್, ಸಿನಿರಸಿಕರನ್ನು ಭಯಪಡಿಸಲು ಸಿದ್ದವಾಗುತ್ತಿದ್ದಾರೆ ಕಾಜಲ್ ಅಗರ್ವಾಲ್…!

ಟಾಲಿವುಡ್ ನಲ್ಲಿ ಚಂದಮಾಮ ಎಂದೇ ಕರೆಯಲಾಗುವ ಕಾಜಲ್ ಅಗರ್ವಾಲ್ ಮದುವೆಯ ಬಳಿಕ ಸಿನೆಮಾಗಳಿಂದ ದೂರ ಉಳಿದಿದ್ದರು. ಇತ್ತೀಚಿಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ಕೊಟ್ಟರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈಗಾಗಲೇ ಆಕೆ ಕಾಲಿವುಡ್ ಸ್ಟಾರ್‍ ನಿರ್ದೇಶಕ ಶಂಕರ್‍ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನ ಇಂಡಿಯನ್-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ನಲ್ಲೂ ಸಹ ಕಾಜಲ್ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇದೀಗ ಮತ್ತೊಂದು ಅವಕಾಶವನ್ನು ಸಹ ಕಾಜಲ್ ಪಡೆದುಕೊಂಡಿದ್ದು, ಆಕೆ ಹಾರರ್‍ ಸಿನೆಮಾದ ಮೂಲಕ ಎಲ್ಲರನ್ನೂ ಭಯಪಡಿಸಲು ಸಿದ್ದವಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಯಾವ ಸಿನೆಮಾ ಎಂಬ ವಿಚಾರಕ್ಕೆ ಬಂದರೇ,

ಬಹುಭಾಷ ನಟಿ ಕಾಜಲ್ ಅಗರ್ವಾಲ್ ಲಕ್ಷ್ಮೀ ಕಲ್ಯಾಣಂ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಅನೇಕ ಭಾಷೆಗಳಲ್ಲಿ ನಟಿಸುವ ಅವಕಾಶಗಳನ್ನು ಸಹ ಪಡೆದುಕೊಂಡರು. ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಮದುವೆಯ ಬಳಿಕ ಕಾಜಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಕೆಲವೊಂದು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕಾಜಲ್ ಫಿಟ್ ನೆಸ್ ಕಾಪಾಡಿಕೊಳ್ಳಲು ಹಾರ್ಸ್ ರೇಸ್, ವರ್ಕೌಟ್ ಸಹ ಶುರು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ಪೊಟೋಗಳು, ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಇದೀಗ ಕಾಜಲ್ ಮತ್ತೊಂದು ಹಾರರ್‍ ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರಂತೆ. ಸದ್ಯ ಈ ವಿಚಾರ ತಿಳಿದ ಕಾಜಲ್ ಅಭಿಮಾನಿಗಳೂ ಸಹ ಪುಲ್ ಎಕ್ಸೈಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ 2005 ರಲ್ಲಿ ತೆರೆಕಂಡ ಚಂದ್ರಮುಖಿ ಸಿನೆಮಾ ಇಂದಿಗೂ ಸಹ ಸಿನಿರಸಿಕರಲ್ಲಿ ಬೇರೂರಿದೆ ಎನ್ನಬಹುದು.  ಈಗಾಗಲೇ ಈ ಸಿನೆಮಾದ ಸೀಕ್ವೆಲ್ ಬಗ್ಗೆ ಕ್ಲಾರಿಟಿ ಬಂದಿದ್ದು, ಈ ಸಿನೆಮಾದ ಶೂಟಿಂಗ್ ಕೆಲಸಗಳು ಸಹ ಶುರುವಾಗಿದೆ ಎನ್ನಲಾಗುತ್ತಿದೆ. ಚಂದ್ರಮುಖಿ ಸಿನೆಮಾದಲ್ಲಿ ರಜನಿಕಾಂತ್, ಜ್ಯೋತಿಕಾ ಹಾಗೂ ನಯನತಾರ ಅಭಿನಯಿಸಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ಇದೀಗ ಇದರ ಸೀಕ್ವೆಲ್ ಸಿದ್ದವಾಗುತ್ತಿದೆ. ಆದರೆ ಈ ಸಿಕ್ವೆಲ್ ನಲ್ಲಿ ರಜನಿಕಾಂತ್ ಬದಲಿಗೆ ರಾಘವ ಲಾರೆನ್ಸ್ ನಟಿಸಲಿದ್ದಾರೆ. ಇದೀಗ ಈ ಸಿನೆಮಾದಲ್ಲಿ ರಾಘವ ಲಾರೆನ್ಸ್ ಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸಲಿದ್ದಾರಂತೆ. ಪಿ.ವಾಸು ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನೆಮಾದಲ್ಲಿ ಕಾಜಲ್ ಯಾವ ರೀತಿಯಲ್ಲಿ ಸಿನಿರಸಿಕರನ್ನು ಆಕರ್ಷಣೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ಈ ಸಿನೆಮಾದ ಮೊದಲನೇ ಶೆಡ್ಯೂಲ್ಡ್ ಸಹ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ.

ಸಿನೆಮಾಗಳ ಜೊತೆಗೆ ಕಾಜಲ್ ತನ್ನ ತಂಗಿಯೊಂದಿಗೆ ಹೊಸ ಬ್ಯುಸಿನೆಸ್ ಅನ್ನು ಸಹ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದ ಮೂಲಕವೂ ಸಹ ಸಂಪಾದನೆ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದ ಮೂಲಕ ಅನೇಕ ಪ್ರಾಡಕ್ಟ್ ಗಳನ್ನು ಸಹ ಪ್ರಮೋಟ್ ಮಾಡುತ್ತಿರುತ್ತಾರೆ. ಆಗಾಗ ಮಗನೊಂದಿಗೆ ತುಂಟಾಟದ ವಿಡಿಯೋ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅದರೊಂದಿಗೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ.

Previous articleಸೌತ್ ಸಿನಿರಂಗದ ಸ್ಟಾರ್ ನಟಿ ಪೂಜಾ ಹೆಗ್ಡೆಗೆ ಹುಟ್ಟುಹಬ್ಬದ ಸಂಭ್ರಮ, 10 ಲಕ್ಷ ಸಂಭಾವನೆ ಪಡೆಯುತ್ತಿದ್ದ ನಟಿ ಈಗ ಟಾಪ್ ನಟಿ..!
Next articleNBK107 ಸಿನೆಮಾದ ಸಾಂಗ್ ವಿಡಿಯೋ ವೈರಲ್, ಬಿಡುಗಡೆಗೂ ಮುಂಚೆಯೇ ಸಖತ್ ಸೌಂಡ್ ಮಾಡುತ್ತಿದೆ…!