ಅಂತರಾಷ್ಟ್ರೀಯ 75ನೇ ಕಾನ್ಸ್ ಫಿಲ್ಮಂ ಫೆಸ್ಟಿವಲ್ ನಲ್ಲಿ ದಕ್ಷಿಣ ಭಾರತದ ಹಲವು ನಟಿಯರಿಗೆ ಅವಕಾಶ ದೊರೆತಿದೆ. ಪೂಜಾ ಹೆಗ್ಡೆ, ನಯನತಾರಾ ಹಾಗೂ ತಮ್ಮನ್ನಾ ಭಾಟೀಯಾ ರವರಿಗೆ ಈ ಫೆಸ್ಟಿವಲ್ ನಲ್ಲಿ ಭಾಗವಿಸಲು ಅವಕಾಶ ದೊರೆತಿದೆ. ಜೊತೆಗೆ ಅಕ್ಷಯ್ ಕುಮಾರ್, ಎ.ಆರ್.ರೆಹಮಾನ್, ದೀಪಿಕಾ ಪಡುಕೊಣೆ ಸೇರಿದಂತೆ ಹಲವರು ಈ ಚಿತ್ರೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಮೇ.17 ರಂದು ಈ ಕಾನ್ ಫಿಲ್ಮಂ ಫೆಸ್ಟಿವಲ್ ಪ್ರಾರಂಭವಾಗಲಿದ್ದು, ಇದರಲ್ಲಿ ಅನೇಕ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅನೇಕರು ತಮ್ಮ ಸಿನೆಮಾಗಳು ಈ ಅಂತರಾಷ್ಟ್ರೀಯ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಾಣಬೇಕೆಂದು ಆಸೆ ಪಡುತ್ತಾರೆ. ಇನ್ನೂ ಈ ಬಾರಿ 21 ಸಿನೆಮಾಗಳು ಇಲ್ಲಿ ಪ್ರದರ್ಶನವಾಗಲಿದೆ. ವಿಶ್ವದ ಸಿನೆಮಾ ಪ್ರಿಯರು ಈ ಫೆಸ್ಟಿವಲ್ ಗಾಗಿ ಕಾಯುತ್ತಿರುತ್ತಾರೆ. ಈ ಹಿಂದೆ ನಡೆದ ಈ ಫೆಸ್ಟಿವಲ್ ನಲ್ಲಿ ಬಾಲಿವುಡ್ ರಂಗದ ಜನಪ್ರಿಯ ಕಲಾವಿದರು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದರು. ಈ ಬಾರಿ ಸೌತ್ ಇಂಡಿಯಾ ನಟಿಯರಿಗೂ ಸಹ ಮನ್ನಣೆ ನೀಡಿದ್ದು, ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.
ಕಾನ್ ಫಿಲ್ಮಂ ಫೆಸ್ಟಿವಲ್ ನಲ್ಲಿ ದಕ್ಷಿಣ ಭಾರತದ ಬಹುಬೇಡಿಕೆ ನಟಿಯರಾದ ನಯನತಾರಾ, ಪೂಜಾ ಹೆಗ್ಡೆ, ತಮನ್ನ ರವರುಗಳು ಭಾಗಿಯಾಗಿದ್ದಾರೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಪುಲ್ ಖುಷ್ ಆಗಿದ್ದು, ಫೆಸ್ಟಿವಲ್ ನಲ್ಲಿ ಅವರು ಹೇಗೆ ಕಾಣಲಿದ್ದಾರೆ ಎಂಬ ಕುತೂಹಲ ಅವರಲ್ಲಿ ಮೂಡಿದೆ. ಪಾನ್ ಇಂಡಿಯಾ ಸ್ಟಾರ್ ಗಳಾಗಿ ಖ್ಯಾತಿ ಪಡೆದ ಈ ಮೂವರು ನಟಿಯರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ನಲ್ಲಿ ಭಾಗಿಯಾಗುವ ಕುರಿತು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟ್ವೀಟ್ ಮಾಡಿದೆ.
ಸದ್ಯ ಈ ಮೂವರು ನಟಿಯರು ಸಿನೆಮಾ ಕೆಲಸಗಳ ನಿಮಿತ್ತ ಬ್ಯುಸಿಯಾಗಿದ್ದು, ಬಿಡುವು ಮಾಡಿಕೊಂಡು ಈ ಚಿತ್ರೋತ್ಸವದಲ್ಲಿ ಭಾಗಿಯಾಗಬೇಕಿದೆ. ಇನ್ನೂ ಈ ಮೂವರು ನಟಿಯರ ಜೊತೆ ಅಕ್ಷಯ್ ಕುಮಾರ್, ಎ.ಆರ್.ರೆಹಮಾನ್, ದೀಪಿಕಾ ಪಡುಕೋಣೆ, ಕಿರುತೆರೆ ನಟಿ ಹೀನಾ ಖಾನ್ ಸೇರಿದಂತೆ ಹಲವು ಭಾಗಿಯಾಗಲಿದ್ದಾರೆ. ಈ ಕಾನ್ ಫಿಲ್ಮಂ ಫೆಸ್ಟಿವಲ್ ಇತಿಹಾಸದಲ್ಲೆ ಮೊದಲ ಬಾರಿಗೆ ಸೌತ್ ಇಂಡಿಯಾ ಸಿನಿರಂಗದ ನಟಿಯರಿಗೆ ಅವಕಾಶ ದೊರೆತಿರುವುದು ವಿಶೇಷವಾಗಿದೆ. ಇನ್ನೂ ಈ ಫೆಸ್ಟಿವಲ್ ಮೇ.17 ರಂದಿ ಪ್ರಾರಂಭವಾಗಿ ಮೇ.28 ರಂದು ಪೂರ್ಣಗೊಳ್ಳಲಿದೆ.
ಇನ್ನೂ ಮತ್ತೊಂದು ಸಂತಸದ ವಿಚಾರವೆಂದರೇ ಈ ಬಾರಿ ನಡೆಯುವ ಕಾನ್ ಚಿತ್ರೋತ್ಸವದಲ್ಲಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿದ್ದಾರೆ. ಮೊದಲ ಬಾರಿಗೆ ಈಕೆ ಜ್ಯೂರಿ ತಂಡ ಸದ್ಯರಾಗಿದ್ದು, ಇದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಇನ್ನೂ ಈ ಹಿಂದೆ ವಿದ್ಯಾ ಬಾಲನ್, ಶರ್ಮಿಳಾ ಟಾಗೋರ್, ಐಶ್ವರ್ಯಾ ರೈ ಮೊದಲಾದವರು ಜ್ಯೂರಿಗಳಾಗಿ ಕೆಲಸ ಮಾಡಿದ್ದರು. ಈ ಬಾರಿ ದೀಪಿಕಾ ಪಡುಕೋಣೆ ಈ ಅವಕಾಶ ಪಡೆದುಕೊಂಡಿದ್ದಾರೆ.